ವಿಮಾನದಲ್ಲಿ ನಾನ್-ವೆಜ್ ಆಹಾರ ಬ್ಯಾನ್ ಮಾಡಿ!

Published : Apr 06, 2022, 11:52 PM IST
ವಿಮಾನದಲ್ಲಿ ನಾನ್-ವೆಜ್ ಆಹಾರ ಬ್ಯಾನ್ ಮಾಡಿ!

ಸಾರಾಂಶ

ನವೆಂಬರ್‌ನಲ್ಲಿ ರಾಜ್ಯದ ನಾಲ್ಕು ಮುನ್ಸಿಪಲ್ ಕಾರ್ಪೊರೇಷನ್‌ಗಳು ಮಾಂಸಾಹಾರಿ ಸ್ಟಾಲ್‌ಗಳು ಮತ್ತು ಕಿಯೋಸ್ಕ್‌ಗಳ ಮೇಲೆ ಹಠಾತ್ ನಿಷೇಧ ಹೇರಿದ ನಂತರ, ಈಗ ಗುಜರಾತ್ ಪ್ರಾಣಿ ಕಲ್ಯಾಣ ಮಂಡಳಿಯು ವಿಮಾನಗಳಲ್ಲಿ ಮಾಂಸಾಹಾರಿ ಆಹಾರವನ್ನು ನೀಡುವುದನ್ನು ನಿಷೇಧಿಸುವಂತೆ ಒತ್ತಾಯಿಸಿದೆ.

ನವದೆಹಲಿ (ಏ. 6): ಏರ್ ಇಂಡಿಯಾ (Air India) ವಿಮಾನದಲ್ಲಿ ಜೈನ ಪ್ರಯಾಣಿಕರಿಗೆ (Jain passenger) ಆಕಸ್ಮಿಕವಾಗಿ ಮಾಂಸಾಹಾರಿ ಆಹಾರವನ್ನು ನೀಡಿದ ಕೆಲವು ದಿನಗಳ ನಂತರ, ಗುಜರಾತ್ ಪ್ರಾಣಿ ಕಲ್ಯಾಣ ಮಂಡಳಿ (Gujarat Animal Welfare Board ) ಮತ್ತು ಜೈನ ಸಮುದಾಯವು (Jain community ) ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (civil aviation minister Jyotiraditya Scindia) ಅವರಿಗೆ ಪತ್ರ ಬರೆದಿದ್ದು, ದೇಶೀಯ ವಿಮಾನಗಳಲ್ಲಿ ಮಾಂಸಾಹಾರ ಊಟವನ್ನು ನೀಡುವುದನ್ನು ನಿಷೇಧಿಸುವಂತೆ ಕೋರಿದೆ.

"ಸಸ್ಯಾಹಾರಿ ಪ್ರಯಾಣಿಕರ ಪರವಾಗಿ ಈ ವಿನಂತಿಯನ್ನು ಮಾಡಲಾಗುತ್ತಿದೆ... ಕಟ್ಟುನಿಟ್ಟಾದ ಸಸ್ಯಾಹಾರಿ ಪ್ರಯಾಣಿಕರಿಗೆ ಸಸ್ಯಾಹಾರಿ ಆಹಾರದ ಬದಲಿಗೆ ಮಾಂಸಾಹಾರಿ ಆಹಾರವನ್ನು ನೀಡಿದಾಗ ಹೆಚ್ಚು ತೊಂದರೆ ಮತ್ತು ಕಸಿವಿಸಿ ಅನುಭವಿಸುತ್ತಾರೆ" ಎಂದು ಮಂಡಳಿಯ ಸದಸ್ಯ ರಾಜೇಂದ್ರ ಶಾ ಪತ್ರದಲ್ಲಿ ತಿಳಿಸಿದ್ದಾರೆ. ವಿಶೇಷವೆಂದರೆ, ಅಂತರರಾಷ್ಟ್ರೀಯ ಮಾರ್ಗದಲ್ಲಿ ಸಂಭವಿಸಿದ ಘಟನೆಗಾಗಿ ದೇಶೀಯ ವಿಮಾನಗಳಲ್ಲಿ ಮಾಂಸಾಹಾರಿ ಆಹಾರವನ್ನು ನಿಷೇಧಿಸುವಂತೆ ಗುಂಪು ಒತ್ತಾಯಿಸಿದೆ.

ಇತ್ತೀಚೆಗಷ್ಟೇ ಟ್ವಿಟರ್‌ನಲ್ಲಿ ತಮ್ಮ ಅನುಭವವನ್ನು ಬರೆದುಕೊಂಡಿದ್ದ ಪ್ರಯಾಣಿಕ ರಾಘವೇಂದ್ರ ಜೈನ್ ಅವರು, ಮಾರ್ಚ್ 25 ರಂದು ಏರ್ ಇಂಡಿಯಾ ವಿಮಾನದಲ್ಲಿ ಟೋಕಿಯೊದಿಂದ ದೆಹಲಿಗೆ ಕುಟುಂಬದೊಂದಿಗೆ ಪ್ರಯಾಣಿಸಿದ್ದಾಗಿ ಹೇಳಿದ್ದರು. ತಾನು ಸಸ್ಯಾಹಾರಿ ಊಟವನ್ನು ಮೊದಲೇ ಬುಕ್ ಮಾಡಿದ್ದೆ ಮತ್ತು ಚೆಕ್-ಇನ್ ಕೌಂಟರ್‌ನಲ್ಲಿ ಅವುಗಳನ್ನು ಖಚಿತಪಡಿಸಿದ್ದಾರೆ ಎಂದು ಹೇಳಿದ್ದರು. ಇದರ ನಡುವೆಯೂ ಸಿಬ್ಬಂದಿ ಮಾಂಸಾಹಾರಿ ಊಟ ನೀಡಿದ್ದರು ಎಂದಿದ್ದಾರೆ.

ಜೈನ್ ಅವರು ಸಿಬ್ಬಂದಿಯನ್ನು ಪರಿಶೀಲಿಸಲು ಕೇಳಿದರೂ, ಇಬ್ಬರು ಸಿಬ್ಬಂದಿಗಳು ಸಾಂದರ್ಭಿಕವಾಗಿ ಊಟದ ಪ್ರಕಾರವನ್ನು ಪರಿಶೀಲಿಸಿ, ಇದು ಸಸ್ಯಾಹಾರಿ ಊಟ ಎಂದು ಭರವಸೆ ನೀಡಿದರು. ವಿಮಾನದುದ್ದಕ್ಕೂ ಸಿಬ್ಬಂದಿ ತಮಗೆ ಕಿರುಕುಳ ನೀಡಿದ್ದು, ತಪ್ಪಿಗೆ ಕ್ಷಮೆಯನ್ನೂ ಕೇಳಿಲ್ಲ ಎಂದು ಆರೋಪಿಸಿದ್ದಾರೆ. ಘಟನೆಯ ನಂತರ, ಏರ್ ಇಂಡಿಯಾದ ಟೋಕಿಯೊ-ದೆಹಲಿ ವಿಮಾನದ ಇಬ್ಬರು ಕ್ಯಾಬಿನ್ ಸಿಬ್ಬಂದಿಯನ್ನು ವಿಮಾನದಿಂದ ಕೆಳಗಿಳಿಸಲಾಗಿದ್ದ, ಈ ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ.  'ಈ ಪ್ರಯಾಣಿಕ ಈರುಳ್ಳಿ, ಬೆಳ್ಳುಳ್ಳಿ ಮತ್ತು ಆಲೂಗಡ್ಡೆಯನ್ನು ಸಹ ತಿನ್ನುವುದಿಲ್ಲ. ಅವರ ಪೋಷಕರು ಕೂಡ ಘಟನೆಯಿಂದ ಮನನೊಂದಿದ್ದಾರೆ' ಎಂದು ರಾಜೇಂದ್ರ ಶಾ ಪತ್ರದಲ್ಲಿ ಬರೆದಿದ್ದಾರೆ.

ಹಲಾಲ್ ಕಟ್ ಮಾಡಿದ್ದೆ ನಾವು ತಿನ್ನೋದು, ಮಾಂಸ ತಿನ್ನದವರಿಂದ ವಿವಾದ ಸೃಷ್ಟಿ: ಸಿದ್ದರಾಮಯ್ಯ

ದೆಹಲಿಯಲ್ಲಿ ಮಾಂಸ ನಿಷೇಧದ ಬಗ್ಗೆ ಆಹಾರ ಪೋಲೀಸಿಂಗ್ ಕುರಿತು ಚರ್ಚೆಯನ್ನು ಆರಂಭವಾಗಿರುವ ನಡುವೆಯೇ ಈ ಪತ್ರ ಬಂದಿದೆ. ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (SDMC) ಈ ವಾರದ ಆರಂಭದಲ್ಲಿ ತನ್ನ ವ್ಯಾಪ್ತಿಯಲ್ಲಿ ಬರುವ ಮಾಂಸದ ಅಂಗಡಿಗಳನ್ನು ನವರಾತ್ರಿಯ ಒಂಬತ್ತು ದಿನಗಳ ಕಾಲ ಮುಚ್ಚಬೇಕು ಎಂದು ಆದೇಶಿಸಿತ್ತು. ಯಾವುದೇ ವಿನಾಯಿತಿ ಇಲ್ಲದೆ ಎಲ್ಲಾ ಅಂಗಡಿಗಳನ್ನು ಮುಚ್ಚಲಾಗುವುದು. ಮಾಂಸಾಹಾರವನ್ನು ಬಹಿರಂಗವಾಗಿ ಪ್ರದರ್ಶಿಸುವುದರಿಂದ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗುತ್ತಿದೆ ಎಂದು ಆಯುಕ್ತರಿಗೆ ಹೇಳಿದ್ದು ಅವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದೆ.

Chaitra Navratri ಚೈತ್ರ ನವರಾತ್ರಿ ವೇಳೆ ಮದ್ಯ,ಮಾಂಸ ಮಾರಾಟ ನಿಷೇಧಿಸಲು ದಕ್ಷಿಣ ದೆಹಲಿ ಮೇಯರ್ ಆಗ್ರಹ!

ನಂತರ ಅವರು ಮಾಂಸ ಮಾರಾಟದ ಮೇಲಿನ ನಿಷೇಧವನ್ನು ಸಮರ್ಥಿಸಲು ದೆಹಲಿಯ ಶೇಕಡಾ 99 ರಷ್ಟು ಕುಟುಂಬಗಳು ನವರಾತ್ರಿಯ ಸಮಯದಲ್ಲಿ ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಸಹ ತಿನ್ನುವುದಿಲ್ಲ ಎಂಬ ಅಚ್ಚರಿಯ ಹೇಳಿಕೆಯನ್ನು ಎಸ್ ಡಿಎಂಸಿ ನೀಡಿದೆ. ಮಂಗಳವಾರ, ಪೂರ್ವ ದೆಹಲಿಯ ಮೇಯರ್ ಶ್ಯಾಮ್ ಸುಂದರ್ ಅಗರ್ವಾಲ್ ಅವರು ನವರಾತ್ರಿಯ ಸಮಯದಲ್ಲಿ ಮಾಂಸ ನಿಷೇಧವನ್ನು ಬೆಂಬಲಿಸಿದ್ದಾರೆ. "ನಾನು ಈಗಾಗಲೇ ಎಲ್ಲಾ ಮಾಂಸ ಮಾರಾಟಗಾರರಿಗೆ ಹಿಂದೂ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಆ ದಿನಗಳಲ್ಲಿ ತಮ್ಮ ಅಂಗಡಿಗಳನ್ನು ಮುಚ್ಚುವಂತೆ ಮನವಿ ಮಾಡಿದ್ದೇನೆ" ಎಂದು ಅಗರ್ವಾಲ್ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!