ಉತ್ತಮ ಆಡಳಿತ ಸೂಚ್ಯಂಕ: ದೇಶದಲ್ಲೇ ಗುಜರಾತ್‌ ನಂ.1, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

Kannadaprabha News   | Asianet News
Published : Dec 26, 2021, 05:14 AM IST
ಉತ್ತಮ ಆಡಳಿತ ಸೂಚ್ಯಂಕ: ದೇಶದಲ್ಲೇ ಗುಜರಾತ್‌ ನಂ.1, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ಸಾರಾಂಶ

*   ಗುಜರಾತ್‌, ಮಹಾರಾಷ್ಟ್ರ, ಗೋವಾ ಟಾಪ್‌ 3 *   ಉತ್ತಮ ಆಡಳಿತ ದಿನದಂದು ಕೇಂದ್ರದ ವರದಿ *   ಶೇ.9ರಷ್ಟು ಪ್ರಗತಿ ಸಾಧಿಸಿ ಗ್ರೂಪ್‌ ಬಿನಲ್ಲಿ 5ನೇ ಸ್ಥಾನ ಪಡೆದ ಉತ್ತರ ಪ್ರದೇಶ   

ನವದೆಹಲಿ(ಡಿ.26): ವಿವಿಧ ಕ್ಷೇತ್ರಗಳಲ್ಲಿ ರಾಜ್ಯಗಳ ಆಡಳಿತ ವ್ಯವಸ್ಥೆ, ಆ ವ್ಯವಸ್ಥೆಯಲ್ಲಿನ ಸುಧಾರಣೆಗಳ ಮೇಲೆ ಬೆಳಕು ಚೆಲ್ಲುವ ‘ಉತ್ತಮ ಆಡಳಿತ ಸೂಚ್ಯಂಕ 2021’ (Good Governance Index 2021) ವರದಿಯನ್ನು ಕೇಂದ್ರ ಸರ್ಕಾರವು(Central Government) ಉತ್ತಮ ಆಡಳಿತ ದಿನವಾದ ಡಿ.25ರ ಶನಿವಾರ ಬಿಡುಗಡೆ ಮಾಡಿದೆ. ಸಮಗ್ರ ಪಟ್ಟಿಯಲ್ಲಿ, ಕಳೆದ ವರ್ಷ 3ನೇ ಸ್ಥಾನದಲ್ಲಿದ್ದ ಕರ್ನಾಟಕ(Karnataka) ಈ ಬಾರಿ 5.109 ಅಂಕಗಳೊಂದಿಗೆ 6ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಗುಜರಾತ್‌(Gujarat) (5.662), ಮಹಾರಾಷ್ಟ್ರ(Maharashtra) (5.425) ಹಾಗೂ ಗೋವಾ(Goa) (5.348) ರಾಜ್ಯಗಳು ಮೊದಲ 3 ಸ್ಥಾನ ಪಡೆದುಕೊಂಡಿವೆ.

ಒಟ್ಟು 10 ವಲಯಗಳಲ್ಲಿನ 58 ವಿಷಯಗಳನ್ನು ಆಧರಿಸಿ ಕೇಂದ್ರ ಸರ್ಕಾರವು ಈ ಸೂಚ್ಯಂಕವನ್ನು ಬಿಡುಗಡೆ ಮಾಡುತ್ತದೆ. ಈ ಬಾರಿ 4 ವಿಭಾಗದಲ್ಲಿ ರಾರ‍ಯಂಕಿಂಗ್‌ ಪ್ರಕಟಿಸಲಾಗಿದೆ. ದೊಡ್ಡ ರಾಜ್ಯಗಳ ಪಟ್ಟಿ1 (ಗ್ರೂಪ್‌ ಎ- 10 ರಾಜ್ಯ), ದೊಡ್ಡ ರಾಜ್ಯಗಳ ಪಟ್ಟಿ2 (ಗ್ರೂಪ್‌ ಬಿ- 8 ರಾಜ್ಯ), ಗುಡ್ಡಗಾಡು ರಾಜ್ಯಗಳು (11 ರಾಜ್ಯ), ಕೇಂದ್ರಾಡಳಿತ ಪ್ರದೇಶಗಳು (7) ಎಂದು ರಾಜ್ಯಗಳನ್ನು ವಿಂಗಡಿಸಲಾಗಿದೆ.

Covid Vaccine: ರಾಜ್ಯದ ಎಲ್ಲ 1.1 ಕೋಟಿ ಮಧ್ಯ ವಯಸ್ಕರಿಗೆ ಲಸಿಕೆ

10 ವಲಯ:

ಕೃಷಿ ಮತ್ತು ಸಂಬಂಧಿತ ಕ್ಷೇತ್ರ, ವಾಣಿಜ್ಯ ಮತ್ತು ಉದ್ಯಮ, ಮಾನವ ಸಂಪನ್ಮೂಲ ಅಭಿವೃದ್ಧಿ, ಸಾರ್ವಜನಿಕ ಆರೋಗ್ಯ, ಸಾರ್ವಜನಿಕ ಮೂಲಸೌಕರ್ಯ, ಆರ್ಥಿಕ ಆಡಳಿತ, ಸಾಮಾಜಿಕ ಕಲ್ಯಾಣ ಮತ್ತು ಅಭಿವೃದ್ಧಿ, ನ್ಯಾಯಾಂಗ ಮತ್ತು ಸಾರ್ವಜನಿಕ ಸುರಕ್ಷತೆ, ಪರಿಸರ, ನಾಗರಿಕ ಉದ್ದೇಶಿತ ಆಡಳಿತದಲ್ಲಿನ ರಾಜ್ಯಗಳನ್ನು ಸಾಧನೆ ಆಧರಿಸಿ ವರದಿ ತಯಾರಿಸಲಾಗಿದೆ.

ಉತ್ತಮ ಸಾಧನೆ:

2019ರಲ್ಲಿ ಬಿಡುಗಡೆ ಮಾಡಿದ್ದ ಸೂಚ್ಯಂಕಕ್ಕೆ ಹೋಲಿಸಿದರೆ ಗುಜರಾತ್‌ ಶೇ.12.3, ಮಹಾರಾಷ್ಟ್ರ ಶೇ.0.5 ಮತ್ತು ಗೋವಾ ಶೇ.24.7ರಷ್ಟು ಪ್ರಗತಿ ತೋರಿಸುವ ಮೂಲಕ ಅಗ್ರಸ್ಥಾನ ಪಡೆದಿವೆ. 10 ವಲಯಗಳ ಪೈಕಿ 5ರಲ್ಲಿ ಗುಜರಾತ್‌ ಪ್ರಥಮ ಸ್ಥಾನ ಪಡೆದಿದೆ. ಮಹಾರಾಷ್ಟ್ರ ಸರ್ಕಾರ ಕೃಷಿ, ಮಾನವ ಸಂಪನ್ಮೂಲ, ಸಾಮಾಜಿಕ ಕಲ್ಯಾಣ ಕ್ಷೇತ್ರದಲ್ಲಿ ಅಗ್ರಸ್ಥಾನ ಪಡೆದಿದೆ. ಅಚ್ಚರಿ ಎಂಬಂತೆ ಉತ್ತರ ಪ್ರದೇಶ(Uttara Pradesh) ಶೇ.9ರಷ್ಟು ಪ್ರಗತಿ ಸಾಧಿಸಿ ಗ್ರೂಪ್‌ ಬಿನಲ್ಲಿ 5ನೇ ಸ್ಥಾನ ಪಡೆದಿದೆ. ಅಷ್ಟು ಮಾತ್ರವಲ್ಲ ವಾಣಿಜ್ಯ ಮತ್ತು ಉದ್ಯಮ ವಲಯದಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಇದಲ್ಲದೆ ಸಾಮಾಜಿಕ ಕಲ್ಯಾಣ, ನ್ಯಾಯ ಮತ್ತು ಸಾರ್ವಜನಿಕ ಸುರಕ್ಷೆ ವಲಯದಲ್ಲೂ ಗಮನಾರ್ಹ ಪ್ರಗತಿ ದಾಖಲಿಸಿದೆ.

Karnataka Politics : ಜನರ ಸಹನೆಯ ಕಟ್ಟೆ ಒಡೆದಿದೆ : ಪ್ರಾಮಾಣಿಕವಾಗಿ ಇದ್ದರೆ ಮಾತ್ರ ಬೆಂಬಲ‌ ಸಿಗುತ್ತದೆ

ಕರ್ನಾಟಕ:

2019ರಲ್ಲಿ ಸಮಗ್ರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದ ಕರ್ನಾಟಕ ಇದೀಗ ಬಿಡುಗಡೆಯಾದ ವರದಿಯಲ್ಲಿ ಶೇ.0.2ರಷ್ಟು ಏರಿಕೆ ಕಂಡಿದ್ದರೂ, ಒಟ್ಟಾರೆ 3 ಸ್ಥಾನ ಕುಸಿತ ಕಂಡು 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದಿದೆ. ಕೃಷಿ ಮತ್ತು ಸಂಬಂಧಿತ ವಲಯ, ಸಾರ್ವಜನಿಕ ಮೂಲಸೌಕರ್ಯ ಮತ್ತು ಸೇವೆಗಳು ಹಾಗೂ ಸಮಾಜ ಕಲ್ಯಾಣ ಮತ್ತು ಅಭಿವೃದ್ಧಿ ವಲಯದಲ್ಲಿ ಕರ್ನಾಟಕ ಪ್ರಗತಿ ತೋರಿಸಿದೆ.

ಇತರ ಗ್ರೂಪ್‌ನ ಟಾಪ್‌ ರಾಜ್ಯ:

ಇನ್ನು ಗ್ರೂಪ್‌ ಬಿ ರಾಜ್ಯಗಳ ಪಟ್ಟಿಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಟಾಪ್‌, ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ದೆಹಲಿ, ಪುದುಚೇರಿ, ದಮನ್‌ ಮತ್ತು ದಿಯು, ಗುಡ್ಡಗಾಡು ರಾಜ್ಯಗಳ ಪೈಕಿ ಹಿಮಾಚಲಪ್ರದೇಶ, ಮಿಜೋರಾಂ ಮತ್ತು ಉತ್ತರಾಖಂಡ ಟಾಪ್‌ 3 ರಾಜ್ಯಗಳಾಗಿ ಹೊರಹೊಮ್ಮಿವೆ.

ಟಾಪ್‌ ರಾಜ್ಯಗಳು ಅಂಕ

1. ಗುಜರಾತ್‌ 5.662
2. ಮಹಾರಾಷ್ಟ್ರ 5.425
3. ಗೋವಾ 5.348
4. ಹರ್ಯಾಣ 5.327
5. ಕೇರಳ 5.216
6. ಕರ್ನಾಟಕ 5.109
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾನ್ಸರ್ ಹೋರಾಟದಲ್ಲಿರುವಾಗಲೇ ಕೆಲಸದಿಂದ ತೆಗೆದ ಕಂಪನಿ, ಗೇಟಿನ ಮುಂದೆ ಉಪವಾಸ ಹೋರಾಟ
ಡಿಸೆಂಬರ್‌ 31ರ ಒಳಗೆ ಈ ಇಂಪಾರ್ಟೆಂಟ್‌ ಕೆಲಸ ಪೂರ್ತಿ ಮಾಡಿ, ಮತ್ತೆ ಸರ್ಕಾರ ಈ ಅವಕಾಶ ನೀಡಲ್ಲ..!