Gujarat Earthquake: ಕಛ್‌ನಲ್ಲಿ ಕಂಪಿಸಿದ ಭೂಮಿ, ಆತಂಕದಲ್ಲಿ ಗುಜರಾತ್‌ ಜನತೆ

By BK Ashwin  |  First Published Mar 20, 2023, 2:46 PM IST

ಗುಜರಾತ್ ಹೆಚ್ಚಿನ ಭೂಕಂಪದ ಅಪಾಯವನ್ನು ಎದುರಿಸುತ್ತಿದೆ ಮತ್ತು 1819, 1845, 1847, 1848, 1864, 1903, 1938, 1956 ಮತ್ತು 2001 ರಲ್ಲಿ ಅಪಾಯಕಾರಿ ಘಟನೆಗಳಿಗೆ ಸಾಕ್ಷಿಯಾಗಿದೆ. ಹಾಗೂ, 2001 ರ ಕಛ್‌ ಭೂಕಂಪವು ಕಳೆದ ಎರಡು ಶತಮಾನಗಳಲ್ಲಿ ಭಾರತದಲ್ಲಿ ಸಂಭವಿಸಿದ ಮೂರನೇ ಅತಿದೊಡ್ಡ ಮತ್ತು ಎರಡನೇ ಅತ್ಯಂತ ವಿನಾಶಕಾರಿ ಭೂಕಂಪವಾಗಿತ್ತು.


ಕಛ್‌ (ಮಾರ್ಚ್‌ 20, 2023): ಗುಜರಾತ್‌ ಭೂಕಂಪ ಅಂದ್ರೆ ಕಛ್‌ ಭಾಗದಲ್ಲಿ 2001 ರಲ್ಲಿ ಭೂಕಂಪ ಸಂಭವಿಸಿರೋ ಘಟನೆ ಈಗಲೂ ಹಲವರ ಕಣ್ಮುಂದೆ ಬರುತ್ತೆ. ಇದೇ ಕಛ್‌ ಜಿಲ್ಲೆಯಲ್ಲಿ ಮತ್ತೆ ಭೂಕಂಪವಾಗಿದೆ. ಹೌದು, ಸೋಮವಾರ ಗುಜರಾತ್‌ನ ಕಛ್‌ ಜಿಲ್ಲೆಯಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್‌ ಮಾಪಕದಲ್ಲಿ 3.2 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಆದರೆ, ಅದೃಷ್ಟವಶಾತ್‌ ಯಾವುದೇ ಜೀವ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ.

ಸೋಮವಾರ ಬೆಳಿಗ್ಗೆ 7:35 ಕ್ಕೆ ಭೂಕಂಪನವು ದಾಖಲಾಗಿದೆ ಎಂದು ಇನ್‌ಸ್ಟಿಟ್ಯೂಟ್ ಆಫ್ ಸೀಸ್ಮಾಲಾಜಿಕಲ್ ರಿಸರ್ಚ್ (ISR) ತಿಳಿಸಿದೆ. ಇನ್ನು, ಭೂಕಂಪದ ಕೇಂದ್ರಬಿಂದು ಕಛ್‌ನ ಭಚೌ ನಗರದಿಂದ ಸುಮಾರು 10 ಕಿಮೀ ಉತ್ತರ-ಈಶಾನ್ಯ (ಎನ್‌ಎನ್‌ಇ) ದೂರದಲ್ಲಿದೆ ಎಂದು ಮಾಹಿತಿ ತಿಳಿದುಬಂದಿದೆ.

Tap to resize

Latest Videos

ಭೌಗೋಳಿಕವಾಗಿ, ಕಛ್‌ ಅತ್ಯಂತ 'ಹೆಚ್ಚಿನ ಅಪಾಯ' ಭೂಕಂಪನ ವಲಯದಲ್ಲಿದೆ. ಈ ಭಾಗದಲ್ಲಿ ಜನವರಿ 2001 ರಲ್ಲಿ ವಿನಾಶಕಾರಿ ಭೂಕಂಪ ಸಂಭವಿಸಿತ್ತು. ಆ ವೇಳೆ 13,800 ಜನರು ಮೃತಪಟ್ಟಿದ್ದರು ಮತ್ತು 1.67 ಲಕ್ಷ ಜನರು ಗಾಯಗೊಂಡಿದ್ದರು. ಭೂಕಂಪದಿಂದಾಗಿ ಜಿಲ್ಲೆಯ ವಿವಿಧ ಪಟ್ಟಣಗಳು ಮತ್ತು ಗ್ರಾಮಗಳಲ್ಲಿ ಆಸ್ತಿಪಾಸ್ತಿಗಳಿಗೆ ತೀವ್ರ ಹಾನಿಯಾಗಿದೆ.

ಇದನ್ನು ಓದಿ: ಟರ್ಕಿಗೆ ತೆರಳಿದ್ದ ಎನ್‌ಡಿಆರ್‌ಎಫ್‌ ತಂಡಕ್ಕೆ ಮೋದಿ ಮೆಚ್ಚುಗೆ: ಇನ್ನೊಬ್ಬರ ರಕ್ಷಣೆ ನಮ್ಮ ಕರ್ತವ್ಯ ಎಂದ ಪ್ರಧಾನಿ

ಅಲ್ಲದೆ, ಗುಜರಾತ್ ಹೆಚ್ಚಿನ ಭೂಕಂಪದ ಅಪಾಯವನ್ನು ಎದುರಿಸುತ್ತಿದೆ ಮತ್ತು 1819, 1845, 1847, 1848, 1864, 1903, 1938, 1956 ಮತ್ತು 2001 ರಲ್ಲಿ ಅಪಾಯಕಾರಿ ಘಟನೆಗಳಿಗೆ ಸಾಕ್ಷಿಯಾಗಿದೆ. ಹಾಗೂ, 2001 ರ ಕಛ್‌ ಭೂಕಂಪವು ಕಳೆದ ಎರಡು ಶತಮಾನಗಳಲ್ಲಿ ಭಾರತದಲ್ಲಿ ಸಂಭವಿಸಿದ ಮೂರನೇ ಅತಿದೊಡ್ಡ ಮತ್ತು ಎರಡನೇ ಅತ್ಯಂತ ವಿನಾಶಕಾರಿ ಭೂಕಂಪವಾಗಿತ್ತು.

ಇದನ್ನೂ ಓದಿ: ಟರ್ಕಿ - ಸಿರಿಯಾ ಭೂಕಂಪ: ಪರಿಹಾರ ಕಾರ್ಯ ಸುಗಮಕ್ಕೆ ಭಾರತೀಯ ಸೇನೆಯಿಂದ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿ

click me!