ಭಾರತೀಯ ಸೇನೆ ಬತ್ತಳಿಕೆ ಸೇರಿದ ಎಸ್ಐಜಿ-716 ಅಸ್ಸಾಲ್ಟ್ ರೈಫಲ್ಸ್| ಅಮೆರಿಕ ನಿರ್ಮಿತ ವಿಧ್ವಂಸಕ ಎಸ್ಐಜಿ-716 ಅಸ್ಸಾಲ್ಟ್ ರೈಫಲ್ಸ್| 15 ವರ್ಷಗಳ ಸೇನೆಯ ಬೇಡಿಕೆ ಈಡೇರಿಸಿದ ಮೋದಿ ಸರ್ಕಾರ| ಮುಂಚೂಣಿ ನೆಲೆಗಳಲ್ಲಿರುವ ಸೈನಿಕರಿಗೆ ಮಾತ್ರ ರೈಫಲ್ ಪೂರೈಕೆ| ದೂರದ ಗುರಿ ತಲುಪುವ ಸಾಮರ್ಥ್ಯ ಹೊಂದಿರುವ ಸ್ಐಜಿ-716 ಅಸ್ಸಾಲ್ಟ್ ರೈಫಲ್ಸ್| ಅಮೆರಿಕದ ಎಸ್ಐಜಿ ಸೌರ್ ಸಂಸ್ಥೆಯಿಂದ 72,400 ಅಸಾಲ್ಟ್ ರೈಫಲ್ಸ್ ಖರೀದಿ|
ನವದೆಹಲಿ(ಡಿ.15): ಭಾರತೀಯ ಸೇನೆಯ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದ್ದು, ಅಮೆರಿಕದ ವಿಧ್ವಸಂಕ ಎಸ್ಐಜಿ-716 ಅಸ್ಸಾಲ್ಟ್ ರೈಫಲ್ಸ್ ಸೈನಿಕರ ಕೈ ಸೇರಿದೆ.
ಸುಮಾರು 15 ವರ್ಷಗಳ ಬಳಿಕ ಭಾರತೀಯ ಸೇನೆಗೆ ಅಮೆರಿಕ ನಿರ್ವಿುತ ಹೊಸ ಎಸ್ಐಜಿ-716 ಅಸಾಲ್ಟ್ ರೈಫಲ್ ಪೂರೈಕೆಯಾಗುತ್ತಿದೆ. ದೂರದ ಗುರಿ ತಲುಪುವ ಸಾಮರ್ಥ್ಯ ಹೊಂದಿರುವ ಈ ರೈಫಲ್ಗಳನ್ನು ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿನ ಮುಂಚೂಣಿ ನೆಲೆಗಳಲ್ಲಿರುವ ಸೈನಿಕರಿಗೆ ಮಾತ್ರ ಮೀಸಲಾಗಿಡಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಎರಡನೇ ಹಂತದ ನೆಲೆಗಳಲ್ಲಿರುವ ಸೈನಿಕರಿಗೆ ರಷ್ಯಾ ಸಹಭಾಗಿತ್ವದಲ್ಲಿ ತಯಾರಿಸಲಾಗುತ್ತಿರುವ ಕಲಾಶ್ನಿಕೋವ್ ರೈಫಲ್ಗಳನ್ನು ಪೂರೈಸಲಾಗುವುದು ಎಂದು ಸೇನೆ ಹೇಳಿದೆ.
ಪ್ರಸ್ತುತ ಬಳಕೆಯಲ್ಲಿರುವ 5.56 ಎಂಎಂ ಇನ್ಸಾಸ್ ರೈಫಲ್ಗಳನ್ನು ಬದಲಿಸಲು ಸೇನೆ 2005ರಲ್ಲಿ ಬೇಡಿಕೆ ಇಟ್ಟಿತ್ತು. 382 ಬೆಟಾಲಿಯನ್ಗಳಿಗೆ ಅತ್ಯಾಧುನಿಕ ಗನ್ಗಳನ್ನು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿತ್ತು.
ಚೀನಾ ಗಡಿಯ ಯೋಧರಿಗೆ 73000 ಅಮೆರಿಕನ್ ರೈಫಲ್
ಈಗ 15 ವರ್ಷಗಳ ಬಳಿಕ ಈ ರೈಫಲ್ಸ್ ಸೇನೆ ಕೈಸೇರುತ್ತಿವೆ. ನಿರ್ಣಾಯಕ ಕಾರ್ಯಾಚರಣೆಗಳ ಅವಶ್ಯಕತೆಗಳಿಗಾಗಿ ಭಾರತ ಅಮೆರಿಕದ ಎಸ್ಐಜಿ ಸೌರ್ ಸಂಸ್ಥೆಯಿಂದ 72,400 ಅಸಾಲ್ಟ್ ರೈಫಲ್ಸ್ಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿತ್ತು.
ಇದರಲ್ಲಿ 10 ಸಾವಿರ ಎಸ್ಐಜಿ-716 ರೈಫಲ್ಸ್ ಸೇನೆ ಈಗಾಗಲೇ ಸ್ವೀಕರಿಸಿದೆ. ಬಾಕಿ ರೈಫಲ್ ಗಳು ಕಾಲಾನುಕ್ರಮದಲ್ಲಿ ಹಂತಹಂತವಾಗಿ ಸೈನಿಕರ ಕೈ ಸೇರಲಿವೆ ಎಂದು ಸೇನೆ ಸ್ಪಷ್ಟಪಡಿಸಿದೆ.