ಎಲೆಯಿಂದ ಹಪ್ಪಳ ಕದ್ದ ವರ... ವಧು ಏನ್ಮಾಡಿದ್ಲು ನೋಡಿ...

Published : Jan 04, 2022, 06:56 PM IST
ಎಲೆಯಿಂದ ಹಪ್ಪಳ ಕದ್ದ ವರ... ವಧು ಏನ್ಮಾಡಿದ್ಲು ನೋಡಿ...

ಸಾರಾಂಶ

ಕದ್ದು ತಿನ್ನುವುದರಲ್ಲೇನೋ ಖುಷಿ ಪತ್ನಿ ಎಲೆಯಿಂದ ಹಪ್ಪಳ ಕದ್ದ ವರ ನವ ಜೋಡಿಯ ಮಕ್ಕಳಾಟಕ್ಕೆ ನೆಟ್ಟಿಗರು ಫಿದಾ

ಚೆನ್ನೈ(ಜ.4): ಮದುವೆ ಎಂದ ಮೇಲೆ ಅಲ್ಲಿ ಹಾಸ್ಯ ಮನೋರಂಜನೆ ಇದ್ದಿದೆ. ನೂತನ ವಧು ವರರಿಗೆ ಎಲ್ಲರೂ ತಮಾಷೆ ಮಾಡುವವರೆ. ಇನ್ನು ಮದುವೆ ಸಮಯದಲ್ಲಿ ಸ್ನೇಹಿತರಿದ್ದರಂತೂ ಅಲ್ಲಿನ ಸನ್ನಿವೇಶವೇ ಸಂಪೂರ್ಣ ಬದಲಾಗುವುದು ಎಷ್ಟೊಂದು ಮನೋರಂಜನೆ ಅಲ್ಲಿ ಖಚಿತ.. ಇದರ ಜೊತೆ ವಧು ವರರು ಕೂಡ ತರಲೆ ಮಾಡಲು ಶುರು ಮಾಡಿದರೆ ಅಲ್ಲಿ  ಸಂಭ್ರಮಕ್ಕೆ ಇನ್ನಷ್ಟು ರಂಗು ಬರುವುದು ಸುಳ್ಳಲ್ಲ.  ಹೌದು ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತುಂಟ ವರನೊಬ್ಬ ವಧುವಿನ ಬಾಳೆ ಎಲೆಯಿಂದ ಮೆಲ್ಲನೆ ಹಪ್ಪಳವನ್ನು ಕದ್ದು ತಿನ್ನುವ ಮುದ್ದಾದ ವಿಡಿಯೋ ಇದಾಗಿದೆ. 

ವಿಡಿಯೋದಲ್ಲಿ ಕಾಣಿಸುವಂತೆ ಮದುವೆಯ ಸಂಪ್ರದಾಯ ಮಗಿದಿದ್ದು, ವಧು ಹಾಗೂ ವರನನ್ನು ಜೊತೆಯಾಗಿ ಊಟಕ್ಕೆ ಕುಳ್ಳಿರಿಸಿರುತ್ತಾರೆ. ಇಬ್ಬರಿಗೂ ಬಾಳೆ ಎಲೆಯಲ್ಲಿ ಊಟ ಬಡಿಸಿದ್ದು, ಇಬ್ಬರು ಊಟ ಮಾಡುತ್ತಿರುತ್ತಾರೆ. ಈ ವೇಳೆ ಊಟ ಮಾಡುತ್ತಾ ವಧು ಆ ಕಡೆ ತಿರುಗಿದಾಗ ವರ ಮೆಲ್ಲನೆ ಆಕೆಯ ಬಾಳೆ ಎಲೆಯಿಂದ ಹಪ್ಪಳವನ್ನು ಕದಿಯುತ್ತಾನೆ. ವಾಪಸ್‌ ಇತ್ತ ತಿರುಗಿದಾಗ ಇದು ವಧುವಿಗೂ ಗೊತ್ತಾಗಿದ್ದು ಆಕೆ ತನ್ನ ಪತಿಯ ಮುಖ ನೋಡುತ್ತಿದ್ದಂತೆ ಆತ ನಗು ತಡೆಯಲಾಗದೆ ತುಂಟ ನಗು ಬೀರುತ್ತಾನೆ. ಆದರೆ ಸುಮ್ಮನಿರದ ವಧು, ಹಪ್ಪಳವನ್ನು ವಾಪಸ್‌ ಪಡೆಯಲು ತನ್ನ ಪತಿಯ ಬಾಳೆ ಎಲೆಗೆ ಕೈ ಹಾಕುತ್ತಾಳೆ. ಇಬ್ಬರ ಈ ತಮಾಷೆಯ ಕಾದಾಟದಿಂದ ಹಪ್ಪಳ ಬಾಳೆ ಎಲೆಯಲ್ಲಿಯೇ ಹುಡಿಯಾಗುತ್ತದೆ. 

ಈ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಆಗಿದ್ದು, ಇದನ್ನು 2.1 ಮಿಲಿಯನ್‌ ಜನ ವೀಕ್ಷಿಸಿದ್ದಾರೆ. 94 ಸಾವಿರಕ್ಕೂ ಹೆಚ್ಚು ಜನ ಲೈಕ್‌ ಮಾಡಿದ್ದು, ನೂರಾರು ಜನ ಕಾಮೆಂಟ್ ಮಾಡಿದ್ದಾರೆ. ವಿಡಿಯೋ ನೋಡಿದ ಜನರೆಲ್ಲಾ ಈ ಜೋಡಿ ತುಂಬಾ ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ತಮ್ಮ ಭಾವಿ ಪತಿಗೆ ಟ್ಯಾಗ್ ಮಾಡಿ ನನ್ನ ಭಾವಿ ಪತಿ, ದಯವಿಟ್ಟು ನನ್ನ ಆಹಾರವನ್ನು ಕದಿಯಬೇಡಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. @vimona_events ಎಂಬ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ಈ ವಿಡಿಯೋ ಅಪ್‌ಲೋಡ್ ಮಾಡಿದೆ. 

ಹೂ ಹಾರ ಹಾಕೋ ಮೊದಲು ಕಿಸ್ ಕೇಳಿದ ವರ, ಕೊಟ್ಲಾ ವಧು?

ಈ ಹಿಂದೆಯೂ ಮದುವೆ ಸಂದರ್ಭದ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇತ್ತೀಚೆಗೆ ವರ ಮದುವೆ ಮಂಟಪಕ್ಕೆ ಮೆರವಣಿಗೆ ಮೂಲಕ ಸಾಗಿ ಬರುತ್ತಿರುವುದನ್ನು ಕಿಟಕಿಯಲ್ಲಿ ನೋಡಿದ ವಧು ಅಲ್ಲಿಂದಲೇ ವರನನ್ನು ನೋಡಿ ಡಾನ್ಸ್‌ ಮಾಡಲು ಶುರು ಮಾಡಿದ ವಿಡಿಯೋ ವೈರಲ್‌ ಆಗಿತ್ತು. ಇದನ್ನು ನೋಡಿ ಕುದುರೆ ಮೇಲಿದ್ದ ವರ ಕೂಡ ಅಲ್ಲಿಂದಲೇ ವಧುವಿಗೆ ಡಾನ್ಸ್‌ ಮೂಲಕ ಪ್ರತಿಕ್ರಿಯಿಸುತ್ತಾನೆ. ಈ ವಿಡಿಯೋ ಹಿನ್ನೆಲೆಯಲ್ಲಿ ಸೋನಿ ನಿಗಮ್‌ (Sonu Nigam) ಹಾಗೂ ಅಲ್ಕಾ ಯಾಗ್ನಿಕ್‌ (Alka Yagnik) ಹಾಡಿದ ಚಲ್‌ ಪ್ಯಾರ್‌ ಕರೆಗಿ ಹಾಡು ಕೇಳಿ ಬರುತ್ತದೆ. 

Cute Video: ಮೆರವಣಿಗೆ ಬರುತ್ತಿದ್ದ ವರನ ನೋಡಿ ಕಿಟಕಿಯಿಂದಲೇ ವಧುವಿನ ಡಾನ್ಸ್‌...

ಇದಕ್ಕೂ ಮೊದಲು  ಹೂವಿನ ಮಾಲೆ ಹಾಕುವ ಮೊದಲು ತನಗೆ ಮುತ್ತಿಡುವಂತೆ ವರನೊಬ್ಬ ವಧುವಿಗೆ ಕಾಡಿಸಿದ ಕ್ಯೂಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರನೊಬ್ಬ ಹೂವಿನ ಮಾಲೆಗಳ ಪರಸ್ಪರಬದಲಾವಣೆ ವೇಳೆ ಹೂವಿನ  ಮಾಲೆಯನ್ನು ವಧುವಿನ ಕೊರಳಿಗೆ ಹಾಕುವ ಮೊದಲು ಮುತ್ತನ್ನಿಡುವಂತೆ ತನ್ನ ಬಾಳ ಸಂಗಾತಿಯಾಗುವಾಕೆಗೆ ಕೇಳುತ್ತಾನೆ. ಇದಕ್ಕೆ ನಾಚುತ್ತಲೇ ನಿರಾಕರಿಸುವ ವಧು ಕೊನೆಗೂ ಆತನ ಕೆನ್ನೆಗೆ ಮುತ್ತನಿಡುತ್ತಾಳೆ. ಈ ವಿಡಿಯೋ ಈಗ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗಿದ್ದು, 2 ಲಕ್ಷಕ್ಕೂ ಅಧಿಕ ಜನ ಇದನ್ನು ವೀಕ್ಷಿಸಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌
ಜಾಲತಾಣಗಳಲ್ಲಿ ಮಕ್ಕಳ ಬಳಕೆ ನಿರ್ಬಂಧಿಸಿ: ಸುಧಾ ಮೂರ್ತಿ