ಕೇಂದ್ರ ಸಚಿವ ಅಮಿತ್ ಶಾ ಅವರು ಶೀಘ್ರದಲ್ಲಿಯೇ ದೇಶದಲ್ಲಿ ಸಹಕಾರ ಟ್ಯಾಕ್ಸಿ ಸೇವೆ ಆರಂಭವಾಗಲಿದೆ ಎಂದು ಘೋಷಿಸಿದ್ದಾರೆ. ಓಲಾ, ಊಬರ್ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಈ ಸೇವೆಯ ಲಾಭ ನೇರವಾಗಿ ಚಾಲಕರಿಗೆ ಸಿಗಲಿದೆ. ಅಲ್ಲದೆ, ಟ್ಯಾಕ್ಸಿ ಚಾಲಕರಿಗಾಗಿ ರಾಷ್ಟ್ರೀಯ ಮಟ್ಟದ ಸಹಕಾರಿ ಸಂಘಟನೆಯನ್ನು ಸ್ಥಾಪಿಸಲಾಗುವುದು.
ನವದೆಹಲಿ (ಮಾ.26): ಶೀಘ್ರದಲ್ಲಿಯೇ ದೇಶದಲ್ಲಿ ಸಹಕಾರ ಟ್ಯಾಕ್ಸಿ ಸೇವೆ ಆರಂಭವಾಗಲಿದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಘೋಷಣೆ ಸಂಸತ್ತಿನಲ್ಲಿ ಘೋಷಣೆ ಮಾಡಿದ್ದಾರೆ. ಓಲಾ, ಊಬರ್ ರೀತಿಯಲ್ಲಿ ಈ ಸೇವೆ ಕೆಲಸ ಮಾಡಲಿದ್ದು ಇದರ ಎಲ್ಲಾ ಬೆನಿಫಿಟ್‌ಗಳು ನೇರವಾಗಿ ಚಾಲಕರಿಗೆ ಸಿಗಲಿದೆ ಎಂದು ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಟ್ಯಾಕ್ಸಿ ಚಾಲಕರಿಗಾಗಿ ರಾಷ್ಟ್ರೀಯ ಮಟ್ಟದ ಸಹಕಾರಿ ಸಂಘಟನೆಯನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಓಲಾ ಮತ್ತು ಉಬರ್ ನಂತಹ ರೈಡ್-ಹೇಲಿಂಗ್ ಪ್ಲಾಟ್‌ಫಾರ್ಮ್‌ಗಳ ಮಾದರಿಯನ್ನು ಅನುಸರಿಸಿ ಚಾಲಕರಿಗೆ ಉತ್ತಮ ಉದ್ಯೋಗ ಭದ್ರತೆ, ನ್ಯಾಯಯುತ ವೇತನ ಮತ್ತು ರಚನಾತ್ಮಕ ಪ್ರಯೋಜನಗಳನ್ನು ಒದಗಿಸುವ ಗುರಿಯನ್ನು ಈ ಉಪಕ್ರಮ ಹೊಂದಿದೆ.
ಸಹಕಾರದಿಂದ ಸಮೃದ್ದಿ ಎಂದು ಪ್ರಧಾನಿ ಹೇಳಿರುವುದು ಬರೀ ಘೋಷಣೆಯಲ್ಲ. ಮುಂದಿನ ದಿನಗಳಲ್ಲಿ ಓಲಾ, ಊಬರ್ ರೀತಿಯಲ್ಲಿ ಸಹಕಾರಿ ಟ್ಯಾಕ್ಸಿ ಸೇವೆ ಕೂಡ ಆರಂಭವಾಗಲಿದೆ. ಇದರಲ್ಲಿ ದ್ವಿಚಕ್ರ ವಾಹನವನ್ನೂ ಕೂಡ ಅದರಲ್ಲಿ ಟ್ಯಾಕ್ಸಿಯಾಗಿ ರಿಜಿಷ್ಟ್ರೇಷನ್ ಮಾಡಿಕೊಳ್ಳಬಹುದು. ರಿಕ್ಷಾ, ಕಾರ್‌ನಂಥ ವಾಹನಗಳನ್ನು ಅದರಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಇದರ ಯಾವುದೇ ಲಾಭಗಳು ಮೂರನೇ ವ್ಯಕ್ತಿಯ ಪಾಲಾಗೋದಿಲ್ಲ. ಅದು ನೇರವಾಗಿ ಚಾಲಕನ ಕಿಸೆಗೆ ಸೇರಲಿದೆ. ಅದರೊಂದಿಗೆ ಸಹಕಾರಿ ವಿಮೆ ಕೂಡ ಶೀಘ್ರದಲ್ಲಿಯೇ ಬರಲಿದೆ ಎಂದು ಸಂಸತ್ತಿನಲ್ಲಿ ತಿಳಿಸಿದ್ದಾರೆ.
ಸಹಕಾರಿ ಚೌಕಟ್ಟನ್ನು ಬಳಸಿಕೊಳ್ಳುವ ಮೂಲಕ, ಈ ಸಂಸ್ಥೆಯು ಭಾರತದಾದ್ಯಂತ ಚಾಲಕರಿಗೆ ಹೆಚ್ಚಿನ ಆರ್ಥಿಕ ಸ್ಥಿರತೆ ಮತ್ತು ಕಲ್ಯಾಣವನ್ನು ಖಚಿತಪಡಿಸುತ್ತದೆ. ಸಹಕಾರಿ ವಲಯವನ್ನು ವಿವಿಧ ಅಗತ್ಯ ಸೇವೆಗಳಾಗಿ ವಿಸ್ತರಿಸುವ ಸರ್ಕಾರದ ಬದ್ಧತೆಯನ್ನು ಅಮಿತ್ ಶಾ ಒತ್ತಿ ಹೇಳಿದರು. ಇದರಲ್ಲಿ ಪೆಟ್ರೋಲ್ ಪಂಪ್‌ಗಳು, ಅನಿಲ ವಿತರಣೆ, ಪಡಿತರ ಅಂಗಡಿಗಳು, ಔಷಧ ಅಂಗಡಿಗಳು, ಗೋದಾಮುಗಳು, ನೀರಿನ ನಿರ್ವಹಣೆ, ಬೀಜ ಉತ್ಪಾದನೆ ಮತ್ತು ಸಾವಯವ ಕೃಷಿ ಸೇರಿವೆ.
ಹಿಂದಿ ಹೇರಲ್ಲ, ಕರ್ನಾಟಕದ ಜತೆ ಕನ್ನಡದಲ್ಲೇ ನನ್ನಿಂದ ಪತ್ರ ವ್ಯವಹಾರ : ಅಮಿತ್ ಶಾ ಮಹತ್ವದ ಘೋಷಣೆ!
ಈ ಉಪಕ್ರಮವು ಸಹಕಾರಿ ಸಂಘಗಳು ಆರ್ಥಿಕ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲು ಅನುವು ಮಾಡಿಕೊಡುತ್ತದೆ ಮತ್ತು ನಾಗರಿಕರಿಗೆ ಕೈಗೆಟುಕುವ ಮತ್ತು ಪ್ರವೇಶಿಸಬಹುದಾದ ಸೇವೆಗಳನ್ನು ಖಚಿತಪಡಿಸುತ್ತದೆ. ಈ ಬೆಳವಣಿಗೆಗಳೊಂದಿಗೆ, ಸರ್ಕಾರವು ಭಾರತದ ಸಹಕಾರಿ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ, ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಮತ್ತು ಬಹು ಕೈಗಾರಿಕೆಗಳಲ್ಲಿ ಆರ್ಥಿಕ ಸ್ವಾವಲಂಬನೆಯನ್ನು ಬೆಳೆಸುತ್ತದೆ.
ವಿದ್ಯಾರ್ಥಿ ಆಗಿದ್ದಾಗ 7 ದಿನ ಜೈಲೂಟ ತಿಂದಿದ್ದೆ: ಕೇಂದ್ರ ಸಚಿವ ಅಮಿತ್ ಶಾ
BREAKING NEWS 🚨 📢
Union Cooperative Minister Amit Shah announces that in few months Govt will launch a Cooperative taxi services like Ola and Uber.
All benefits will go directly to drivers. pic.twitter.com/5ecLtLCs8o