ಇತ್ತೀಚೆಗೆ ಕಾಡು ಪ್ರಾಣಿಗಳ ಮೇಲೆ ಮಾನವನ ಕ್ರೌರ್ಯ ಹೆಚ್ಚಾಗುತ್ತಿದೆ. ಅದರಲ್ಲೂ ಆನೆಗಳ ಮೇಲೆ ಅತೀ ಕ್ರೂರವಾಗಿ ದಾಳಿ ಮಾಡಲಾಗುತ್ತಿದೆ. ಇತ್ತೀಚೆಗೆ ಗರ್ಭಿಣಿ ಆನೆಗೆ ಸ್ಫೋಟಕ ನೀಡಿದ ಕೊಂದ ಘಟನೆಯ ನೋವು ಇನ್ನು ಮಾಸಿಲ್ಲ. ಇದರ ಬೆನ್ನಲ್ಲೇ ಇದೀಗ ಆನೆಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ನೋವಿನಿಂದ ಚೀರಾಡಿದ ಆನೆ ನರಳಿ ಪ್ರಾಣ ಬಿಟ್ಟಿದೆ. ಈ ಕುರಿತ ವಿವರ ಇಲ್ಲಿದೆ.
ತಮಿಳುನಾಡು(ಜ.22): ಕಾಡು ಕ್ಷೀಣಿಸುತ್ತಿದೆ. ಕಾಡಿನಲ್ಲಿ ಪ್ರಾಣಿಗಳ ಆಹಾರವನ್ನೂ ಮನುಷ್ಯರೇ ಕಿತ್ತು ತಿನ್ನುತ್ತಿದ್ದಾರೆ. ಹೀಗಾಗಿ ಕಾಡು ಪ್ರಾಣಿಗಳು ನಾಡಿಗೆ ಕಾಲಿಡುತ್ತಿರುವುದು ಸಾಮಾನ್ಯವಾಗಿದೆ. ಹೀಗೆ ನಾಡಿಗೆ ಬಂದ ಪ್ರಾಣಿಗಳಿಗೆ ಚಿತ್ರ ಹಿಂಸೆ ನೀಡಲಾಗುತ್ತಿದೆ. ಈಗಾಗಲೇ ಹಲವು ಘಟನೆಗಳು ಈ ಕುರಿತು ವರದಿಯಾಗಿದೆ. ಇದೀಗ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮಾಸಿನಗುಡಿಯಲ್ಲಿ ಅತ್ಯಂತ ಕ್ರೂರವಾಗಿ ಆನೆಯನ್ನು ಕೊಲ್ಲಲಾಗಿದೆ. ಈ ವಿಡಿಯೋ ನೋಡಿದರೆ ಎಂತರವ ಕಣ್ಣಲ್ಲು ನೀರು ಬರುತ್ತದೆ.
ಗರ್ಭಿಣಿ ಆನೆಗೆ ಸ್ಫೋಟಕವಿಟ್ಟು ಹಣ್ಣು ನೀಡಿದ ದುರುಳರು, ನರಕವೇದನೆಯಿಂದ ಪ್ರಾಣಬಿಟ್ಟ ಗಜ!.
ಮಾಸಿನಗುಡಿಯಲ್ಲಿನ ರೆಸಾರ್ಟ್ ಬಳಿ ಆನೆಯೊಂದು ಆಹಾರ ಹುಡುಕುತ್ತಾ ಬಂದಿದೆ. ರಾತ್ರಿ ವೇಳೆ ಬಂದ ಆನೆಗೆ ಇಲ್ಲಿನ ಮೂವರ ಗುಂಪು ಚಿತ್ರ ಹಿಂಸೆ ನೀಡಿದೆ. ಬೆಂಕಿಯಿಂದ ಆನೆಗೆ ಹಿಂಸೆ ನೀಡಿದ್ದಾರೆ. ಬೆಂಕಿಯ ಕೆನ್ನಾಲಿಗೆ ಆನೆಯ ಮೈಗೆ ಹತ್ತಿಕೊಂಡಿದೆ. ಒಂದೇ ಸಮನೆ ಆನೆಯ ಮೇಲಿನ ಕೂದಲಿಗೆ ಬೆಂಕಿ ಹತ್ತಿಕೊಂಡ ಕಾರಣ, ದಿಕ್ಕುಪಾಲಾಗಿ ಒಡತೊಡಗಿದೆ.
ಬೆಂಕಿ ನಂದಿಸಲು ಆನೆ ಹರಸಾಹಸಪಟ್ಟಿದೆ. ಮರಗಳಿಗೆ ದೇಹವನ್ನು ಉಜ್ಜತೊಡಗಿದೆ. ಮೊದಲೆ ಬೆಂಕಿ ತಗುಲಿದ ಕಾರಣ ಆನೆಯ ಚರ್ಮ ಬೆಂದು ಹೋಗಿದೆ. ಇತ್ತ ಮರಗಳಿಗೆ ಉಜ್ಜಿದ ಕಾರಣ ಚರ್ಮ ಕಿತ್ತು ಹೋಗಿದೆ. ಕೆಲ ದಿನಗಳ ಬಳಿಕ ಅರಣ್ಯ ಸಿಬ್ಬಂದಿ 40 ವರ್ಷ ಆನೆ ಜಲಾಶಯದ ಸಮೀಪ ಬಿದ್ದಿರುವುದು ಕಣ್ಣಗೆ ಬಿದ್ದಿದೆ. ತಕ್ಷಣವೇ ಆನೆಯನ್ನು ರಕ್ಷಿಸಲು ಧಾವಿಸಿದ್ದಾರೆ.
ಆನೆ ಹತ್ಯೆ ಬೆನ್ನಲ್ಲೇ ಮತ್ತೊಂದು ಘಟನೆ; ಸ್ಫೋಟಕ ಜಗಿದು ನರಳಾಡುತ್ತಿದೆ ಗರ್ಭಿಣಿ ದನ!.
ನೋವಿನಿಂದ ನರಳಿದ ಆನೆ ಪ್ರಾಣಬಿಟ್ಟಿದೆ. ಚರ್ಮ ಬೆಂದು ಹಾಗೂ ಕಿತ್ತು ಹೋದ ಕಾರಣ ಸೆಪ್ಟಿಕ್ ಆಗಿದೆ. ಇನ್ನು ಚರ್ಮ ಕೊಳೆಯಲು ಆರಂಭಿಸಿದೆ. ಆಹಾರ ಸೇವಿಸಲು ಸಾಧ್ಯವಾಗದೆ, ನೀರು ಸೇವಿಸದ ಆನೆ ನರಕ ವೇದನೆಯಿಂದ ಪ್ರಾಣ ಬಿಟ್ಟಿದೆ. ತಕ್ಷಣವೇ ಅರಣ್ಯ ಇಲಾಖೆ ತನಿಖೆ ಆರಂಭಿಸಿತು. ಈ ಕುರಿತ ವಿಡಿಯೋ ಪಡೆದ ಇಲಾಖೆ ಪ್ರಶಾಂತ್ ಹಾಗೂ ರೇಮಂಡ್ ಡೀನ್ ಎಂಬ ಇಬ್ಬರನ್ನೂ ಅರೆಸ್ಟ್ ಮಾಡಿದ್ದಾರೆ. ಮತ್ತೊರ್ವ ಆರೋಪಿ ರಿಕ್ಕಿ ರಿಯಾನ್ ಕೂಡ ಈ ಕ್ರೂರ ಘಟನೆಯಲ್ಲಿ ಪಾಲು ಹೊಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಉದ್ದೇಶ ಪೂರ್ವಕ ಕೊಲೆಗೆ ಸಮ; ಗರ್ಭಿಣಿ ಆನೆ ಕೊಂದ ಘಟನೆ ಖಂಡಿಸಿದ ರತನ್ ಟಾಟಾ
It’s really moving to see this tearful bid adieu to an elephant by his companion forester at Sadivayal Elephant Camp in Mudumalai Tiger Reserve, Tamil Nadu.
VC: pic.twitter.com/xMQNop1YfI
ಪ್ರಾಣ ಬಿಟ್ಟ ಆನೆಯನ್ನು ಕೊಂಡೊಯ್ಯುವ ವೇಳೆ ಅರಣ್ಯ ಸಿಬ್ಬಂದಿ ಕಣ್ಣೀರಿಟ್ಟ ವಿಡಿಯೋ ಮತ್ತಷ್ಟು ನೋವುಂಟು ಮಾಡುತ್ತಿದೆ. ಆನೆ ಸೊಂಡಿಲ ಹಿಡಿದು ಅರಣ್ಯ ಸಿಬ್ಬಂದಿ ಅತ್ತಿದ್ದಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ಸಾಮಾಜಿಕ ಜಾಲತಾಣಲ್ಲಿ ಆಗ್ರಹಿಸಿದ್ದಾರೆ. ಇಷ್ಟೇ ಅಲ್ಲ ಕಾಡುಪ್ರಾಣಿಗಳ ಮೇಲಿನ ಕ್ರೌರ್ಯಕ್ಕೆ ಅಂತ್ಯಕಾಣಿಸಲು ಕಠಿಣ ಕಾನೂನಿನ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.