20 ವರ್ಷಗಳ ಹಿಂದೆ ವಿದೇಶಿಗನ ಮರಣಪತ್ರದಲ್ಲಿತ್ತು ಜ್ಞಾನೇಶ್‌ ಹೆಸರು! ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಾಜಿ ಸಚಿವನ ಹೇಳಿಕೆ ಸಂಚಲನ

Kannadaprabha News   | Kannada Prabha
Published : Sep 27, 2026, 11:17 AM IST
Thomas Isaac on Gyanesh Kumar

ಸಾರಾಂಶ

CPIM Leader Thomas Isaac on Gyanesh Kumar ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರಾಗಿರುವ ಜ್ಞಾನೇಶ್‌ ಕುಮಾರ್‌ ಅವರ ಹೆಸರು 20 ವರ್ಷಗಳ ಹಿಂದಿನ ಮಲೇಷ್ಯಾ ವ್ಯಕ್ತಿಯೊಬ್ಬರ ಮರಣಪತ್ರದಲ್ಲಿ ಉಲ್ಲೇಖವಾಗಿತ್ತು ಎಂದು ಕೇರಳದ ಮಾಜಿ ಸಚಿವ ಥಾಮಸ್‌ ಐಸಾಕ್‌ ಆರೋಪಿಸಿದ್ದಾರೆ.

ತಿರುವನಂತಪುರಂ (ಸೆ.27): ಅಂದು ಕೇರಳ ಕೇಡರ್‌ ಐಎಎಸ್‌ ಅಧಿಕಾರಿ ಆಗಿದ್ದ ಈಗಿನ ವಿವಾದಿತ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ಹೆಸರನ್ನು ಮರಣಪತ್ರದಲ್ಲಿ ಉಲ್ಲೇಖಿಸಿ ಮಲೇಷ್ಯಾದ ವ್ಯಕ್ತಿಯೊಬ್ಬರು 20 ವರ್ಷದ ಹಿಂದೆ ಆತ್ಮ೧ಹತ್ಯೆ ಮಾಡಿಕೊಂಡಿದ್ದರು ಎಂದು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಕೇರಳದ ಮಾಜಿ ವಿತ್ತ ಸಚಿವ ಐಸಾಕ್‌ ಹೇಳಿಕೆ ಸಂಚಲನ

2 ದಶಕದ ಹಿಂದಿನ ಘಟನೆಯನ್ನು ಕೇರಳದ ಮಾಜಿ ವಿತ್ತಸಚಿವರಾಗಿರುವ ಸಿಪಿಎಂ ನಾಯಕ ಟಿ.ಎಂ. ಥಾಮಸ್‌ ಐಸಾಕ್‌ ನೆನಪಿಸಿದ್ದಾರೆ.

‘ರಾಜ್ಯದಲ್ಲಿನ ರಸ್ತೆ ಯೋಜನೆಯೊಂದರ ಉಸ್ತುವಾರಿ ವಹಿಸಿಕೊಂಡಿದ್ದ ಮಲೇಷ್ಯಾದ ಅಧಿಕಾರಿ ಲೀ ಬೀನ್‌ ಸೀನ್‌ ಅವರು 2006ರ ನವೆಂಬರ್‌ನಲ್ಲಿ ಕೇರಳದಿಂದ ಕೌಲಾಲಂಪುರಕ್ಕೆ ತೆರಳಿ ಆತ್ಮ೧ಹತ್ಯೆ ಮಾಡಿಕೊಂಡಿದ್ದರು. ಅವರ ಮರಣಪತ್ರದಲ್ಲಿ, ಅಂದು ಸಾರ್ವಜನಿಕ ನಿರ್ಮಾಣ ಇಲಾಖೆಯ (PwD) ಕಾರ್ಯದರ್ಶಿಯಾಗಿದ್ದ ಜ್ಞಾನೇಶ್ ಕುಮಾರ್ ಅವರ ಹೆಸರಿತ್ತು. ಜ್ಞಾನೇಶ್‌ ಸೇರಿದಂತೆ ಕೆಲ ಪಿಡಬ್ಲ್ಯುಡಿ ಅಧಿಕಾರಿಗಳ ಭ್ರಷ್ಟಾಚಾರ, ದುರಾಡಳಿತ ಮತ್ತು ಕಿರುಕುಳದಿಂದ ಬೇಸತ್ತಿದ್ದಾಗಿ ಅವರು ಬರೆದಿದ್ದರು’ ಎಂದು ಅವರು ಹೇಳಿದ್ದಾರೆ.

ಕೇಂದ್ರಕ್ಕೆ ಎತ್ತಂಗಡಿ ಬಳಿಕ ಮುಂದುವರಿಯದ ತನಿಖೆ

ಮುಂದುವರಿದು, ‘ಇದರ ಬೆನ್ನಲ್ಲೇ ಜ್ಞಾನೇಶ್‌ ವಿರುದ್ಧ ವಿಜಿಲೆನ್ಸ್‌ ತನಿಖೆ ಶುರುವಾಯಿತು ಮತ್ತು 2006ರ ಅಂತ್ಯದ ವೇಳೆಗೆ ಅವರನ್ನು ರಕ್ಷಣಾ ಸಚಿವಾಲಯಕ್ಕೆ ವರ್ಗಾಯಿಸಲಾಯಿತು. ಕೇಂದ್ರದ ಮಟ್ಟಕ್ಕೆ ಹೋಗುತ್ತಿದ್ದಂತೆ ಅವರು ಬಿಜೆಪಿಯೊಂದಿಗೆ ಆಪ್ತರಾದರು’ ಎಂದು ಐಸಾಕ್‌ ಆರೋಪಿಸಿದ್ದಾರೆ. ಆದರೆ ಜ್ಞಾನೇಶ್‌ ವಿರುದ್ಧದ ತನಿಖೆಯು ಕಾರಣಾಂತರಗಳಿಂದ ಮುಂದುವರಿದಿರಲಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

₹34 ದಿನಗೂಲಿ ಕೆಲಸಕ್ಕಾಗಿ 37 ವರ್ಷಗಳ ಹೋರಾಟ: ಇಂಡಿಯನ್ ಆಯಿಲ್ ಕಂಪನಿ ವಿರುದ್ಧ ಸುಮಿತ್ರಾಗೆ ಸುಪ್ರೀಂ ಕೋರ್ಟ್ ಪರಿಹಾರ
ಮಗಳ ಒಂದು ಪ್ರಶ್ನೆ... ಇಂಟರ್ನೆಟ್‌ನಲ್ಲೀಗ ಭಾರಿ ಚರ್ಚೆ! ಏರ್‌ಪೋರ್ಟ್‌ ಒಳಗೆ ಲಗೇಜ್ ಶಾಪ್ ಇರೋದರ ಅಸಲಿ ರಹಸ್ಯ ಏನು?