ಎಂಬಿಬಿಎಸ್ ಸೀಟು ಪಡೆಯಲು ಪಿಯುಸಿ ಅಂಕಪಟ್ಟಿ ಪೋರ್ಜರಿ: 44 ವರ್ಷಗಳ ನಂತರ ವೈದ್ಯನಿಗೆ ಜೈಲು

Published : Feb 01, 2024, 12:33 PM ISTUpdated : Feb 01, 2024, 12:36 PM IST
ಎಂಬಿಬಿಎಸ್ ಸೀಟು ಪಡೆಯಲು ಪಿಯುಸಿ ಅಂಕಪಟ್ಟಿ ಪೋರ್ಜರಿ:  44 ವರ್ಷಗಳ ನಂತರ ವೈದ್ಯನಿಗೆ ಜೈಲು

ಸಾರಾಂಶ

ಮೆಡಿಕಲ್ ಸೀಟು ಪಡೆಯುವುದಕ್ಕಾಗಿ ಪಿಯುಸಿ ಅಂಕಪಟ್ಟಿಯನ್ನು ತಿದ್ದುಪಡಿ ಮಾಡಿದ ಆರೋಪದಡಿ 44 ವರ್ಷಗಳ ಬಳಿಕ ವೈದ್ಯರಿಗೆ ನ್ಯಾಯಾಲಯವೊಂದು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಗುಜರಾತ್‌ನ ಅಹ್ಮದಾಬಾದ್‌ನ ಪಲ್ಡಿ ನಿವಾಸಿಯಾದ ಉತ್ಪಲ್ ಪಟೇಲ್ ಶಿಕ್ಷೆಗೊಳಗಾದ ವೈದ್ಯ. 

ಅಹ್ಮದಾಬಾದ್: ಮೆಡಿಕಲ್ ಸೀಟು ಪಡೆಯುವುದಕ್ಕಾಗಿ ಪಿಯುಸಿ ಅಂಕಪಟ್ಟಿಯನ್ನು ತಿದ್ದುಪಡಿ ಮಾಡಿದ ಆರೋಪದಡಿ 44 ವರ್ಷಗಳ ಬಳಿಕ ವೈದ್ಯರಿಗೆ ನ್ಯಾಯಾಲಯವೊಂದು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಗುಜರಾತ್‌ನ ಅಹ್ಮದಾಬಾದ್‌ನ ಪಲ್ಡಿ ನಿವಾಸಿಯಾದ ಉತ್ಪಲ್ ಪಟೇಲ್ ಶಿಕ್ಷೆಗೊಳಗಾದ ವೈದ್ಯ. 

1980ರಲ್ಲಿ ಪಟೇಲ್ ಅವರು ಪಿಯುಸಿ ಶಿಕ್ಷಣ ಮುಗಿಸಿದ್ದರು. ಈ ಸಂದರ್ಭದಲ್ಲಿ ಅವರಿಗೆ ಒಟ್ಟು 800 ಅಂಕಗಳಲ್ಲಿ 398 ಅಂಕ ಗಳಿಸಿದ್ದರು. ಅವರಿಗೆ ಶೇಕಡಾವಾರು 49% ಅಂಕ ಇತ್ತು. ಇದರಿಂದ ಅವರಿಗೆ ವೈದ್ಯಕೀಯ ಕೋರ್ಸ್‌ಗೆ ಪ್ರವೇಶಾತಿ ಸಾಧ್ಯವಿರಲಿಲ್ಲ, ಇದರಿಂದ ಅವರು ತಮ್ಮ ಅಂಕಗಳ ಪುನರ್ ಪರಿಶೀಳನೆಗೆ ಅರ್ಜಿ ಸಲ್ಲಿಸಿದ್ದು ಇನ್ನೊಂದು ಮಾರ್ಕ್‌ಶೀಟ್ ಪಡೆದಿದ್ದರು. ಅಲ್ಲದೇ ನಂತರ ತಮ್ಮ ಮಾರ್ಕನ್ನು ಅದರಲ್ಲಿ ತಿದ್ದುಪಡಿ ಮಾಡಿ 547 ಅಂಕ ಗಳಿಸಿ ಶೇಕಡಾ 68 % ಗಳಿಸಿದಂತೆ ತಿದ್ದುಪಡಿ ಮಾಡಿದ್ದರು. ನಂತರ ಎಂಬಿಬಿಎಸ್ ಶಿಕ್ಷಣಕ್ಕೆ ಅರ್ಜಿ ಸಲ್ಲಿಸಿ ಬಿಜೆ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದರು. 

ಡಿಸಿಎಂ ಹೆಸರಲ್ಲಿ ನಕಲಿ ಲೆಟರ್ ಹೆಡ್ ವೈರಲ್ ; ಫಾಕ್ಸ್ ಕಾನ್‌‌ ಸಂಸ್ಥೆಗೆ ನಾನು ಪತ್ರ ಬರೆದಿಲ್ಲ ಡಿಕೆಶಿ ಸ್ಪಷ್ಟನೆ

ಗುಜರಾತ್ ಸೆಕೆಂಡರಿ ಎಜುಕೇಷನ್ ಬೋರ್ಡ್, ಪಟೇಲ್ ಅಂಕಪಟ್ಟಿಯ ಪೋರ್ಜರಿ ಬಗ್ಗೆ ತಿಳಿದುಕೊಂಡು ಕಾಲೇಜಿಗೆ ಪತ್ರ ಬರೆದು ಪುನರ್ ಮೌಲ್ಯಮಾಪನದ ನಂತರವೂ ಪಟೇಲ್ ಅವರ ಮಾರ್ಕ್‌ನಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ, ಅವರು ಪೋರ್ಜರಿ ಮಾಡಿ ಮೆಡಿಕಲ್ ಸೀಟು ಗಳಿಸಿದ್ದಾರೆ. ಬೋರ್ಡ್‌ ಆಫೀಸಿನಿಂದ ಖಾಲಿ ಲೆಟರ್ ಹೆಡ್ ಹಾಗೂ ಮಾರ್ಕ್‌ಶೀಟ್ ಪಡೆದು ಈ ಪೋರ್ಜರಿ ಮಾಡಿದ್ದಾರೆ ಹೀಗಾಗಿ ಅವರ ಪ್ರವೇಶಾತಿಯನ್ನು ಏಕೆ ರದ್ದು ಮಾಡಬಾರದು ಎಂದು ಕಾಲೇಜನ್ನು ಪ್ರಶ್ನಿಸಿತ್ತು.

ಈ ವಿಚಾರವಾಗಿ 1991ರಲ್ಲಿ ಕಾಲೇಜು ಶಹಿಭಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಅಲ್ಲದೇ ಸ್ವಲ್ಪ ದಿನದಲ್ಲೇ ಪಟೇಲ್ ಮಾರ್ಕ್‌ಶೀಟ್ ನಕಲಿ ಎಂಬುದನ್ನು ಸಾಬೀತುಪಡಿಸಿತ್ತು. ಇದಾದ ನಂತರ 2014ರಲ್ಲಿ ಮೆಟ್ರೋಪಾಲಿಟನ್ ಕೋರ್ಟ್ ಪಟೇಲ್ ವಿರುದ್ಧ ಈ ಫೋರ್ಜರಿ ವಂಚನೆ ಕಳ್ಳತನದ ಪ್ರಕರಣ ದಾಖಲಿಸಿ ವಿಚಾರಣೆ  ನಡೆಸಿತ್ತು. ಈ ಪ್ರಕರಣದ ವಿಚಾರಣೆಯೂ ಬರೋಬ್ಬರಿ 44 ವರ್ಷಗಳ ನಂತರ ನಿನ್ನೆ ಪೂರ್ಣಗೊಂಡಿದ್ದು,  ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಿ ಎನ್ ನವೀನ್ ಅವರು ಆರೋಪಿ ವೈದ್ಯನಿಗೆ ಪೋರ್ಜರಿ ಪ್ರಕರಣಕ್ಕೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದ್ದರು. ಹಾಗೂ ಕಳ್ಳತನ ಪ್ರಕರಣದಿಂದ ಅವರನ್ನು ಮುಕ್ತಗೊಳಿಸಿದರು.

ಆದರೆ ಪಟೇಲ್ ಪರ ವಕೀಲರು ಆರೋಪಿ ವೈದ್ಯ ಉತ್ಪಲ್ ಪಟೇಲ್ ಅವರಿಗೆ ಜೈಲು ಶಿಕ್ಷೆ ವಿಧಿಸಬಾರದು ಎಂದು ಮನವಿ ಮಾಡಿದರು, ಅಪರಾಧಿಗಳ ಪ್ರೊಬೇಷನ್ ಆಕ್ಟ್ ಅಡಿಯಲ್ಲಿ ವಿನಾಯಿತಿ ಮತ್ತು ಪ್ರಯೋಜನಗಳನ್ನು ನೀಡಬೇಕು ಎಂದು ಕೋರಿದರು. ಪಟೇಲ್ ವೈದ್ಯ ವೃತ್ತಿ ಮಾಡುತ್ತಿದ್ದು, ನಗರದಲ್ಲಿ ಕ್ಲಿನಿಕ್ ನಡೆಸುವ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ. ಅವರು ಕೇವಲ 17 ವರ್ಷದವರಾಗಿದ್ದಾಗ ಎಸಗಿ ಅಪರಾಧ ಇದಾಗಿದ್ದು, ಈಗ ಅವರಿಗೆ  60 ವರ್ಷ ಮತ್ತು ಕುಟುಂಬವಿದೆ ಎಂದು ಮನವಿ ಮಾಡಿದರು.

ಆದರೆ ವೈದ್ಯಕೀಯ ವೃತ್ತಿಯಲ್ಲಿ ತೊಡಗಿರುವವರು ಈ ರೀತಿ ನಡೆದುಕೊಂಡರೆ ಅದು ಇತರರನ್ನು ಇದೇ ರೀತಿಯ ಅಪರಾಧಗಳನ್ನು ಮಾಡಲು ಪ್ರೇರೇಪಿಸುತ್ತದೆ ಎಂದ ನ್ಯಾಯಾಲಯ ಆರೋಪಿಗೆ ಕಾನೂನಿನಡಿಯಲ್ಲಿ ಗರಿಷ್ಠ ಏಳು ವರ್ಷಗಳ ಶಿಕ್ಷೆ ನೀಡುವಂತೆ ಕೋರಿದರು. ಆದರೆ  ನ್ಯಾಯಾಧೀಶರು ಪಟೇಲ್ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ರೂ 30,000 ದಂಡ ವಿಧಿಸಿದರು, ಪಟೇಲ್ ವೈದ್ಯಕೀಯ ಪ್ರವೇಶಕ್ಕೆ ಅನರ್ಹರಾಗಿದ್ದರೂರೆ ನಕಲಿ ಅಂಕಪಟ್ಟಿ ಬಳಸಿ ಬೇರೊಬ್ಬರ ಎಂಬಿಬಿಎಸ್ ಸೀಟ್ ಅನ್ನು ಕಸಿದುಕೊಂಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಖಾಲಿ ಕಾಗದಕ್ಕೆ ಹೆಣದ ಹೆಬ್ಬೆಟ್ಟು ಒತ್ತಿಸಿಕೊಂಡ ಸಂಬಂಧಿಗಳು: ವಿಡಿಯೋ ವೈರಲ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ