
ತೆಲಂಗಾಣ: 'ದಕ್ಷಿಣ ಕಾಶಿ' ಎಂದೇ ಖ್ಯಾತಿ ಪಡೆದಿರುವ ಪ್ರಸಿದ್ಧ ಶೈವ ಕ್ಷೇತ್ರ ಕಾಳೇಶ್ವರ ಮುಕ್ತೇಶ್ವರ ದೇವಾಲಯ ಹೊಸ ರೂಪ ಪಡೆಯುತ್ತಿದೆ. ಪ್ರಾಣಹಿತ, ಗೋದಾವರಿ ಮತ್ತು ಸರಸ್ವತಿ ನದಿಗಳ ಪವಿತ್ರ ತ್ರಿವೇಣಿ ಸಂಗಮದಲ್ಲಿರುವ ಈ ದೇವಾಲಯದ ಭವ್ಯ ಪುನರ್ನಿರ್ಮಾಣ ಕಾರ್ಯ ಚುರುಕಿನಿಂದ ಸಾಗುತ್ತಿದೆ.
ಈ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಕಳೆದ 47 ವರ್ಷಗಳ ಇತಿಹಾಸವಿದ್ದ ಭವ್ಯ ರಾಜಗೋಪುರಗಳು, ಪ್ರಾಕಾರಗಳು, ಗರ್ಭಗುಡಿ ಹಾಗೂ ಉಪ ದೇವಾಲಯಗಳನ್ನು ನೆಲಸಮ ಮಾಡಲಾಗಿದೆ. 1979ರಲ್ಲಿ ನಿರ್ಮಿಸಲಾಗಿದ್ದ ಈ ಕಟ್ಟಡಗಳು ಕಣ್ಮರೆಯಾಗುತ್ತಿರುವುದನ್ನು ಕಂಡು ಅಲ್ಲಿನ ಅರ್ಚಕರು, ಸಿಬ್ಬಂದಿ ಮತ್ತು ಭಕ್ತರು ಭಾವುಕರಾದರು. ದಶಕಗಳ ಕಾಲ ಪೂಜೆ ಸಲ್ಲಿಸುತ್ತಾ ಬಂದಿದ್ದ ಗರ್ಭಗುಡಿಯನ್ನು ಕೆಡವುವಾಗ ಭಕ್ತರ ಕಣ್ಣಾಲಿಗಳು ತೇವಗೊಂಡವು.
ತೆಲಂಗಾಣ ಸರ್ಕಾರವು ಈ ಕ್ಷೇತ್ರದ ಅಭಿವೃದ್ಧಿಗಾಗಿ ಒಟ್ಟು 198 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ಈ ಬೃಹತ್ ಅನುದಾನದೊಂದಿಗೆ ಏನೆಲ್ಲ ಮಾಡಲಿದೆ ಅಂತಾ ನೋಡೋದಾದ್ರೆ..
ಸಚಿವ ಶ್ರೀಧರ್ ಬಾಬು ಅವರ ವಿಶೇಷ ಆಸಕ್ತಿಯಿಂದಾಗಿ ಈ ಯೋಜನೆಗೆ ವೇಗ ಸಿಕ್ಕಿದೆ. ಮುಂದಿನ ವರ್ಷ ನಡೆಯಲಿರುವ 'ಗೋದಾವರಿ ಪುಷ್ಕರಗಳ' ವೇಳೆಗೆ ನೂತನ ದೇವಾಲಯವನ್ನು ಸಿದ್ಧಪಡಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಜೂನ್ 30 ರಿಂದ ನೆಲಸಮ ಕಾರ್ಯ ಆರಂಭವಾಗಿದ್ದು, ಜುಲೈ 10 ರೊಳಗೆ ಸಂಪೂರ್ಣ ಸ್ವಚ್ಛಗೊಳಿಸಿ, ನಂತರ ಅಡಿಪಾಯ ಹಾಕುವ ಕೆಲಸ ನಡೆಯಲಿದೆ. ಒಟ್ಟಿನಲ್ಲಿ, ಮುಂದಿನ ಒಂದು ವರ್ಷದಲ್ಲಿ ಕಾಳೇಶ್ವರ ಕ್ಷೇತ್ರವು ದಕ್ಷಿಣ ಭಾರತದ ಅತ್ಯಂತ ಸುಂದರ ಮತ್ತು ಭವ್ಯ ಶಿಲ್ಪಕಲೆಯ ದೇವಾಲಯವಾಗಿ ಹೊರಹೊಮ್ಮಲಿದೆ.
Congress Government's Bulldozer reaches spiritual Telangana's Kaleshwaram temple too ...
Demolition begins . pic.twitter.com/219hGdxhta— Dr.Krishank (@Krishank_BRS) August 6, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ