ದೇಶದ ಎಲ್ಲರಿಗೂ ಕೊರೋನಾ ಲಸಿಕೆ ನೀಡಲು 80,000 ಕೋಟಿ ರು. ಬೇಕು!

By Kannadaprabha NewsFirst Published Sep 27, 2020, 7:50 AM IST
Highlights

ದೇಶದ ಎಲ್ಲರಿಗೂ ಕೊರೋನಾ ಲಸಿಕೆ ನೀಡಲು 80,000 ಕೋಟಿ ರು. ಬೇಕು| ಇಷ್ಟುಹಣ ವೆಚ್ಚಕ್ಕೆ ಕೇಂದ್ರ ಸರ್ಕಾರ ಸಿದ್ಧವಿದೆಯೇ?| ಕೇಂದ್ರಕ್ಕೆ ಸೆರಂ ಇನ್‌ಸ್ಟಿಟ್ಯೂಟ್‌ ಮುಖ್ಯಸ್ಥರ ಪ್ರಶ್ನೆ

ಪುಣೆ(ಸೆ.27): ದೇಶದ ಎಲ್ಲರಿಗೂ ಕೊರೋನಾ ವೈರಸ್‌ ತಡೆಯುವ ಲಸಿಕೆ ನೀಡಲು ಒಟ್ಟು 80,000 ಕೋಟಿ ರು. ಬೇಕಾಗುತ್ತದೆ. ಕೇಂದ್ರ ಸರ್ಕಾರ ಮುಂದಿನ ಒಂದು ವರ್ಷದಲ್ಲಿ ಅಷ್ಟುಖರ್ಚು ಮಾಡಲು ಸಿದ್ಧವಿದೆಯೇ ಎಂದು ಪುಣೆಯ ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಸಿಇಒ ಅಡಾರ್‌ ಪೂನಾವಾಲಾ ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿ ಪ್ರಧಾನಿ ಕಚೇರಿಯನ್ನು (ಪಿಎಂಒ) ಟ್ಯಾಗ್‌ ಮಾಡಿರುವ ಅವರು, ‘ಒಂದು ತುರ್ತು ಪ್ರಶ್ನೆ: ಮುಂದಿನ ಒಂದು ವರ್ಷಕ್ಕೆ ಕೇಂದ್ರ ಸರ್ಕಾರದ ಬಳಿ 80,000 ಕೋಟಿ ರು. ಲಭ್ಯವಿದೆಯೇ? ಏಕೆಂದರೆ ದೇಶದ ಎಲ್ಲರಿಗೂ ಕೊರೋನಾ ಲಸಿಕೆಯನ್ನು ಖರೀದಿಸಲು ಮತ್ತು ವಿತರಣೆ ಮಾಡಲು ಇಷ್ಟುಹಣ ಬೇಕಾಗುತ್ತದೆ. ನಾವು ಬಗೆಹರಿಸಿಕೊಳ್ಳಬೇಕಾದ ಮುಂದಿನ ಬಹುದೊಡ್ಡ ಸವಾಲು ಇದು’ ಎಂದು ಹೇಳಿದ್ದಾರೆ.

ಪುಣೆಯ ಸೆರಂ ಇನ್‌ಸ್ಟಿಟ್ಯೂಟ್‌ ಜಗತ್ತಿನಲ್ಲೇ ಅತಿಹೆಚ್ಚು ಲಸಿಕೆಗಳನ್ನು ಉತ್ಪಾದಿಸುವ ಸಂಸ್ಥೆಯಾಗಿದ್ದು, ಬ್ರಿಟನ್ನಿನ ಆಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್‌ ವಿವಿ ಸೇರಿ ಸಂಶೋಧಿಸಿರುವ ಕೊರೋನಾ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುತ್ತಿದೆ. ಅಲ್ಲದೆ, ತನ್ನದೇ ಆದ ಕೊರೋನಾ ಲಸಿಕೆಯನ್ನೂ ಅಭಿವೃದ್ಧಿಪಡಿಸುತ್ತಿದೆ.

click me!