ಹರಿಯಾಣ(ಫೆ.14): ಕೆಲಸವಿಲ್ಲದ ಕುಡುಕನೋರ್ವ ಮಧ್ಯರಾತ್ರಿ ತುರ್ತು ದೂರವಾಣಿ ಸಂಖ್ಯೆ 112 ಗೆ ಕರೆ ಮಾಡಿ ತಮಾಷೆ ನೋಡಿದ್ದಾನೆ. ಈ ಮಧ್ಯರಾತ್ರಿ ಕರೆ ಮಾಡಿದರೆ ಪೊಲೀಸರು ಬರುತ್ತಾರೋ ಇಲ್ಲವೋ ಎಂದು ತಿಳಿಯುವ ಸಲುವಾಗಿ ತಾನು ಕರೆ ಮಾಡಿದ್ದಾಗಿ ಆತ ಹೇಳಿದ್ದಾನೆ. ಹರಿಯಾಣದ ಪಂಚಕುಲದಲ್ಲಿ ಈ ಘಟನೆ ನಡೆದಿದೆ.
ಭಾರತದ ಪೊಲೀಸ್, ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್‌ನಂತಹ ವಿವಿಧ ಸೇವೆಗಳಿಗೆ 112 ಒಂದೇ ತುರ್ತು ಸಹಾಯವಾಣಿ ಸಂಖ್ಯೆಯಾಗಿದೆ. ಆದಾಗ್ಯೂ, 112 ಗೆ ಬರುವ ಕರೆಗಳಲ್ಲಿ ಹೆಚ್ಚಿನವು ಮಿಸ್‌ಡಯಲ್‌ಗಳು, ತಮಾಷೆಯ ಕರೆಗಳು ಆಗಿರುತ್ತವೆ. ಹೀಗೆ ಕೆಲವು ಕಿಡಿಗೇಡಿಗಳು ಈ ಕರೆ ಸೇವೆಯ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈಗ ಹರಿಯಾಣದ (Haryana) ಪಂಚಕುಲದಲ್ಲಿಯೂ (Panchkula) ಇಂತಹದೊಂದು ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ವಿಲಕ್ಷಣ ಕಾರಣಕ್ಕಾಗಿ ಮಧ್ಯರಾತ್ರಿ ಪೊಲೀಸ್ ತುರ್ತು ಸಂಖ್ಯೆ 112ಕ್ಕೆ ಕರೆ ಮಾಡಿದ್ದಾನೆ. ಕುಡಿದ ಮತ್ತಿನಲ್ಲಿದ್ದ ಆತ ಪೊಲೀಸರು ಈ ಮಧ್ಯರಾತ್ರಿ ಕರೆ ಮಾಡಿದರೆ ಬರುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು 112 ಗೆ ಕರೆ ಮಾಡಿದ್ದಾಗಿ ಹೇಳಿದ್ದಾನೆ.
ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, 42 ವರ್ಷದ ನರೇಶ್ ಕುಮಾರ್, ವೃತ್ತಿಯಲ್ಲಿ ದಿನಗೂಲಿ ಕಾರ್ಮಿಕನಾಗಿದ್ದು,, ಶುಕ್ರವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಈತ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಸಹಾಯ ಕೇಳಿದ್ದಾನೆ. ಈತ ಕರೆ ಮಾಡಿ 15 ನಿಮಿಷದೊಳಗೆ, ಪೊಲೀಸರು ನಿಜವಾಗಿಯೂ ಸ್ಥಳಕ್ಕೆ ಆಗಮಿಸಿ ವ್ಯಕ್ತಿಯನ್ನು ಪತ್ತೆ ಮಾಡಿದ್ದಾರೆ. ಈ ವೇಳೆ ಆತನಲ್ಲಿ ಪೊಲೀಸರು ತುರ್ತು ಕರೆಗೆ ಕಾರಣ ಕೇಳಿದ್ದಾರೆ.
ಈ ವೇಳೆ ಆತ ಮೋರ್ನಿಯಿಂದ (Morni)ಸಂಜೆ ತೆರಳುವ ಬಸ್‌ನ್ನು ನಾನು ತಪ್ಪಿಸಿಕೊಂಡಿದ್ದು, ಹೀಗಾಗಿ ಮನೆಯ ಕಡೆ ನಡೆಯಲು ನಿರ್ಧರಿಸಿದೆ. ಈ ವೇಳೆ ದಾರಿಯಲ್ಲಿ ಬೀರ್ ಕುಡಿದಿದ್ದು ನಂತರ 112 ನಂಬರ್‌ಗೆ ಕರೆ ಮಾಡಿದ್ದು ಪೊಲೀಸರು ಇಷ್ಟು ರಾತ್ರಿಯಲ್ಲೂ ಬರುತ್ತಾರೆಯೇ ಎಂದು ಪರಿಶೀಲಿಸಿದ್ದಾಗಿ ಹೇಳಿದ್ದಾನೆ. ಆದರೆ ಆತನ ಉತ್ತರದಿಂದ ತೃಪ್ತರಾಗದ ಪೊಲೀಸರು ಏನಾದರೂ ತೊಂದರೆಯಲ್ಲಿದ್ದೀರಾ ಎಂದು ಹಲವಾರು ಬಾರಿ ಆತನಲ್ಲಿ ಕೇಳಿದ್ದಾರೆ. ಈ ವೇಳೆ ಆತ ತಾನು ಗೊತ್ತುಗುರಿ ಇಲ್ಲದೇ ತುರ್ತು ಸಂಖ್ಯೆಯನ್ನು ಡಯಲ್ ಮಾಡಿದ್ದು ಯಾವುದೇ ಸಮಸ್ಯೆಗಳಿಲ್ಲ ಎಂದು ಒಪ್ಪಿಕೊಂಡಿದ್ದಾನೆ.
ಪ್ರತಿಭಟನೆ ವೇಳೆ ಕುಡುಕನ ಕಾಟ : ನಾನೂ ರೈತನ ಮಗನೇ..
ಈ ನಡುವೆ ಆತನ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರನ್ನು ರಂಜಿಸುತ್ತಿದೆ. ಘಟನೆಗೆ ಹಲವರು ತಮಾಷೆಯ ಪ್ರತಿಕ್ರಿಯೆಗಳನ್ನು ನೋಡುಗರು ನೀಡಿದ್ದಾರೆ. ಒಬ್ಬ ಬಳಕೆದಾರನು ದೇಶದ ನಾಗರಿಕರು ನಿಗಾ ಇಡುತ್ತಿದ್ದಾರೆ ಎಂದು ಬರೆದರೆ, ಇನ್ನೊಬ್ಬರು ನಿಮ್ಮ ಹಕ್ಕುಗಳನ್ನು ನೀವು ತುಂಬಾ ಗಂಭೀರವಾಗಿ ತೆಗೆದುಕೊಂಡಾಗ ಎಂದು ಬರೆದಿದ್ದಾರೆ. ಮತ್ತೊಬ್ಬರು ಈ ವ್ಯಕ್ತಿ ಹೃದಯದಲ್ಲಿ ನಿಜವಾದ ವಿಜ್ಞಾನಿ ಇದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. @police_haryana ನೀವು ಎಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೀರಿ ಎಂಬುದನ್ನು ಈ ವೀಡಿಯೊ ತೋರಿಸುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಬೆಂಗಳೂರಲ್ಲಿ ಕುಡುಕರ ರಿವೇಂಜ್, ಬಾರ್ ಸುಡಲು ಬಂದು ಕಿರಾಣಿ ಅಂಗಡಿಗೆ ಬೆಂಕಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ