' ನನ್ನ ಮಗ' ರಾಹುಲ್ ಜನ್ಮ ಸಂದರ್ಭ ಕರ್ತವ್ಯದಲ್ಲಿದ್ದ ನರ್ಸ್ ಕೊಟ್ಟ ಸ್ವೀಟ್ ಬಾಕ್ಸ್!

By Suvarna NewsFirst Published Aug 17, 2021, 10:47 PM IST
Highlights

* ಮತ್ತೊಬ್ಬರು  ತಾಯಿಯ ಭೇಟಿಯಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
*ರಾಹುಲ್ ಗಾಂಧಿ ಜನನದ ಸಂದರ್ಭ ಡ್ಯೂಟಿಯಲ್ಲಿದ್ದ ನರ್ಸ್ ರಾಜಮ್ಮ
* ಕೇರಳದಲ್ಲೊಂದು ಭಾವಸ್ಪರ್ಶಿ ದೃಶ್ಯ

ವಯನಾಡು (ಕೇರಳ) (ಆ. 17) ಕೇರಳದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮತ್ತೊಬ್ಬರು ಅಮ್ಮ ಸಿಕ್ಕಿದ್ದಾರೆ. ರಾಹುಲ್ ಗಾಂಧಿಯ ಜನ್ಮದ ಸಂದರ್ಭ ಕರ್ತವ್ಯದಲ್ಲಿದ್ದ ನರ್ಸ್ ರಾಹುಲ್ ಅವರನ್ನು ಭೇಟಿ ಮಾಡಿ ಪುತ್ರ ಪ್ರೀತಿ ತೋರಿಸಿದ್ದಾರೆ.

ನಾಯಕ ರಾಹುಲ್​ ಗಾಂಧಿ ಹುಟ್ಟಿದ ಕ್ಷಣದಲ್ಲಿ ಅವರನ್ನು ಎತ್ತಿಕೊಂಡು ಮುದ್ದಾಡಿದವರು ನರ್ಸ್​​ ರಾಜಮ್ಮ.  ವಯನಾಡು ಸಂಸದ ರಾಹುಲ್ ಭೇಟಿಯಾಗಿದ್ದು, ಅವರೊಂದಿಗಿನ ಕ್ಷಣಗಳನ್ನು ಕೇರಳ ಕಾಂಗ್ರೆಸ್​ ಟ್ವಿಟರ್​ ಖಾತೆ ಹಂಚಿಕೊಂಡಿದೆ.

ರಾಹುಲ್ ಅವರನ್ನು ಪ್ರೀತಿಯಿಂದಲೇ ಮಾತನಾಡಿಸಿದ ರಾಜಮ್ಮ , ಅಮ್ಮ ಹೇಗಿದ್ದಾರೆ, ಸಹೋದರಿ ಹೇಗಿದ್ದಾರೆ ಎಂದು ವಿಚಾರಿಸಿದ್ದಾರೆ. ನಿಮಗೆ ನನ್ನಿಂದ ತೊಂದರೆ ಆದರೆ ಸಾರಿ.. ಮನೆಯಿಂದ ಏನೇನೋ ತಂದು ಕೊಡಬೇಕು ಅಂಥ ಮಾಡಿದ್ದೆ ಆದರೆ ಸಾಧ್ಯವಾಗಿಲ್ಲ ಕ್ಷಮೆ ಇರಲಿ ಎಂದು ಕೇಳಿಕೊಂಡಿದ್ದಾರೆ.

ಅಷ್ಟಕ್ಕೂ ರಾಹುಲ್ ಟ್ವಿಟರ್ ಖಾತೆಗೆ ಏನಾಗಿತ್ತು?

ಹಿರಿಯ ವ್ಯಕ್ತಿಯ ಮಾತನ್ನು ಆಲಿಸಿದ ರಾಹುಲ್, ಏನೂ ತೊಂದರೆ ಇಲ್ಲ.. ಹುಷಾರಾಗಿರಿ ಎಂದು ಪ ಪ್ರೀತಿ ವ್ಯಕ್ತಪಡಿಸಿದ್ದಾರೆ.  ರಾಹುಲ್ ಕೈಗೆ ಸ್ವೀಟ್​ ಬಾಕ್ಸ್​ ಇಟ್ಟು ಸಂತಸ ವ್ಯಕ್ತಪಡಿಸಿದ ಮಹಿಳೆ ಪಟ ಪಟ ಅಂಥ ಮಾತನಾಡಿದ್ದಾರೆ.

ಸುಮಾರು 51 ವರ್ಷಗಳ ಹಿಂದಿನ ಘಟನೆ ಈಗ ಮತ್ತೆ ನೆನಪಿಗೆ ಬಂದಿದೆ.   ಜೂನ್​ 15, 1970ರಂದು ದೆಹಲಿಯ ಹೋಲಿ ಆಸ್ಪತ್ರೆಯಲ್ಲಿ ರಾಹುಲ್ ಜನಿಸಿದ್ದರು.  ಆ ವೇಳೆ ರಾಜಮ್ಮ ಅಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಕೇರಳದಲ್ಲಿ ಪಕ್ಷ ಸಂಘಟನೆ ಸಂಬಂಧ ರಾಹುಲ್ ಗಾಂಧಿ ಪ್ರವಾಸ ನಡೆಸಿದ್ದಾರೆ.

The wholesome love and affection from Rajamma Amma who was a nurse at Delhi’s holy family hospital where
Shri was born. pic.twitter.com/fMCDNIsUio

— Congress Kerala (@INCKerala)

 

 

click me!