
Gujarat Mahisagar river bridge collapse: ಗುಜರಾತ್‌ನ ಮಹಿಸಾಗರ್ ನದಿಗೆ ನಿರ್ಮಿಸಲಾದ ಸೇತುವೆ ಕುಸಿದು, ಮೂವರು ಮೃತಪಟ್ಟ ದುರ್ಘಟನೆ ನಡೆದಿದೆ. ಇದುವರೆಗೆ ಹಲವು ವಾಹನಗಳು ನದಿಗೆ ಬಿದ್ದಿವೆ, ಐವರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.
ಗುಜರಾತ್‌ನ ಮಹಿಸಾಗರ್ ನದಿಯ ಮೇಲೆ 1981ರಲ್ಲಿ ನಿರ್ಮಾಣವಾಗಿ 1985ರಲ್ಲಿ ತೆರೆಯಲ್ಪಟ್ಟಿತ್ತು. ಇದೀಗ ಸೇತುವೆ ಕುಸಿದು ದುರಂತ ಸಂಭವಿಸಿದೆ. ಘಟನೆಯಲ್ಲಿ ಐದು ವಾಹನ ಸೇರಿದಂತೆ ಎರಡು ಟ್ರಕ್‌ಗಳು ಸಂಪೂರ್ಣವಾಗಿ ಮುಳುಗಿದರೆ, ಒಂದು ಟ್ಯಾಂಕರ್ ಅರ್ಧದಷ್ಟು ನೇತಾಡುವ ಸ್ಥಿತಿಯಲ್ಲಿದೆ.
ರಸ್ತೆ ಮತ್ತು ಕಟ್ಟಡಗಳ ಇಲಾಖೆಯ ಕಾರ್ಯದರ್ಶಿ ಪಿ.ಆರ್. ಪಟೇಲಿಯಾ ಈ ದುರಂತದ ಬಗ್ಗೆ ಪ್ರತಿಕ್ರಿಯಿಸಿದ್ದು, ಸೇತುವೆಯ ಗಂಭೀರ ಹಾನಿಯಿಂದ ಈ ಅಪಘಾತ ಸಂಭವಿಸಿದೆ. ತಜ್ಞರ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದಿದ್ದಾರೆ. ಘಟನೆಯ ತಕ್ಷಣದಿಂದಲೇ ರಕ್ಷಣಾ ಕಾರ್ಯ ಆರಂಭವಾಗಿದ್ದು, ಈಜುಗಾರರು ಶವಗಳನ್ನು ಹೊರತೆಗೆಯುವ ಕೆಲಸದಲ್ಲಿ ತೊಡಗಿದ್ದಾರೆ ಎಂದಿದ್ದಾರೆ.
ಸ್ಥಳೀಯ ಶಾಸಕ ಚೈತನ್ಯ ಸಿಂಗ್ ಝಾಲಾ ಈ ಸೇತುವೆಯ ಶಿಥಿಲ ಸ್ಥಿತಿಯ ಬಗ್ಗೆ ಈ ಹಿಂದೆಯೇ ಎಚ್ಚರಿಕೆ ನೀಡಿದ್ದರೂ, ಸಂಚಾರವನ್ನು ನಿಲ್ಲಿಸದಿರುವುದು ದುರಂತಕ್ಕೆ ಕಾರಣವಾಯಿತು ಎಂದಿದ್ದಾರೆ. ಸರ್ಕಾರ ಈಗ 212 ಕೋಟಿ ರೂ. ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದು, ಸಮೀಕ್ಷೆಯೂ ನಡೆದಿದೆ ಎಂದರು.
ಮುಖ್ಯಮಂತ್ರಿಗಳು ತಾಂತ್ರಿಕ ತಜ್ಞರ ತಂಡಕ್ಕೆ ತನಿಖೆಯ ಜವಾಬ್ದಾರಿ ವಹಿಸಿದ್ದಾರೆ. ಈ ಘಟನೆಯು ಹಳೆಯ ಮೂಲಸೌಕರ್ಯದ ನಿರ್ವಹಣೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಸಕಾಲಿಕ ಕ್ರಮಗಳಿದ್ದರೆ ಈ ದುರಂತವನ್ನು ತಡೆಯಬಹುದಿತ್ತು. ತನಿಖಾ ವರದಿಯ ಫಲಿತಾಂಶ ಮತ್ತು ಜವಾಬ್ದಾರರ ವಿರುದ್ಧದ ಕ್ರಮಕ್ಕಾಗಿ ಕಾಯಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ