ಗುಜರಾತ್ ಹೈಕೋರ್ಟ್ ವಿರುದ್ಧ ಸುಪ್ರೀಂಕೋರ್ಟ್‌ ತೀವ್ರ ಗರಂ

Published : Aug 22, 2023, 11:24 AM IST
ಗುಜರಾತ್ ಹೈಕೋರ್ಟ್ ವಿರುದ್ಧ ಸುಪ್ರೀಂಕೋರ್ಟ್‌ ತೀವ್ರ ಗರಂ

ಸಾರಾಂಶ

ತನಗಿಂತ ಉನ್ನತವಾದ ನ್ಯಾಯಾಲಯಗಳು ನೀಡಿದ ಆದೇಶಕ್ಕೆ ವಿರುದ್ಧವಾಗಿ ಕೆಳಗಿನ ನ್ಯಾಯಾಲಯಗಳು ಆದೇಶ ಪ್ರಕಟಿಸುವಂತಿಲ್ಲ. ಇಂತಹ ನಡವಳಿಕೆ ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾದುದು ಎಂದು ಸುಪ್ರೀಂಕೋರ್ಟ್‌ ಸೋಮವಾರ ತಾಕೀತು ಮಾಡಿದೆ.  

ನವದೆಹಲಿ: ತನಗಿಂತ ಉನ್ನತವಾದ ನ್ಯಾಯಾಲಯಗಳು ನೀಡಿದ ಆದೇಶಕ್ಕೆ ವಿರುದ್ಧವಾಗಿ ಕೆಳಗಿನ ನ್ಯಾಯಾಲಯಗಳು ಆದೇಶ ಪ್ರಕಟಿಸುವಂತಿಲ್ಲ. ಇಂತಹ ನಡವಳಿಕೆ ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾದುದು ಎಂದು ಸುಪ್ರೀಂಕೋರ್ಟ್‌ ಸೋಮವಾರ ತಾಕೀತು ಮಾಡಿದೆ.  ಅತ್ಯಾಚಾರ ಸಂತ್ರಸ್ತೆಯೊಬ್ಬರ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಸೋಮವಾರ ನಿಗದಿಯಾಗಿದ್ದರೂ, ಆ ಅರ್ಜಿಯ ಕುರಿತಂತೆ ಶನಿವಾರವೇ ಆದೇಶ ಹೊರಡಿಸಿದ್ದ ಗುಜರಾತ್‌ ಹೈಕೋರ್ಟ್‌ನ ಕ್ರಮದ ವಿರುದ್ಧ ಸರ್ವೋಚ್ಚ ನ್ಯಾಯಾಲಯ ಈ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.

ಗುಜರಾತ್‌ ಹೈಕೋರ್ಟ್‌ನಲ್ಲಿ (Gujarat High court) ಏನಾಗುತ್ತಿದೆ? ತನಗಿಂತ ಉನ್ನತವಾದ ನ್ಯಾಯಾಲಯದ ವಿರುದ್ಧ ದೇಶದ ಯಾವುದೇ ನ್ಯಾಯಾಲಯ ಕೂಡ ಆದೇಶ ಹೊರಡಿಸುವಂತಿಲ್ಲ. ಇದು ಸಾಂವಿಧಾನಿಕ ತತ್ವಗಳಿಗೆ ವಿರುದ್ಧ ಎಂದು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ (B V Nagaratna) ಹಾಗೂ ಉಜ್ಜಲ್‌ ಭುಯಾನ್‌ ಅವರಿದ್ದ ಪೀಠ ಹೇಳಿತು.

ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ, ವಿಚಾರಣೆಗೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ

ಏನಿದು ಪ್ರಕರಣ?:

ಅತ್ಯಾಚಾರ ಸಂತ್ರಸ್ತೆಯೊಬ್ಬಳು (Rape victim) ಗರ್ಭಪಾತಕ್ಕೆ ಅನುಮತಿ ಕೋರಿ ಹೈಕೋರ್ಟ್‌ (Gujarat High court) ಮೊರೆ ಹೋಗಿದ್ದರು. ವೈದ್ಯಕೀಯ ತಂಡವೊಂದನ್ನು ಹೈಕೋರ್ಟ್‌ ರಚಿಸಿತ್ತು. ಗರ್ಭ ತೆಗೆಸಲು ವೈದ್ಯರು ಅನುಮತಿ ನೀಡಿದ್ದರು. ಆ ವರದಿ ಬಂದ 12 ದಿನಗಳ ಬಳಿಕ ಹೈಕೋರ್ಟ್‌ ಆ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಿತ್ತು. ಇದರ ವಿರುದ್ಧ ಸಂತ್ರಸ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್‌ನ ವಿಳಂಬ ಧೋರಣೆಯನ್ನು ತರಾಟೆಗೆ ತೆಗೆದುಕೊಂಡಿದ್ದ  ಸುಪ್ರೀಂಕೋರ್ಟ್, ಸೋಮವಾರ ಆದೇಶ ಹೊರಡಿಸುವುದಾಗಿ ಶನಿವಾರದ ವಿಚಾರಣೆ ವೇಳೆ ತಿಳಿಸಿತ್ತು.

ಸೋಷಿಯಲ್‌ ಮೀಡಿಯಾ ಬಳಸಿದರೆ ಪರಿಣಾಮ ಕೂಡ ಎದುರಿಸಿ: ಸುಪ್ರೀಂ ಖಡಕ್‌ ಉತ್ತರ

ಈ ನಡುವೆ ಗುಜರಾತ್‌ ಹೈಕೋರ್ಟ್ ಸಂತ್ರಸ್ತೆಯ ಅರ್ಜಿಯನ್ನು ಶನಿವಾರ ವಜಾಗೊಳಿಸಿತ್ತು. ಆದರೆ ಸೋಮವಾರದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಗರ್ಭಪಾತಕ್ಕೆ (abortion) ಅನುಮತಿ ನೀಡಿತು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು