ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ದರ ಏರಿಕೆ!

By Kannadaprabha News  |  First Published Jul 18, 2021, 10:00 AM IST

* ಕೋವಿಶೀಲ್ಡ್‌ 1 ಡೋಸ್‌ 215, ಕೋವ್ಯಾಕ್ಸಿನ್‌ 225 ರು.

* ಪರಿಷ್ಕೃತ ದರದಲ್ಲಿ ಆಗಸ್ಟ್‌ನಿಂದ ಸರ್ಕಾರಕ್ಕೆ ಪೂರೈಕೆ

* ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ದರ ಏರಿಕೆ

* ಡಿಸೆಂಬರ್‌ವರೆಗೆ 66 ಕೋಟಿ ಡೋಸ್‌ ಪೂರೈಲೆ


ನವದೆಹಲಿ(ಜು.18): 3ನೇ ಅಲೆಯ ಆತಂಕಗಳ ನಡುವೆಯೇ ದೇಶದ ಜನರಿಗೆ ತ್ವರಿತವಾಗಿ ಲಸಿಕೆ ವಿತರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ನ 66 ಕೋಟಿಗಳಷ್ಟುಡೋಸ್‌ಗಳ ಖರೀದಿಗೆ ಆರ್ಡರ್‌ ನೀಡಿದೆ. ಆದರೆ ಈ ಹಿಂದಿನಂತೆ ಸರ್ಕಾರ ಖರೀದಿಸುವ ಲಸಿಕೆಯ ದರ 150 ರು. ಇರುವುದಿಲ್ಲ. ಬದಲಾಗಿ ಸುಮಾರು 75 ರು.ನಷ್ಟುಹೆಚ್ಚಲಿದೆ.

ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ ಸೀರಂ ಇನ್‌ಸ್ಟಿಟ್ಯೂಟ್‌ 37.5 ಕೋಟಿಯಷ್ಟುಕೋವಿಶೀಲ್ಡ್‌ ಲಸಿಕೆಗಳನ್ನು ಮತ್ತು ಭಾರತ್‌ ಬಯೋಟೆಕ್‌ 28.5 ಕೋಟಿಯಷ್ಟುಕೋವ್ಯಾಕ್ಸಿನ್‌ ಲಸಿಕೆಯ ಡೋಸ್‌ಗಳನ್ನು ಸರ್ಕಾರಕ್ಕೆ ಪೂರೈಸಲಿವೆ. ಪರಿಷ್ಕೃತ ದರವಾದ ಕೋವಿಶೀಲ್ಡ್‌ನ ಪ್ರತೀ ಡೋಸ್‌ಗೆ 215.25 ರು. ಮತ್ತು ಕೋವ್ಯಾಕ್ಸಿನ್‌ನ ಪ್ರತೀ ಡೋಸ್‌ಗೆ 225.75 ರು.ನೊಂದಿಗೆ (10 ರು. ಜಿಎಸ್‌ಟಿ ಸೇರಿದಂತೆ ) ಸರ್ಕಾರ ಖರೀದಿಸಲಿದೆ.

Latest Videos

ಈ ಮೊದಲು ಈ ಎರಡೂ ಲಸಿಕೆಗಳ ಪ್ರತೀ ಡೋಸ್‌ಗೆ 150 ರು. ನೀಡಿ ಖರೀದಿಸಲಾಗುತ್ತಿತ್ತು. ಆದರೆ ಜೂನ್‌ 21ಕ್ಕೆ ಜಾರಿಗೆ ಬಂದ ನೂತನ ಕೋವಿಡ್‌ ಲಸಿಕೆ ಖರೀದಿ ನಿಯಮಾವಳಿಗಳ ಪ್ರಕಾರ ಲಸಿಕೆಯ ಶೇ.75ರಷ್ಟುಉತ್ಪಾದನೆಯನ್ನು ಸರ್ಕಾರವೇ ಖರೀದಿಸಲಿದೆ. ಹೀಗಾಗಿ ದರ ಹೆಚ್ಚಳವಾಗಿದೆ.

click me!