ಅಯೋಧ್ಯೆಯಲ್ಲಿ ರಾಮನಾಮ ಜಪ ಮೊಳಗಿಸಿದ ಮೋದಿ, ಶ್ರವಣ ಬೆಳಗೊಳದ ಉಲ್ಲೇಖ!

By Suvarna NewsFirst Published Aug 5, 2020, 2:24 PM IST
Highlights

ಅಯೋಧ್ಯೆಯಲ್ಲಿ ರಾಮನಾಪ ಜಪಿಸಿದ ಮೋದಿ| ಟೆಂಟ್‌ನಲ್ಲಿ ಅನೇಕ ವರ್ಷ ಕಳೆದ ರಾಮಲಲ್ಲಾನಿಗೆ ಭವ್ಯ ಮಂದಿರ| ಕರ್ನಾಟಕದ ಶ್ರವಣ ಬೆಳಗೊಳವನ್ನೂ ಭಾಷಣದಲ್ಲಿ ಉಲ್ಲೇಖಿಸಿದ ಮೋದಿ

ಅಯೋಧ್ಯೆ(ಆ. 05): ಭವ್ಯ ಶ್ರೀರಾಮ ಮಂದಿರಕ್ಕೆ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ನೆರವೇರಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಭಾ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಇಲ್ಲಿದೆ ಮೋದಿ ಭಾಷಣದ ಹೈಲೈಟ್ಸ್

* ಭಾರತ ಇಂದು ಭಗವಾನ್ ಭಾಸ್ಕರನ ಸಾನಿಧ್ಯದಲ್ಲಿ ಸರಯೂ ನದಿ ತಟದಲ್ಲಿ ಒಂದು ಸ್ವರ್ಣ ಅಧ್ಯಾಯ ರಚಿಸುತ್ತಿದೆ. ಕನ್ಯಾಕುಮಾರಿಯಿಂದ ಕ್ಷೀರ ಭವಾನಿವರೆಗೆ. ಕೋಟೇಶ್ವರದಿಂದ ಕಾಮಾಕ್ಯದವರೆಗೆ, ಜಗನ್ನಾಥದಿಂದ ಕೇದಾರಣಾಥದವರೆಗೆ, ಸೋಮನಾಥದಿಂದ ಕಾಶೀ ವಿಶ್ವನಾಥನವರೆಗೆ, ಸಮೇಧ ಶಿಖರದಿಂದ ಶ್ರವಣ ಬೆಳಗೊಳದವರೆಗೆ, ಬುದ್ಧಗಯಾದಿಂದ ಸಾರನಾಸರಥದವರೆಗೆ, ಅಮೃತ ಸಹಾಬ್ನಿಂದ ಪಟ್ನಾ ಸಾಹಿಬ್‌ವರೆಗೆ, ಅಂಡಮಾನ್‌ನಿಂದ ಅಜ್ಮೇರ್‌ವರೆಗೆ, ಲಕ್ಷದ್ವೀಪದಿಂದ ಲೇಹ್‌ವರೆಗೆ ಇಡೀ ದೇಶವೇ ರಾಮಮಯವಾಗಿದೆ. 

* ಇಡೀ ದೇಶ ರೋಮಾಂಚನಗೊಂಡಿದೆ. ಪ್ರತಿ ಮನ ದೀಪಗಳಂತೆ ಬೆಳಗುತ್ತಿವೆ. ಇಡೀ ದೇಶ ಭಾವುಕವಾಗಿದೆ. ಶತಕಗಳ ಕಾಯುವಿಕೆ ಇಂದು ಕೊನೆಯಾಗುತ್ತಿದೆ. ಕೋಟ್ಯಾಂತರ ಮಂದಿಗೆ ಇಂದು ತಾವು ಜೀವಂತವಾಗಿರುವಾಗಲೇ ಈ ಪವಿತ್ರ ದಿನ ನೋಡುತ್ತಿದ್ದಾರೆಂದು ನಂಬಲು ಸಾಧ್ಯವಾಗಲಿಕ್ಕಿಲ್ಲ.

* ಅನೇಕ ವರ್ಷಗಳಿಂದ ಟೆಂಟ್‌ನಲ್ಲಿದ್ದ ನಮ್ಮ ರಾಮಲಲ್ಲಾನಿಗೆ ಈಗ ಒಂದು ಭವ್ಯ ಮಂದಿರ ನಿರ್ಮಾಣವಾಗಲಿದೆ. ಬೀಳುವುದು ಹಾಗೂ ಮತ್ತೆ ಎದ್ದು ನಿಲ್ಲುವುದು ನೂರಾರು ವರ್ಷಗಳಿಂದ ನಡೆಯುತ್ತಿರುವ ಈ ಕ್ರಮದಿಂದ ರಾಮಜನ್ಮಭೂಮಿ ಇಂದು ಮುಕ್ತಿ ಪಡೆದಿದೆ. 

"

ರಾಮ ಮಂದಿರ ಭೂಮಿ ಪೂಜೆ; ಮರಳು ಶಿಲ್ಪದ ಮೂಲಕ ಸುದರ್ಶನ್ ಪಟ್ನಾಯಕ್ ನಮನ!

* ನಮ್ಮ ಸ್ವತಂತ್ರತಾ ಆಂದೋಲನದ ವೇಳೆ ಅನೇಕ ಮಂದಿ ತಮ್ಮಲಿದ್ದುದ್ದನ್ನೆಲ್ಲಾ ಸಮರ್ಪಿಸಿದ್ದರು. ಸ್ವಾತಂತ್ರ್ಯಕ್ಕಾಗಿ ಬಲಿದಾನ ಕೊಡದಿರುವ ಭೂಭಾಗ ದೇಶದಲ್ಲಿ ಇರಲಿಕ್ಕಿಲ್ಲ. ಆಗಸ್ಟ್ 15 ಇಂತಹ ಲಕ್ಷಾಂತರ ಬಲಿದಾನಗಳ ಪ್ರತೀಕವಾಗಿದೆ. ಅದೇ ರೀತಿ ರಾಮ ಮಂದಿರಕ್ಕೆ ಸಾವಿರಾರು ವರ್ಷಗಳಿಂದ ಅನೇಕ ಮಂದಿ ಬಲಿದಾನ ನೀಡಿದ್ದಾರೆ. 

* ಯಾರ ತ್ಯಾಗದಿಂದ ಈ ಕನಸು ಸಾಕಾರಗೊಳ್ಳುತ್ತಿದೆಯೋ ನಾನು ಅವರೆಲ್ಲರಿಗೂ ದೇಶವಾಸಿಗಳ ಪರವಾಗಿ ತಲೆಬಾಗಿ ನಮಿಸುತ್ತೇನೆ. 

* ಇಲ್ಲಿನ ಅಸ್ತಿತ್ವ ಅಳಿಸಿ ಹಾಕಲು ಅನೇಕ ಯತ್ನಗಳು ನಡೆದಿವೆ. ಆದರೆ ಪ್ರಭು ಶ್ರೀರಾಮ ಇಂದಿಗೂ ನಮ್ಮ ಮನಸ್ಸಿನಲ್ಲಿದ್ದಾನೆ. ನಮ್ಮ ಸಂಸ್ಕೃತಿಯ ಬುನಾದಿಯಾಗಿದ್ದಾರೆ. ಶ್ರೀರಾಮ ಭಾರತದ ಮರ್ಯಾದೆ ಹಾಗೂ ಮರ್ಯಾದಾ ಪುರುಷೋತ್ತಮನಾಗಿದ್ದಾನೆ. ಇದರ ಪ್ರತೀಕವಾಗಿಯೇ ಇಂದು ಇಲ್ಲಿ ಭೂಮಿ ಪೂಜೆ ನಡೆದಿದೆ. 

Live from Ayodhya. https://t.co/cHp9fTFEdx

— Narendra Modi (@narendramodi)

 

* ಇಲ್ಲಿಗೆ ಆಗಮಿಸುವ ಮುನ್ನ ಹನುಮಾನ್ ಗಢಿಯನ್ನು ಭೇಟಿ ಮಾಡಿದೆ. ರಾಮನ ಎಲ್ಲಾ ಕಾರ್ಯಗಳನ್ನು ಹನುಮಂತನೇ ಮಾಡುತ್ತಾನೆ. ರಾಮನ ಆದರ್ಶಗಳನ್ನು ಕಲಿಯುಗದಲ್ಲಿ ಕಾಪಾಡುವ ಜವಾಬ್ದಾರಿಯೂ ಹನುಮಂತನದ್ದೇ. ಅವರ ಆಶೀರ್ವಾದಿಂದ ಶ್ರೀರಾಮ ಭೂಮಿ ಪೂಜೆ ಆರಂಭವಾಗಿದೆ. 

ರಾಮಮಂದಿರ ನಿರ್ಮಾಣ ನಮ್ಮೆಲ್ಲರ ಸಂತೋಷದ ಘಳಿಗೆ: ಹೆಚ್.ಡಿ.ಕುಮಾರಸ್ವಾಮಿ

* ಶ್ರೀರಾಮ ದೇಗುಲ ನಮ್ಮ ಸಂಸ್ಕೃತಿಯ ಆಧುನಿಕ ಪ್ರತೀಕವಾಗಲಿದೆ. ನಮ್ಮ ಶಾಶ್ವತ ನಂಬಿಕೆಯ ಪ್ರತೀಕವಾಗಲಿದೆ. ನಮ್ಮ ರಾಷ್ಟ್ರೀಯ ಭಾವನೆಯ ಪ್ರತೀಕವಾಗಲಿದೆ. ಇದು ಕೋಟ್ಯಾಂತರ ಮಂದಿಯ ಸಾಮೂಹಿಕ ಸಂಕಲ್ಪ ಶಕ್ತಿಯ ಪ್ತೀಕವಾಗಲಿದೆ.

* ಈ ಮಂದಿರ ಮುಂದಿನ ಜನಾಂಗಕ್ಕೆ ಶ್ರದ್ಧೆ ಹಾಗೂ ಸಂಕಲ್ಪದ ಪ್ರೇರಣೆ ನೀಡಲಿದೆ. ಈ ದೇಗುಲ ನಿರ್ಮಾಣವಾದ ಬಳಿಕ ಅಯೋಧ್ಯೆ ಭವ್ಯತೆ ಮಾತ್ರವಲ್ಲ, ಈ ಕ್ಷೇತ್ರದ ಆರ್ಥಿಕ ವ್ಯವಸ್ಥೆಯೂ ಬದಲಾಗಲಿದೆ. ಇಲ್ಲಿ ಪ್ರತಿ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಸಿಗಲಿವೆ. ಪ್ರತಿ ಕ್ಷೇತ್ರದಲ್ಲಿ ಅವಕಾಶಗಳು ಹೆಚ್ಚಾಗಲಿವೆ.

* ಇಡೀ ವಿಶ್ವದಿಂದ ಜನರು ಇಲ್ಲಿಗೆ ಆಗಮಿಸುತ್ತಾರೆ. ಇಡೀ ವಿಶ್ವ ಪ್ರಭು ಶ್ರೀರಾಮ ಹಾಗೂ ಮಾತೆ ಜಾನಕಿಯ ದರ್ಶನ ಪಡೆಯಲು ಬರುತ್ತಾರೆ. ಹೀಗಿರುವಾಗ ಎಷ್ಟೆಲ್ಲಾ ಬದಲಾವಣೆಗಳಾಗಬಹುದು. ಇದು ರಾಷ್ಟ್ರವನ್ನು ಒಂದುಗೂಡಿಸುವ ಮಾರ್ಗವಾಗಿದೆ. ಇದು ವಿಶ್ವಾಸವನ್ನು ವಿದ್ಯಮಾನಗಳಿಂದ ಜೋಡಿಸುವ ಅವಕಾಶವಾಗಿದೆ. ಇದು ನರ ಹಾಗೂ ನಾರಾಯಣ, ಲೋಕವನ್ನು ಭಕ್ತಿ ಜೊತೆ, ವರ್ತಮಾನವನ್ನು ಭೂತಕಾಲದೊಂದಿಗೆ ಜೋಡಿಸಲಿದೆ.

* ಇಂದಿನ ಈ ಐತಿಹಾಸಿಕ ದಿನ ಯುಗ ಯುಗಗಳವರೆಗೆ, ದಿಗಂತದಿಂದ ದಿಗಂತದವರೆಗೆ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಲಿದೆ. ಇಂದಿನ ಈ ದಿನ ಕೋಟ್ಯಾಂತರ ರಾಮ ಭಕ್ತರ ಸಂಕಲ್ಪದ ಅತ್ಯತೆಯ ಪ್ರಮಾಣವಾಗಿದೆ. ಇಂದಿನ ಈ ದಿನಸತ್ಯ, ಅಹಿಂಸೆ, ಭಕ್ತಿ ಹಾಗೂ ಬಲಿದಾನವನ್ನು ನ್ಯಾಯಪ್ರಿಯ ಭಾರತದ ಒಂದು ಅಪೂರ್ವ ಕೊಡುಗೆಯಾಗಿದೆ.

* ಕೊರನಾದಿಂದಾಗಿ ಭೂಮಿ ಪೂಜೆಯ ಈ ಕಾರ್ಯಕ್ರಮ ಅನೇಕ ನಿಯಮಗಳೊಂದಿಗೆ ನಡೆಯುತ್ತಿದೆ. ಶ್ರೀರಾಮನ ಕಾರ್ಯದಲ್ಲಿ ಯಾವ ರೀತಿ ನಡೆಯಬೇಕಿತ್ತೋ ಅದಕ್ಕೆ ಇದು ಸೂಕ್ತ ಉದಾಹರಣೆ. ಇದೇ ಇಂತಹುದೇ ನಿಯಮವನ್ನು ನಾವು ಸುಪ್ರಿಂಕೋರ್ಟ್ ತನ್ನ ತೀರ್ಪು ನೀಡಿದಾಗಲೂ ಪಾಲಿಸಿದ್ದೆವು. 

* ನಾವು ಅವತ್ತು ಕೂಡಾ ಇಡೀ ದೇಶದ ಜನತೆ ಶಾಂತಿಯಿಂದ ಎಲ್ಲರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ವರ್ತಿಸಿದ್ದರು. ಇಂದು ಕೂಡಾ ನಾವು ಅದೇ ಶಿಸ್ತು ನೋಡುತ್ತಿದ್ದೇವೆ. 

* ಈ ಮಂದಿರದೊಂದಿಗೆ ಕೇವಲ ಹೊಸ ಇತಿಹಾಸ ಮಾತ್ರವಲ್ಲ, ಇತಿಹಾಸ ಮತ್ತೊಮ್ಮೆ ಮರುಕಳಿಸುತ್ತಿದೆ. ಯಾವ ರೀತಿ ಅಳಿಲುಗಳಿಂದ ಹಿಡಿದು ವಾನರ ಸೇನೆಯವರೆಗೆ ಎಲ್ಲರಿಗೂ ಶ್ರೀರಾಮನ ವಿಜಯದಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿತ್ತು. ಅದೇ ರೀತಿ ಇಂದು ಇಡೀ ದೇಶದ ಜನರ ಸಹಕಾರದಿಂದ ರಾಮ ಮಂದಿರ ನಿರ್ಮಾಣದ ಪುಣ್ಯ ಕಾರ್ಯ ಪ್ರಾರಂಭವಾಗಿದೆ.

* ಕಲ್ಲುಗಳ ಮೇಲೆ ಶ್ರೀರಾಮ ಎಂದು ಬರೆದು ರಾಮ ಸೇತು ನಿರ್ಮಿಸಿದರು. ಅದೇ ರೀತಿ ಹಳ್ಳಿ ಹಳ್ಳಿಯಿಂದ ಶ್ರದ್ಧೆಯಿಂದ ಪೂಜಿಸಿರುವ ಶಿಲೆಗಳು ಇಲ್ಲಿಗೆ ಬಂದಿವೆ. ದೇಶಾದ್ಯಂತ ಇರುವ ಪುಣ್ಯ ಕ್ಷೇತ್ರಗಳು ಹಾಗೂ ದೇಗುಲಗಳಿಂದ ತಂದಿರುವ ಮಣ್ಣು ಹಾಗೂ ನದಿಗಳ ಪವಿತ್ರ ಜಲ ಅಲ್ಲಿನ ಜನರ ಅಲ್ಲಿನ ಸಂಸ್ಕೃತಿ ಹಾಗೂ ಭಾವನೆಗಳು ಬಹುದೊಡ್ಡ ಶಕ್ತಿಯಾಗಿ ಮಾರ್ಪಾಡಾಗಿದೆ. 

* ಭಾರತೀಯರ ಭಕ್ತಿ ಹಾಗೂ ವಿಶ್ವಾಸ ಸಾಮೂಹಿಕತೆಯೇ ಬಹುದೊಡ್ಡ ಶಕ್ತಿಯಾಗಿದೆ. ಇಡೀ ವಿಶ್ವಕ್ಕೆ ಇದು ಬಹುದೊಡ್ಡ ಅಧ್ಯಯನದ ವಿಷಯವಾಗಿದೆ. 

* ಶ್ರೀರಾಮಚಂದ್ರನಿಗೆ ತೇಜಸ್ಸಿನಲ್ಲಿ ಸೂರ್ಯನಂತೆ, ಕ್ಷಮೆಯಲ್ಲಿ ಪೃಥ್ವಿಯಂತೆ, ಬುದ್ಧಿಯಲ್ಲಿ ಬೃಹಸ್ಪತಿಯಂತೆ, ಯಶಸ್ಸಿನಲ್ಲಿ ಇಂದ್ರನ ಸಮಾನರಾಗಿದ್ದಾರೆ. ಶ್ರೀರಾಮನ ಚರಿತ್ರೆ ಅತಿ ಹೆಚ್ಚು ಸತ್ಯದ ಮೇಲೆ ನಿಲ್ಲುವಂತೆ ಹೇಳುತ್ತದೆ. ಹೀಗಾಗೇ ಶ್ರೀರಾಮ ಸಂಪೂರ್ಣ ಹಾಗೂ ಸಾವಿರಾರು ವರ್ಷಗಳಿಂದ ಭಾರತಕ್ಕೆ ಪ್ರಕಾಶ ಸ್ಥಂಭವಾಗಿದ್ದಾರೆ. 

* ಶ್ರೀರಾಮ ಸಾಮಾಜಿಕ ಸಾಮರಸ್ಯವನ್ನು ತನ್ನ ಶಾಸನದ ಆಧಾರಶಿಲೆಯಾಗಿಸಿದ್ದರು, ಗುರು ವಷಿಸ್ಠರಿಂದ ಜ್ಞಾನ, ಶಬರಿಯಿಂದ ಮಾತೃತ್ವ, ಹನುಮಂತನಿಂದ ಸಹಯೋಗ ಹಾಗೂ ಪ್ರಜೆಗಳಿಂದ ವಿಶ್ವಾಸ ಗಳಿಸಿದ್ದರು. ಅಳಿಲಿನ ಶ್ರಮವನ್ನೂ ಸ್ವೀಕರಿಸಿದ್ದರು. ಅವರು ಯುಗ ಯುಗಗಳವರೆಗೆ ಎಲ್ಲರಿಗೂ ಪ್ರೇರಣೆ. 

click me!