ಕರ್ನಾಟಕದ ಸಗಣಿ ಎರಚೋ ಹಬ್ಬಕ್ಕೆ ಅಮೆರಿಕ ಯೂಟ್ಯೂಬರ್ ಅಪಹಾಸ್ಯ: ನೆಟ್ಟಿಗರ ಆಕ್ರೋಶ

Published : Oct 28, 2025, 07:38 AM IST
cow dung festival

ಸಾರಾಂಶ

ಕರ್ನಾಟಕದ ಚಾಮರಾಜನಗರದ ಗಡಿಭಾಗದಲ್ಲಿರುವ ಗುಮಟಾಪುರದಲ್ಲಿ ನಡೆಯುವ ವಿಶಿಷ್ಟ ಸಗಣಿ ಎರಚಾಡುವ ‘ಗೋರೆ ಹಬ್ಬ’ದ ಕುರಿತು ವಿದೇಶಿ ಯೂಟ್ಯೂಬರ್‌ ಒಬ್ಬ ಅಪಹಾಸ್ಯಕರ ವಿಡಿಯೋ ಮಾಡಿ, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನವದೆಹಲಿ (ಅ.28): ಕರ್ನಾಟಕದ ಚಾಮರಾಜನಗರದ ಗಡಿಭಾಗದಲ್ಲಿರುವ ಗುಮಟಾಪುರದಲ್ಲಿ ನಡೆಯುವ ವಿಶಿಷ್ಟ ಸಗಣಿ ಎರಚಾಡುವ ‘ಗೋರೆ ಹಬ್ಬ’ದ ಕುರಿತು ವಿದೇಶಿ ಯೂಟ್ಯೂಬರ್‌ ಒಬ್ಬ ಅಪಹಾಸ್ಯಕರ ವಿಡಿಯೋ ಮಾಡಿ, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಗುಮಟಾಪುರದ ಸ್ಥಳೀಯ ಬೀರೇಶ್ವರ ದೇವರು ಸಗಣಿಯಿಂದ ಹುಟ್ಟಿದ್ದಾರೆ ಎಂಬ ನಂಬಿಕೆ ಭಕ್ತರದ್ದು. ಹಾಗಾಗಿ ಪ್ರತಿವರ್ಷ ದೀಪಾವಳಿಯ ಮರುದಿನ ಯುವಕರು ಹಸುವಿನ ಸಗಣಿಯನ್ನು ಪರಸ್ಪರ ಎರಚಾಡಿಕೊಂಡು ಹಬ್ಬ ಆಚರಿಸುತ್ತಾರೆ. ಅಮೆರಿಕದ ಟೈಲರ್ ಒಲಿವೇರಾ ಎಂಬ ಯೂಟ್ಯೂಬರ್‌ ಈ ಹಬ್ಬದಲ್ಲಿ ಪಾಲ್ಗೊಂಡು, ಭಾರತೀಯರನ್ನು ಅವಹೇಳನ ಮಾಡಿ ಅದರ ವಿಡಿಯೋ ಅಪ್ಲೋಡ್‌ ಮಾಡಿದ್ದಾರೆ. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

‘ಎಕ್ಸ್‌’ನಲ್ಲಿ ಪೋಸ್ಟ್‌: ಹಬ್ಬದಲ್ಲಿ ಸ್ಥಳೀಯ ಯುವಕರೊಂದಿಗೆ ಮೈಗೆ ಸಗಣಿ ಮೆತ್ತಿಕೊಂಡ ಫೋಟೊ ಮತ್ತು ವಿಡಿಯೋವನ್ನು ಒಲಿವೇರಾ ಎಕ್ಸ್‌ನಲ್ಲಿ ಅಪ್ಲೋಡ್‌ ಮಾಡಿದ್ದಾರೆ. ಇದರ ಜೊತೆ ‘ನಾನು ಭಾರತದ ಮಲ ಎಸೆಯುವ ಉತ್ಸವದಿಂದ ಬದುಕುಳಿದೆ. ನನ್ನನ್ನು ಬಿಟ್ಟುಬಿಡಿ, ಇದು ತುಂಬಾ ಹೊಲಸು, ಇಲ್ಲಿಂದ ಹೊರಬರಬೇಕು’ ಎಂದು ಬರೆದುಕೊಂಡಿದ್ದಾರೆ. ಇದನ್ನು 50 ಲಕ್ಷ ಜನ ವೀಕ್ಷಿಸಿದ್ದಾರೆ.

ನೆಟ್ಟಿಗರ ಆಕ್ರೋಶ

ಯೂಟ್ಯೂಬರ್‌ ನಡೆ ಜನಾಂಗೀಯ ನಿಂದನೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ತರಹೇವಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ. ‘ಒಳ್ಳೆಯದು. ಭಾರತೀಯರು ಪೇಟೆಂಟ್‌ ಸಲ್ಲಿಸುವಾಗ, ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಾಗ, ಅತ್ಯಾಧುನಿಕ ಸ್ಟಾರ್ಟ್‌ಅಪ್‌ಗಳನ್ನು ತೆರೆಯುವಾಗ ಮತ್ತು ಕೋಟ್ಯಧಿಪತಿಗಳಾಗುವಾಗ ನೀವು ಎಐನ ಮಲದ ವೀಡಿಯೊಗಳನ್ನು ರಚಿಸುವತ್ತ ಗಮನ ಹರಿಸಿ’ ಎಂದು ಒಬ್ಬರು ಕಮೆಂಟ್ ಮಾಡಿದರೆ, ಇನ್ನೊಬ್ಬರು ‘ನೀವು ಭಾರತಕ್ಕೆ ಬಂದು,ಕಾರ್ಯಕ್ರಮದ ಮಧ್ಯ ಹೋಗಿ, ಸಗಣಿ ಹಬ್ಬದ ವೀಡಿಯೊ ರೆಕಾರ್ಡ್ ಮಾಡಿ, ನಂತರ ಸೋತವನಂತೆ ಅಳುವುದೇಕೆ?’ ಎಂದು ಕಿಡಿ ಕಾರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ