ಬಿಜೆಪಿ ಭದ್ರಕೋಟೆ ಗುಜರಾತ್‌ನ 6 ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದೆ. ಸದ್ಯ ಮತಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದೆ. ಇತ್ತ ಸೂರತ್‌ನಲ್ಲಿ ಕಾಂಗ್ರೆಸ್‌ಗೆ ಆಮ್ ಆದ್ಮಿ ಪಕ್ಷ ಟಕ್ಕರ್ ನೀಡಿದೆ. ಚುನಾವಣಾ ಫಲಿತಾಂಶ ವಿವರ ಇಲ್ಲಿದೆ.
ಅಹಮ್ಮದಾಬಾದ್(ಫೆ.23): ಗುಜರಾತ್ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಇದೀಗ ಎಲ್ಲರ ಗಮನಸೆಳೆದಿದೆ. ಅಹಮ್ಮದಾಬಾದ್, ವಡೋದರ, ಸೂರತ್, ರಾಜ್‌ಕೋಟ್ ಜಾಮ್‌ನಗರ ಮತ್ತು ಭಾವ್‌ನಗರ್ ಒಟ್ಟು 6 ಮಹಾನಗರ ಪಾಲಿಕೆ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟು 578 ಸ್ಥಾನಗಳ ಮತ ಎಣಿಕೆಯಲ್ಲಿ ಬಿಜೆಪಿ ಸದ್ಯ 60 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 12 ಸ್ಥಾನದಲ್ಲಿ ಮುನ್ನಡೆ ಪಡೆದುಕೊಂಡಿದೆ.
ಬಿಜೆಪಿ ಭರ್ಜರಿ ಪ್ರವೇಶ : ಕಮಲ ಪಾಳಯಕ್ಕೆ ಬಂಪರ್
undefined
ವಡೋದರ, ರಾಜ್‌ಕೋಟ್ ಮತ್ತು ಜಾಮ್‌ನಗರದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಗೆಲುವಿನತ್ತ ಹೆಜ್ಜೆ ಹಾಕಿದೆ. ಬಿಜೆಪಿ ವಿರುದ್ದ ಬಾರಿ ಪ್ರಚಾರ ಕೈಗೊಂಡಿದ್ದ ಕಾಂಗ್ರೆಸ್‌ಗೆ ಈ ಬಾರಿಯೂ ಹಿನ್ನಡೆಯಾಗಿದೆ. ವಿಶೇಷ ಅಂದರೆ ಸೂರತ್ ಪಾಲಿಕೆಯಲ್ಲಿ ಬಿಜೆಪಿ ಸದ್ಯ 51 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಆಮ್ ಆದ್ಮಿ ಪಕ್ಷ 17 ಸ್ಥಾನಗಳಲ್ಲಿ ಮುನ್ನಡೆ ಸಾಧಿಸೋ ಮೂಲಕ ಇದೇ ಮೊದಲ ಬಾರಿಗೆ ಸೂರತ್‌ನಲ್ಲಿ AAP ಸಂಚಲನ ಮೂಡಿಸಿದೆ . ಆದರೆ ಪ್ರತಿ ಭಾರಿ ಬಿಜೆಪಿಗೆ ಪೈಪೋಟಿ ನೀಡುತ್ತಿದ್ದ ಕಾಂಗ್ರೆಸ್ ಈ ಬಾರಿ ಸೂರತ್‌ನಲ್ಲಿ ಇನ್ನೂ ಖಾತೆ ತೆರೆದಿಲ್ಲ.
ಕರ್ನಾಟಕದ ಮತ್ತೊಂದು ಚುನಾವಣೆಗೆ ದಿನಾಂಕ ಘೋಷಣೆ...!.
ವಡೋದರ;
ವಡೋದರ ಪಾಲಿಕೆ ಚುನಾವಣಾ ಫಲಿತಾಂಶ ಬಿಜೆಪಿಯತ್ತ ವಾಲಿದೆ. 76 ಸ್ಥಾನಗಳ ಪೈಕಿ 45ಸ್ಥಾನದಲ್ಲಿ ಗೆಲುವು ಪಡೆದುಕೊಂಡಿರುವ ಬಿಜೆಪಿ ಬಹುಮತ ಪಡೆದುಕೊಂಡಿದೆ. ಈ ಮೂಲಕ ಸತತ 4ನೇ ಬಾರಿಗೆ ವಡೋದರಲ್ಲಿ ಬಿಜೆಪಿ ಅಧಿಕಾರಕ್ಕೇರಲು ಸಜ್ಜಾಗಿದೆ.
ಜಾಮ್‌ನಗರ:
ಜಾಮ್‌ನಗರ 64 ಸ್ಥಾನಗಳ ಪೈಕಿ ಬಿಜೆಪಿ 40 ಸ್ಥಾನ ಗೆದ್ದುಕೊಂಡಿದೆ. ಈ ಮೂಲಕ ಜಾಮ್‌ನಗರದಲ್ಲೂ ಬಹುಮತ ಪಡೆದುಕೊಂಡಿದೆ. ಹೀಗಾಗಿ ಜಾಮ್‌ನಗರದಲ್ಲೂ ಬಿಜೆಪಿ ಅಧಿಕಾರಕ್ಕೇರಲು ರೆಡಿಯಾಗಿದೆ.
ಸದ್ಯದ ಚಿತ್ರಣ:
ಸೂರತ್ ಮಹಾನಗರ ಪಾಲಿಕೆ - 120 ಸ್ಥಾನ
ಬಿಜೆಪಿ - 51 (ಗೆಲುವ)
AAP - 13 (ಗೆಲುವು)
ಕಾಂಗ್ರೆಸ್- 0 (ಗೆಲುವು)
ವಡೋದರ ಮಹಾನಗರ ಪಾಲಿಕೆ - 76 ಸ್ಥಾನ
ಬಿಜೆಪಿ - 45 (ಗೆಲುವು)
ಕಾಂಗ್ರೆಸ್- 7 (ಗೆಲುವು)
ಜಾಮ್‌ನಗರ ಮಹಾನಗರ ಪಾಲಿಕೆ - 64 ಸ್ಥಾನ
ಬಿಜೆಪಿ - 40 (ಗೆಲುವು)
ಕಾಂಗ್ರೆಸ್- 5 (ಗೆಲುವು)
ಬಿಎಸ್‌ಪಿ - 3 (ಗೆಲುವು)
ಅಹಮ್ಮದಾಬಾದ್, ರಾಜ್‌ಕೋಟ್ ಹಾಗೂ ಭಾವ್‌ನಗರದಲ್ಲಿ ಆರಂಭಿಕ ಮುನ್ನಡೆ ಸಾಧಿಸಿರುವ ಬಿಜೆಪಿ ಬಹುಮತಗಳಿಸುವ ವಿಶ್ವಾಸದಲ್ಲಿದೆ.