ಇಂಜಿನಿಯರಿಂಗ್‌ ಕೆಲಸ ತೊರೆದು ಬಿರಿಯಾನಿ ಶಾಪ್ ಇಟ್ಟ ಯುವಕರು

By Suvarna News  |  First Published Mar 10, 2022, 1:17 PM IST
  • ಕಡಿಮೆ ಸಂಬಳದಿಂದ ಅಸಮಾಧಾನಗೊಂಡಿದ್ದ ಯುವಕರು
  • ಬೇಸರಿಸುತ್ತಾ ಕೂರದೇ ಸ್ವಂತ ಉದ್ಯಮ ಸ್ಥಾಪನೆ
  • ವ್ರತ್ತಿಗಿಂತ ಬಿರಿಯಾನಿಯಲ್ಲೇ ಹೆಚ್ಚು ಸಂಪಾದನೆ

ಸೋನಿಪತ್‌(ಮಾ.10): ಹರ್ಯಾಣದ ಇಬ್ಬರು ಇಂಜಿನಿಯರ್‌ಗಳು ಕೆಲಸ ತೊರೆದು ಬೀದಿ ಬದಿ ತರಕಾರಿ ಬಿರಿಯಾನಿ ಮಾರಾಟಕ್ಕೆ ಇಳಿದಿದ್ದಾರೆ. ತಮ್ಮ ಕೆಲಸದಿಂದಲೂ ಹೆಚ್ಚು ಸಂಪಾದನೆ ಈ  ಬಿರಿಯಾನಿ ಮಾರಾಟದಲ್ಲಿ ಬರುತ್ತಿದೆ ಎಂದು ಅವರು ಹೇಳಿದ್ದಾರೆ. ಮನಸ್ಸಿದ್ದಲ್ಲಿ ಮಾರ್ಗ ಎಂಬಂತೆ ಕಂಪನಿ ನೀಡುವ ಕಡಿಮೆ ಸಂಬಳದಿಂದ ಅತೃಪ್ತಗೊಂಡ ಇಬ್ಬರು ಯುವಕರು ತಮ್ಮ ಇಂಜಿಯರ್‌ ಕೆಲಸ ತೊರೆದು ಬೀದಿ ಬದಿ ವೆಜ್‌ ಬಿರಿಯಾನಿ ವ್ಯಾಪಾರ ಶುರು ಮಾಡಿದ್ದು, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ತಮ್ಮ ಪ್ರಸ್ತುತ ಕೆಲಸದಲ್ಲಿ ಬರುವ ಸಂಬಳದಿಂದ ತಾವು ಸಂತೋಷವಾಗಿಲ್ಲ ಎಂದು ಅರಿತು ರೋಹಿತ್ ಮತ್ತು ಸಚಿನ್ ಎಂಬ ಇಬ್ಬರು ಎಂಜಿನಿಯರ್‌ಗಳು ಸೋನಿಪತ್‌ನಲ್ಲಿ (Sonipat) ಇಂಜಿನಿಯರ್ಸ್ ವೆಜ್ ಬಿರಿಯಾನಿ (vegetable biryani) ಎಂಬ ಹೆಸರಿನ ಬಿರಿಯಾನಿ ಸ್ಟಾಲ್ ಸ್ಥಾಪಿಸಿದ್ದಾರೆ. 

ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗಿನ  ಇಂಜಿನಿಯರಿಂಗ್‌ ವೃತ್ತಿಗಿಂತ ಈ ಕೆಲಸ ಚೆನ್ನಾಗಿದೆ ಎಂದು ಈ ಹರಿಯಾಣದ (Haryana) ಯುವಕರು ಹೇಳಿದ್ದಾರೆ. ಇಬ್ಬರೂ ಇಂಜಿನಿಯರಿಂಗ್ ಓದಿದ್ದು 4-5 ವರ್ಷ. ರೋಹಿತ್ (Rohit) ಪಾಲಿಟೆಕ್ನಿಕ್ ವಿದ್ಯಾರ್ಥಿಯಾಗಿದ್ದು, ಸಚಿನ್  (Sachin) ಬಿಟೆಕ್ ಓದಿದ್ದರು. ಆದರೆ ಓದಿದ್ದಕ್ಕೆ ಪ್ರತಿಯಾಗಿ ಫಲ ಸಿಕ್ಕದ ಪರಿಣಾಮ ಬೇಸರಗೊಂಡಿದ್ದ ಯುವಕರು ಬೇಸರಿಸುತ್ತಾ ಕೂರದೇ ತಮ್ಮ ಕೆಲಸವನ್ನು ತೊರೆದು ತಮ್ಮದೇ ಆದ ಉದ್ಯಮವನ್ನು ಪ್ರಾರಂಭಿಸಿದ್ದಾರೆ. ಇದರಿಂದ ಒಳ್ಳೆ ಸಂಪಾದನೆ ಇದೆ ಎಂದು ಹೇಳುವ ಯುವಕರು ಇದರಿಂದ ಸಾಕಷ್ಟು ಖುಷಿಯಾಗಿದ್ದಾರೆ. ಇವರ ಸ್ಟಾಲ್ ಸೋನಿಪತ್ ಮತ್ತು ಇತರ ಕೆಲವು ಐಷಾರಾಮಿ ಪ್ರದೇಶಗಳಲ್ಲಿಯೂ ಇದೆ.

Tap to resize

Latest Videos

Bagalkot: ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್, ವೀಕೆಂಡ್‌ನಲ್ಲಿ ಕೃಷಿಕ, ಅಪರೂಪದ ಸಾಧಕ!

ಈ ಯುವಕರು ಮಾರಾಟ ಮಾಡುವ ಬಿರಿಯಾನಿ ಎಣ್ಣೆ ರಹಿತವಾಗಿದ್ದು, ಅರ್ಧ ಮತ್ತು ಪೂರ್ಣ ಪ್ಲೇಟ್‌ಗೆ ಕ್ರಮವಾಗಿ 50 ರಿಂದ 70 ರೂ. ದರವಿದೆ. ಯುವಕರ ಪ್ರಕಾರ ಶಿಕ್ಷಣ ಮುಗಿದ ನಂತರ ಕೆಲಸಕ್ಕೆ ಸೇರಿದ ಯುವಕರಿಗೆ ನಿರೀಕ್ಷಿತ ವೇತನ ಸಿಕ್ಕಿಲ್ಲ.  ಹೀಗಾಗಿ ಕೆಲಸ ತೊರೆದು ಸ್ವಂತ ಉದ್ಯಮ ಸ್ಥಾಪಿಸಲು ಈ ಯುವಕರು ಮುಂದಾಗಿದ್ದಾರೆ. ಈಗ ಈ ಉದ್ಯಮದಿಂದ ಹಿಂದೆಂದಿಗಿಂತಲೂ ಹೆಚ್ಚು ಆದಾಯ ಗಳಿಸುತ್ತಿರುವ ಈ ಯುವಕರು ತಮ್ಮ ವ್ಯಾಪಾರವನ್ನು ವಿಸ್ತರಿಸಲು ಯೋಚಿಸುತ್ತಿದ್ದಾರೆ.

ಗ್ರಾಹಕರು ತಮ್ಮ ತರಕಾರಿ ಬಿರಿಯಾನಿಯನ್ನು ಇಷ್ಟಪಡುತ್ತಾರೆ ಮತ್ತು ಇದರಿಂದಾಗಿ ಅವರು ದೊಡ್ಡ ಲಾಭವನ್ನು ಗಳಿಸಲು ಸಾಧ್ಯವಾಯಿತು ಎಂದು ರೋಹಿತ್ ಮತ್ತು ಸಚಿನ್ ಹೇಳುತ್ತಾರೆ. ಇವರು ತಮ್ಮ ವ್ಯಾಪಾರವನ್ನು ಸ್ವತಃ ಪ್ರಚಾರ ಮಾಡುತ್ತಾರೆ ಮತ್ತು ಜನರು ತಮ್ಮ ರುಚಿಕರವಾದ ಬಿರಿಯಾನಿಯನ್ನು ಪ್ರಯತ್ನಿಸಲು ಪ್ರೋತ್ಸಾಹಿಸುತ್ತಾರೆ.

Boyfriend On Rent... ಪ್ರೇಮಿಗಳ ದಿನ BE ವಿದ್ಯಾರ್ಥಿಯ ವಿಭಿನ್ನ ಪ್ಲೇಕಾರ್ಡ್ 

ಭಾರತೀಯ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್ (Indian Railway Construction Company Limited)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಸೀನಿಯರ್ ವರ್ಕ್ಸ್ ಇಂಜಿನಿಯರ್ (senior Work Engineer), ವ್ಯವಸ್ಥಾಪಕ (Manager) ಸೇರಿ ಒಟ್ಟು  29 ಹುದ್ದೆಗಳು  ಖಾಲಿ ಇದ್ದು ಅರ್ಹ  ಮತ್ತು  ಆಸಕ್ತ ಅಭ್ಯರ್ಥಿಗಳು  ಅರ್ಜಿ ಸಲ್ಲಿಸಬಹುದು.  ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್​ 30 ,2022  ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ  ಇಲಾಖೆಯ ಅಧಿಕೃತ ವೆಬ್‌ ತಾಣ https://www.ircon.org ಗೆ ಭೇಟಿ ನೀಡಲು ಕೋರಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿದ LLB, ಡಿಪ್ಲೊಮಾ, PG ಡಿಪ್ಲೊಮಾ, ಪದವಿ ವಿದ್ಯಾರ್ಹತೆ ಪಡೆದಿರಬೇಕು.

click me!