ಕೊರೋನಾ ಟೆಸ್ಟ್‌ ಕಿಟ್‌ ಆಮದು ಸುಂಕ ರದ್ದು!

By Suvarna NewsFirst Published Jul 14, 2021, 11:22 AM IST
Highlights

* ಕೊರೋನಾ ಟೆಸ್ಟ್‌ ಕಿಟ್‌ ಆಮದು ಸುಂಕ ರದ್ದು

* ಬ್ಲ್ಯಾಕ್‌ ಫಂಗಸ್‌ ಔಷಧಕ್ಕೂ ಸುಂಕ ವಿನಾಯಿತಿ

* ಕೇಂದ್ರ ಘೋಷಣೆ ಬೆಲೆ ಇಳಿಕೆಗೆ ಹಾದಿ ಸುಗಮ

* 3ನೇ ಅಲೆ ಎದುರಿಸಲು ಸಜ್ಜಾಗುತ್ತಿರುವ ಸರ್ಕಾರ

ನವದೆಹಲಿ(ಜು.14): ದೇಶ ಕೊರೋನಾ ಮೂರನೇ ಅಲೆಯತ್ತ ಹೆಜ್ಜೆ ಹಾಕುತ್ತಿದೆ ಎಂಬ ಆತಂಕದ ಬೆನ್ನಲ್ಲೇ, ಕೊರೋನಾ ಟೆಸ್ಟ್‌ ಕಿಟ್‌ನ ಕಚ್ಚಾವಸ್ತು ಮತ್ತು ಬ್ಲಾ ್ಯಕ್‌ಫಂಗಸ್‌ ಚಿಕಿತ್ಸೆಗೆ ಬಳಸಲಾಗುವ ಆ್ಯಂಫೋಟೆರಿಸಿನ್‌ ಬಿ ಔಷಧದ ಎಪಿಐ (ಆ್ಯಕ್ಟಿವ್‌ ಫಾರ್ಮಸ್ಯುಟಿಕಲ್‌ ಇನ್‌ಗ್ರೇಡಿಯಂಟ್ಸ್‌) ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದಲ್ಲಿ ರದ್ದುಗೊಳಿಸಿದೆ.

ಕೇಂದ್ರ ಸರ್ಕಾರದ ಈ ಕ್ರಮದಿಂದಾಗಿ ಟೆಸ್ಟ್‌ ಕಿಟ್‌ ಮತ್ತು ಇತರೆ ಔಷಧಗಳ ದರ ಇಳಿಕೆಯಾಗಲಿದೆ. ಕಚ್ಚಾವಸ್ತುಗಳ ಸುಂಕ ರದ್ದತಿಯಿಂದಾಗಿ ದೇಶೀಯ ಔಷಧ ಉತ್ಪಾದನೆಗೆ ಮತ್ತಷ್ಟುನೆರವು ಸಿಕ್ಕಂತಾಗಲಿದೆ.

ಕೇಂದ್ರ ಹಣಕಾಸು ಸಚಿವಾಲಯ ಜು.12ರಂದು ಹೊರಡಿಸಿರುವ ಅಧಿಸೂಚನೆ ಅನ್ವಯ, ಕೋವಿಡ್‌ ಟೆಸ್ಟ್‌ ಕಿಟ್‌ ಮೇಲಿನ ಆಮದು ಸುಂಕ ರದ್ದು 2021ರ ಸೆ.30ರವರೆಗೆ ಮತ್ತು ಆ್ಯಂಫೋಟೆರಿಸಿನ್‌ ಬಿ ಔಷಧದ ಮೇಲಿನ ಸುಂಕ ರದ್ದು ಆ.31ರವರೆಗೆ ಜಾರಿಯಲ್ಲಿರಲಿದೆ. ಹಾಲಿ ಕೋವಿಡ್‌ ಟೆಸ್ಟ್‌ ಕಿಟ್‌ ಮೇಲೆ ಶೇ.5ರಷ್ಟುಮತ್ತು ಆ್ಯಂಫೋಟೆರಿಸಿನ್‌ ಮೇಲೆ ಶೇ.0ರಷ್ಟುಜಿಎಸ್‌ಟಿ ಜಾರಿಯಲ್ಲಿದೆ. ಇದೀಗ ಆಮದು ಸುಂಕ ಕೂಡ ರದ್ದು ಮಾಡಿರುವ ಕಾರಣ, ಈ ಎರಡೂ ವಸ್ತುಗಳ ದರ ಇನ್ನಷ್ಟುಇಳಿಕೆಯಾಗಲಿದೆ.

ಕಳೆದ ತಿಂಗಳು ಕೂಡ ಕೇಂದ್ರ ಸರ್ಕಾರ ಹಲವು ಕೋವಿಡ್‌ ಔಷಧ, ಉಪಕರಣಗಳ ಮೇಲಿನ ಜಿಎಸ್‌ಟಿಯನ್ನು ಇಳಿಸುವ ಮೂಲಕ ಜನರಿಗೆ ನೆರವಾಗಿತ್ತು. ಆಗ ಕೋವಿಡ್‌ ಟೆಸ್ಟ್‌ ಕಿಟ್‌ ಜಿಎಸ್‌ಟಿಯನ್ನು ಶೇ.12ರಿಂದ ಶೇ.5ಕ್ಕೆ ಇಳಿಕೆ ಮಾಡಿತ್ತು ಹಾಗೂ ಬ್ಲ್ಯಾಕ್‌ ಫಂಗಸ್‌ ಔಷಧದ ಜಿಎಸ್‌ಟಿಯನ್ನು ಶೂನ್ಯಕ್ಕಿಳಿಸಿತ್ತು.

click me!