ಆರೋಗ್ಯದಲ್ಲಿ ಏರುಪೇರು; ಭಾಷಣದ ವೇಳೆ ಕುಸಿದು ಬಿದ್ದ ಗುಜರಾತ್ ಮುಖ್ಯಮಂತ್ರಿ!

By Suvarna NewsFirst Published Feb 14, 2021, 10:09 PM IST
Highlights

ವಡೋದರಲ್ಲಿ ಆಯೋಜಿಸಿದ ರ‍್ಯಾಲಿಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಗುಜರಾತ್ ಮುಖ್ಯಮಂತ್ರಿ ಕುಸಿದು ಬಿದ್ದಿದ್ದಾರೆ. ಹೆಚ್ಚಿನ ವಿವರ ಇಲ್ಲಿದೆ.

ವಡೋದರ(ಫೆ.14): ವಡೋದರಲ್ಲಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಕುಸಿದು ಬಿದ್ದಿದ್ದಾರೆ.  ವೇದಿಕೆಯಲ್ಲಿ ಕುಸಿದ ರೂಪಾನಿಗೆ ತಕ್ಷಣವೇ  ನೀರು ನೀಡಲಾಗಿದೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆರೋಗ್ಯ ಸ್ಥಿರವಾಗಿದ್ದು, ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ವೈದ್ಯರು ಖಚಿತ ಪಡಿಸಿದ್ದಾರೆ.

ಗುಜರಾತ್ ದ್ವೇಷಿಸಿದ ರಾಹುಲ್ ಗಾಂಧಿ ವಿರುದ್ಧ ಆಕ್ರೋಶ!

ಫೆಬ್ರವರಿ 21 ರಂದು ನಡೆಯಲಿರುವ ಸ್ಥಳೀಯ ಚುನಾವಣೆಗಾಗಿ ಮೂರು ರ‍್ಯಾಲಿ ಆಯೋಜಿಸಲಾಗಿತ್ತು. ವಡೋದರ ರ‍್ಯಾಲಿವೇಳೆ ಬಿಪಿ ಕೊಂಚ ಏರುಪೇರಾಗಿದೆ. ಸತತ ರ‍್ಯಾಲಿ ಹಾಗೂ ಸಮಾರಂಭಗಳಿಂದ ಬಳಲಿದ ರೂಪಾನಿ ಭಾಷಣದ ವೇಳೆ ಪ್ರಜ್ಞೆ ತಪ್ಪಿ ದಿಢೀರ್ ಕುಸಿದಿದ್ದಾರೆ. ವೇದಿಕೆಯಲ್ಲಿ ರೂಪಾನಿ ಆರೋಗ್ಯ ಏರುಪೇರಾಗುತ್ತಿದ್ದಂತೆ, ಅಧಿಕಾರಿಗಳು ರೂಪಾನಿ ಹತ್ತಿರ ಬಂದಿದ್ದಾರೆ. ರೂಪಾನಿಯವನ್ನು ಅವರಿಗೆ ನೆರವು ನೀಡುವ ಯತ್ನ ಮಾಡಿದ್ದಾರೆ. ಅಷ್ಟರಲ್ಲೇ ರೂಪಾನಿ ಕುಸಿದ ಬಿದಿದ್ದಾರೆ.

 

वडोदरा में चुनावी सभा में भाषण करते वक्त मंच पे गिर पड़े बताया जा रहा अचानक रुपानी को चककर आ गया
विजय रुपाणी की तबियत अब ठीक बताई जा रही है उनका इलाज कर रहे डॉक्टर्स के अनुसार लगातार स्ट्रेस के कारण उनका BP लो हो गया था pic.twitter.com/TkPKn0jXIY

— Nirnay Kapoor (@nirnaykapoor)

 ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸುವ ವೇಳೆ ರೂಪಾನಿಗೆ ಪ್ರಜ್ಞೆ ಬಂದಿದೆ. ಇನ್ನು ವೈದ್ಯರು ರಕ್ತದ ಒತ್ತಡದಲ್ಲಿ ಏರುಪೇರಾದ ಕಾರಣ ಈ ರೀತಿ ಆಗಿದೆ. ಸದ್ಯ ರೂಪಾನಿ ವಿಶ್ರಾಂತಿಯಲ್ಲಿದ್ದು, ಆರೋಗ್ಯವಾಗಿದ್ದಾರೆ ಎಂದು ಮೆಹ್ತಾ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

click me!