ಭಾರತದಲ್ಲಿನ್ನು ಅಮೆರಿಕದ ವಿಸ್ಕಿ, ಹರ್ಲೆ ಡೇವಿಡ್ಸನ್ ಬೈಕ್ ಕಡಿಮೆ ಬೆಲೆಗೆ ಲಭ್ಯ

ಬೊರ್ಬನ್ ವಿಸ್ಕಿ, ಕ್ಯಾಲಿಫೋರ್ನಿಯಾ ವೈನ್ ಜೊತೆಗೆ ಹಾರ್ಲೆ ಡೇವಿಡ್ಸನ್ ಬೈಕ್ ಸೇರಿದಂತೆ ಒಂದಷ್ಟು ವಸ್ತುಗಳ ಬೆಲೆ ಭಾರಿ ಇಳಿಕೆಯಾಗಲಿದೆ. ಭಾರತದಲ್ಲಿ ಇನ್ನು ಕಡಿಮೆ ಬೆಲೆ ಮದ್ಯ ಸವಿಯುವವರು ಅಮೆರಿಕದ ಬ್ರ್ಯಾಂಡ್ ಹಾಗೂ ರೈಡ್ ಹೋಗುವವರು ಅಮೆರಿಕನ್ ಬೈಕ್ ಬಳಸುವ ದಿನ ದೂರವಿಲ್ಲ.

Harley bikes bourbon whiskey and wine likely to cheaper in India says reports

ನವದೆಹಲಿ(ಮಾ.26) ಭಾರತದಲ್ಲಿ ಹಲವು ಬ್ರ್ಯಾಂಡ್ ಮದ್ಯ, ವೈನ್, ದ್ವಿಚಕ್ರವಾಹನಗಳು ಲಭ್ಯವಿದೆ. ಹಲವರಿಗೆ ವಿದೇಶಿ ಮದ್ಯ, ವಿದೇಶಿ ವಾಹನಗಳ ಮೇಲೆ ಹೆಚ್ಚಿನ ವ್ಯಾಮೋಹ. ಆದರೆ ಭಾರತದಲ್ಲಿ ವಿದೇಶಿ ವಸ್ತುಗಳಿಗೆ ದುಬಾರಿ ಬೆಲೆ. ಆದರೆ ಇನ್ನು ಮುಂದೆ ಅಮೆರಿದ ಬೊರ್ಬನ್ ವಿಸ್ಕಿ, ಕ್ಯಾಲಿಫೋರ್ನಿಯಾ ವೈನ್, ಹಾರ್ಲೆ ಡೇವಿಡ್ಸನ್ ಬೈಕ್ ಸೇರಿದಂತೆ ಕೆಲ ಅಮರಿಕನ್ ಬ್ರ್ಯಾಂಡ್ ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಹೌದು, ಭಾರತ ಸರ್ಕಾರ ಅಮೆರಿಕ ಕೆಲ ಉತ್ಪನ್ನಗಳ ಮೇಲಿನ ಸುಂಕ ಇಳಿಕೆ ಮಾಡುತ್ತಿದೆ. ಉಭಯ ದೇಶದ ನಾಯಕರು, ಅಧಿಕಾರಿಗಳು ಈ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ. ಟ್ಯಾರಿಫ್ ಕಡಿಮೆ ಮಾಡಲು ಚರ್ಚಿಸಿದ್ದಾರೆ.

ಹಾರ್ಲೇ ಡೇವಿಡನ್ಸ್ ಆಮಂದು ಸುಂಕ ಇಳಿಕೆ
ಭಾರತ ಸರ್ಕಾರ ಅಮೆರಿಕದ ಹಾರ್ಲೆ ಡೇವಿಡನ್ಸ್ ಬೈಕ್ ಮೇಲಿನ ಅಮದು ಸುಂಕವನ್ನು ಶೇಕಡಾ 50 ರಿಂದ 40ಕ್ಕೆ ಇಳಿಕೆ ಮಾಡಿದೆ. ಆದರೂ ಭಾರತದಲ್ಲಿ ಇತರ ಸಾಮಾನ್ಯ ಬೈಕುಗಳು, ಕೈಗೆಟುಕುವ ಬೆಲೆಯಲ್ಲಿ ಹಾರ್ಲೆ ಡೇವಿಡ್ಸನ್ ಬೈಕ್ ಲಭ್ಯವಾಗುತ್ತಿಲ್ಲ. ಇದೀಗ ಅಮೆರಿಕ ಟ್ಯಾರಿಫ್ ಕಡಿತಗೊಳಿಸಲು ಸತತವಾಗಿ ಮನವಿ ಮಾಡುತ್ತಿದೆ. ಇದರ ಬೆನ್ನಲ್ಲೇ ಹಾರ್ಲೆ ಡೇವಿಡನ್ಸ್ ಬೈಕ್ ಮೇಲಿನ ಆಮದು ಸುಂಕ ಮತ್ತಷ್ಟು ಇಳಿಕೆ ಮಾಡಲು ಭಾರತ ಮುಂದಾಗಿದೆ. ಈ ಕುರಿತು ಅಂತಿಮ ಹಂತದ ಮಾತುಕತೆಗಳು ನಡೆಯುತ್ತಿದೆ.

Latest Videos

ಎಲಾನ್ ಮಸ್ಕ್ ಏಲಿಯನ್ ಅನ್ನೋದಕ್ಕೆ ಇಲ್ಲಿದೆ ಸಾಕ್ಷಿ, ಟ್ರಂಪ್ ಡಿನ್ನರ್ ಪಾರ್ಟಿ ವಿಡಿಯೋ ಸಂಚಲನ

ಬೊರ್ಬನ್ ವಿಸ್ಕಿ ಬೆಲೆ ಇಳಿಕೆ
ಅಮೆರಿಕದ ಜನಪ್ರಿಯ ಬ್ರ್ಯಾಂಡ್ ಬೊರ್ಬನ್ ವಿಸ್ಕಿ ಮೇಲಿನ ಅಮದು ಸುಂಕವನ್ನು ಈ ಹಿಂದೆ ಶೇಕಡಾ 150 ರಿಂದ ಶೇಕಡಾ 100ಕ್ಕೆ ಇಳಿಕೆ ಮಾಡಲಾಗಿದೆ. ಇದೀಗ ಮತ್ತಷ್ಟು ಇಳಿಕೆ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ. ಇದರ ಜೊತೆಗೆ ಕ್ಯಾಲಿಫೋರ್ನಿಯಾ ವೈನ್ ಕೂಡ ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಭಾರತ ಹಾಗೂ ಅಮೆರಿಕ ನಡುವಿನ ಮಾತುಕತೆ ಯಶಸ್ವಿಯಾದರೆ ಅಮೆರಿಕದ ಕೆಲ ಉತ್ಪನ್ನಗಳು ಭಾರತದಲ್ಲಿ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ.

ಇತ್ತೀಚೆಗೆ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಬ್ರೀಟ್‌ಬಾರ್ಟ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಅಮೆರಿಕ ಮತ್ತು ಭಾರತದ ಸಂಬಂಧಗಳ ಬಗ್ಗೆ ಚರ್ಚಿಸಿದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇತ್ತೀಚೆಗೆ ನಡೆದ ಶೃಂಗಸಭೆಯ ಬಗ್ಗೆ ಅವರನ್ನು ಕೇಳಿದಾಗ, ಭಾರತದೊಂದಿಗೆ ಅವರ ಸಂಬಂಧವು ತುಂಬಾ ಚೆನ್ನಾಗಿದೆ ಎಂದು ಹೇಳಿದರು, ಆದರೆ ಭಾರತವು ಅಮೆರಿಕದ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸಿದೆ ಎಂದು ಆರೋಪಿಸಿದ್ದರು. ಟ್ರಂಪ್, "ಭಾರತದೊಂದಿಗೆ ನನಗೆ ಉತ್ತಮ ಸಂಬಂಧವಿದೆ, ಆದರೆ ನನ್ನ ಏಕೈಕ ಸಮಸ್ಯೆ ಎಂದರೆ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸುಂಕ ವಿಧಿಸುವ ದೇಶಗಳಲ್ಲಿ ಒಂದಾಗಿದೆ." ಎಂದು ಹೇಳಿದರು. ಅವರು ಮುಂದುವರಿಸಿ, "ಅವರು ಶೀಘ್ರದಲ್ಲೇ ಈ ಸುಂಕಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ, ಆದರೆ ಏಪ್ರಿಲ್ 2 ರಿಂದ ನಾವು ಅವರ ಮೇಲೆ ಎಷ್ಟು ಸುಂಕ ವಿಧಿಸುತ್ತಾರೋ ಅಷ್ಟೇ ಸುಂಕವನ್ನು ನಾವು ವಿಧಿಸುತ್ತೇವೆ."

ಅಮೆರಿಕದ ಶಿಕ್ಷಣ ಇಲಾಖೆಯನ್ನೇ ಮುಚ್ಚಿದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌!
 

vuukle one pixel image
click me!