ಪಡಿತರ ಅಂಗಡಿಗಳ ಕಾರ್ಯಕ್ಷಮತೆ ಹಾಗೂ ಪೌಷ್ಟಿಕಾಂಶದ ಲಭ್ಯತೆಯನ್ನು ಹೆಚ್ಚಿಸಲು ಅವುಗಳಲ್ಲಿ ಸಿರಿಧಾನ್ಯ, ಬೇಳೆ ಕಾಳು, ಡೈರಿ ಉತ್ಪನ್ನಗಳನ್ನು ಮಾರುವ ಪ್ರಾಯೋಗಿಕ ಯೋಜನೆಗೆ ಕೇಂದ್ರ ಆರೋಗ್ಯ ಸಚಿವ ಪ್ರಲ್ಹಾದ್ ಜೋಶಿ ಚಾಲನೆ ನೀಡಿದ್ದಾರೆ.
ನವದೆಹಲಿ (ಆ.21): ಪಡಿತರ ಅಂಗಡಿಗಳ ಕಾರ್ಯಕ್ಷಮತೆ ಹಾಗೂ ಪೌಷ್ಟಿಕಾಂಶದ ಲಭ್ಯತೆಯನ್ನು ಹೆಚ್ಚಿಸಲು ಅವುಗಳಲ್ಲಿ ಸಿರಿಧಾನ್ಯ, ಬೇಳೆ ಕಾಳು, ಡೈರಿ ಉತ್ಪನ್ನಗಳನ್ನು ಮಾರುವ ಪ್ರಾಯೋಗಿಕ ಯೋಜನೆಗೆ ಕೇಂದ್ರ ಆರೋಗ್ಯ ಸಚಿವ ಪ್ರಲ್ಹಾದ್ ಜೋಶಿ ಚಾಲನೆ ನೀಡಿದ್ದಾರೆ. ಇದರ ಅಡಿಯಲ್ಲಿ ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ 60 ಪಡಿತರ ಅಂಗಡಿಗಳನ್ನು ‘ಜನ ಪೋಷಣಾ ಕೇಂದ್ರ’ ಎಂದು ಹೆಸರಿಸಲಾಗಿದ್ದು, ಇದರಿಂದ ಎಲ್ಲರಿಗೂ ಲಾಭವಾಗಲಿದೆ ಎಂದು ಜೋಶಿ ಹೇಳಿದ್ದಾರೆ.
‘ಕೆಲ ಪ್ರದೇಶಗಳಲ್ಲಿ ಪಡಿತರ ಅಂಗಡಿಗಳು ತಿಂಗಳಿಗೆ ಕೇವಲ 8ರಿಂದ 9 ದಿನಗಳು ತೆರೆದಿರುತ್ತವೆ. ಇನ್ನೂ ಕೆಲ ಕಡೆಗಳಲ್ಲಿ ತಿಂಗಳಿಗೊಂದು ಬಾರಿ ಕೆಲಸ ಮಾಡಿ ಉಳಿದೆಲ್ಲಾ ದಿನಗಳು ಮುಚ್ಚಿರುತ್ತವೆ. ಈಗಿರುವ ಪಡಿತರ ವಿತರಕರಿಗೆ ಸಂಬಂಧಿಸಿದ ಕಮಿಷನ್ ಪದ್ಧತಿ ಅಸಮರ್ಪಕವಾಗಿದ್ದು, ಲಭ್ಯವಿರುವ ಸ್ಥಳಾವಕಾಶ ಮತ್ತು ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅವಶ್ಯಕತೆಯಿದೆ’ ಎಂದು ಸಚಿವರು ಅಭಿಪ್ರಾಯಪಟ್ಟರು. ಈ ಯೋಜನೆಯನ್ನು ಅಖಿಲ ಭಾರತ ನ್ಯಾಯಬೆಲೆ ಅಂಗಡಿ ವಿತರಕರು ಸ್ವಾಗತಿಸಿದ್ದು, ದೇಶಾದ್ಯಂತವಿರುವ 5.38 ಲಕ್ಷ ಪಡಿತರ ಅಂಗಡಿಗಳು ಹೊಸ ರೂಪ ಪಡೆಯಲಿವೆ ಎಂದರು.
undefined
ಮುಷ್ಕರ ನಿಲ್ಲಿಸಿ: ಕೋಲ್ಕತಾ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ವೈದ್ಯರಿಗೆ ಮುಷ್ಕರ ಕೈಬಿಟ್ಟು ಕೆಲಸಕ್ಕೆ ಮರಳುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮನವಿ ಮನವಿ ಮಾಡಿದೆ. ಇದೇ ವೇಳೆ ‘ನಮ್ಮನ್ನು ನಂಬಿ’ ಎಂದು ಪೀಠವು ವೈದ್ಯರಿಗೆ ಕೋರಿದೆ. ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾ। ಡಿ.ವೈ. ಚಂದ್ರಚೂಡ ಅವರ ಪೀಠ, ‘ವೈದ್ಯರು ಕೆಲಸದಿಂದ ದೂರವಿರುವುದು ರೋಗಿಗಳ ಪರಿಣಾಮ ಬೀರುತ್ತದೆ’ ಎಂದು ಹೇಳಿತು.
ವಿವಾದಿತ ಲ್ಯಾಟರಲ್ ಎಂಟ್ರಿ ನೇಮಕಾತಿ ರದ್ದು: ಯುಪಿಎಸ್ಸಿಗೆ ಕೇಂದ್ರ ಸರ್ಕಾರ ಸೂಚನೆ
‘ನಿಮ್ಮ ಸುರಕ್ಷತೆ ಮತ್ತು ರಕ್ಷಣೆ ಅತ್ಯುನ್ನತ ರಾಷ್ಟ್ರೀಯ ಕಾಳಜಿಯ ವಿಷಯವಾಗಿದೆ. ಅದನ್ನು ಖಚಿತಪಡಿಸಿಕೊಳ್ಳಲೆಂದೇ ನಾವು ಇಲ್ಲಿ ಇದ್ದೇವೆ. ಅದಕ್ಕಾಗಿಯೇ ನಾವು ವಿಷಯವನ್ನು ಹೈಕೋರ್ಟ್‌ಗೆ ಬಿಡಲಿಲ್ಲ. ನಾವೇ (ಸುಪ್ರೀಂ ಕೋರ್ಟ್) ಈ ವಿಷಯವನ್ನು ಕೈಗೆತ್ತಿಕೊಳ್ಳುವುದು ಅಗತ್ಯವಾಗಿದೆ. ದಯವಿಟ್ಟು ನಮ್ಮನ್ನು ನಂಬಿರಿ. ಕೆಲಸಕ್ಕೆ ಮರಳಿ’ ಎಂದು ಕೋರಿತು.