
ಮಥುರಾ (ಸೆ.26) ಉತ್ತರ ಪ್ರದೇಶ ಪ್ರಮುಖ ಗುರು ಪ್ರೇಮಾನಂದ ಮಹಾರಾಜರ ವೃಂದಾವನ ಆಶ್ರಮದಲ್ಲಿ ಶಿಷ್ಯ ಮೃತಪಟ್ಟ ಘಟನೆ ಕೋಲಾಹಲ ಸೃಷ್ಟಿಸಿದೆ. ಪ್ರೇಮಾನಂದ ಮಹಾರಾಜ ಗುರೂಜಿ ಶಿಷ್ಯ ದೀಪಕ್ ಕುಮಾರ್ ಅಲಿಯಾಸ್ ರಸಿಕ್ ದುಲಾರಿ ಶರಣ್ ಮೃತಪಟ್ಟಿದ್ದಾರೆ. ವಂದಾವನ ಆಶ್ರಮದ ಹಿಂಭಾಗದಲ್ಲಿರುವ ಸೊಸೈಟಿ ಮನೆಯೊಂದರಲ್ಲಿ ವಾಸವಾಗಿದ್ದ ದೀಪಕ್ ಕುಮಾರ್ ದುಡುಕಿನ ನಿರ್ಧಾರ ತೆಗೆದುಕೊಂಡು ನಿಧನರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಪ್ರಕರಣ ದಾಖಲಾಗಿದ್ದು ತನಿಖೆ ತೀವ್ರಗೊಂಡಿದೆ.
ಜಬಲಪುರ ಮೂಲದ ದೀಪಕ್ ಕುಮಾರ್ ಕಳೆದ ಒಂದೂವರೆ ವರ್ಷದಿಂದ ವೃಂದಾವನ ಆಶ್ರಮದ ಸೊಸೆಟಿ ಕಟ್ಟಡದ ಮನೆಯಲ್ಲಿ ವಾಸವಿದ್ದರು. ಪ್ರೇಮಾನಂದ ಮಹಾರಾಜರಾ ಶಿಷ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. 2025ರ ಫೆಬ್ರವರಿ ತಿಂಗಳಲ್ಲಿ ಪ್ರೇಮಾನಂದ ಮಹಾರಾಜರಿಂದ ದೀಕ್ಷೆ ಪಡೆದು ಸನ್ಯಾಸತ್ವ ಸೀಕರಿಸಿದ್ದ ದೀಪಕ್ ಕುಮಾರ್ ಆಶ್ರಮದ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.
ನಗರ ಪೊಲೀಸ್ ಎಸ್‌ಪಿ ರಾಜೀವ್ ಕುಮಾರ್ ಘಟನೆ ಕುರಿತು ವಿವರಿಸಿದ್ದಾರೆ. ದೀಪಕ್ ಕುಮಾರ್ ಸೊಸೈಟಿ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ನಿಂತು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ದೀಪಕ್ ಕುಮಾರ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರ ಗಾಯಗೊಂಡಿದ್ದ ಕಾರಣ ದೀಪಕ್ ಕುಮಾರ್ ಬದುಕಿ ಉಳಿಯಲಿಲ್ಲ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಕೋತ್ವಾಲಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪರಿಶೀಲನೆ ನಡೆಸಿದ್ದಾರೆ. ಪೋಸ್ಟ್‌ಮಾರ್ಟಮ್ ವರದಿ ಕೈಸೇರಿದ ಬೆನ್ನಲ್ಲೇ ಮತ್ತಷ್ಟು ಮಾಹಿತಿಗಳು ಲಭ್ಯವಾಗಲಿದೆ ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.
ಪ್ರೇಮಾನಂದ ಮಹಾರಾಜರ ಆಶ್ರಮದಲ್ಲಿನ ಈ ಘಟನೆಯಿಂದ ಭಕ್ತ ಸಮೂಹವೂ ಆತಂಕಗೊಂಡಿದೆ. ದೀಪಕ್ ಕುಮಾರ್ ನಿರ್ಧಾರಕ್ಕೆ ಕಾರಣವೇನು ಎಂದು ಚರ್ಚೆಯಾಗುತ್ತಿದೆ. ಈ ಕುರಿತು ಆಶ್ರಮದಿಂದ ಅಧೀಕೃತ ಹೇಳಿಕೆ ಬಿಡುಗಡೆಯಾಗಿಲ್ಲ. ಘಟನೆ ಸಂಬಂಧ ಕೋತ್ವಾಲಿ ಪೊಲೀಸರು ದೀಪಕ್ ಕುಮಾರ್ ಮನೆ ಪರಿಶೋಧ ನಡೆಸಿದ್ದಾರೆ. ಡೈರಿ ಸೇರಿದಂತೆ ಕೆಲ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ