ದೇಶ ವಿದೇಶದಲ್ಲಿ ಭಾರತದ 78ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದರ ಪ್ರಯುಕ್ತ ಟೆಕ್ ದೈತ್ಯ ಗೂಗಲ್ ತನ್ನ ಲೋಗೋವನ್ನು ಬದಲಾಯಿಸಿದೆ. ಭಾರತದ ವೈವಿದ್ಯಮಯ ವಾಸ್ತುಶಿಲ್ಪ ಥೀಮ್ ಡೂಡಲ್ ಪ್ರಕಟಿಸಿ ಸ್ವಾತಂತ್ರ್ಯ ಸಂಭ್ರಮದಲ್ಲಿ ಪಾಲ್ಗೊಂಡಿದೆ.
ನವದೆಹಲಿ(ಆ.15) ಭಾರತದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಕಳೆಗಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೇರವೆರಿಸಿ ದೇಶದ ಜನತೆಗೆ ಶುಭಾಶಯ ತಿಳಿಸಿದ್ದಾರೆ. ಶಾಲೆ, ಕಚೇರಿ, ಸಂಸ್ಥೆ, ಸಂಘ ಸಂಸ್ಥೆ, ಆಟೋ, ಬಸ್ ನಿಲ್ದಾಣ, ಪೊಲೀಸ್ ಠಾಣೆ ಸೇರಿದಂತೆ ಎಲ್ಲೆಡೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿದೆ. ಟೆಕ್ ದೈತ್ಯ ಗೂಗಲ್ ಕೂಡ ಸ್ವಾತಂತ್ರ್ಯ ದಿನಾಚರಿಸಿದೆ. ಇದೇ ವೇಳೆ ಗೂಗಲ್ ತನ್ನ ಲೋಗೋವನ್ನು ಡೂಡಲ್ ಆಗಿ ಬದಲಾಯಿಸಿದೆ. ಭಾರತದ ವೈವಿಧ್ಯಮಯ ವಾಸ್ತುಶಿಲ್ಪದ ಡೂಡಲ್ ಪ್ರಕಟಿಸಿ ಸ್ವಾತಂತ್ರ್ಯ ದಿನಾಚರಿಸಿದೆ.
ಭಾರತದ ಶ್ರೀಮಂತ ಸಂಸ್ಕೃತಿ, ವಿವಿಧತೆಯಲ್ಲಿ ಏಕತೆ, ಪರಂಪರೆಯನ್ನು ಸಾರುವ ವಿಶೇಷ ವಾಸ್ತುಶಿಲ್ಪ ಥೀಮ್ ಡೂಡಲ್‌ನ್ನು ಗೂಗಲ್ ಪ್ರಕಟಿಸಿದೆ. ವಿವಿಧ ಬಣ್ಣ, ವಿಶೇಷ ಅಲಂಕಾರಿಕ ಬಾಗಿಲುಗಳ ಡೂಡಲ್ ಪ್ರಕಟಿಸುವ ಮೂಲಕ ಭಾರತೀಯತೆಯನ್ನು ಸಾರಿದೆ. ಈ ವಿಶೇಷ ಥೀಮ್ ಚಿತ್ರವನ್ನು ಮುಂಬೈನ ಆರ್ಟಿಸ್ಟ್ ವೃಂದಾ ಝಾವೇರಿ ನಿರ್ಮಿಸಿದ್ದಾರೆ.
undefined
ಕೆಂಪು ಕೋಟೆಯಲ್ಲಿ ರಾರಾಜಿಸಿದ ತಿರಂಗ: ಯೋಧರು, ರೈತರು, ಯುವ ಸಮೂಹಕ್ಕ ಮೋದಿ ಸಲ್ಯೂಟ್!
ಬಾಗಿಲು, ಕಿಟಕಿಗಳ ವಿಶೇಷ ವಾಸ್ತಶಿಲ್ಪ ಥೀಮ್‌ನಲ್ಲಿ ಕೆಲ ಪ್ರಮುಖ ವಿಚಾರಗಳು ಒಳಗೊಂಡಿದೆ. ಭಾರತೀಯ ರಾಷ್ಟ್ರೀಯ ಪಕ್ಷಿ ನವಿಲನ್ನು ಇದರಲ್ಲಿ ಚಿತ್ರಿಸಲಾಗಿದೆ. ಡೂಡಲ್ ಮೂಲಕ ಗೂಗಲ್ ಲೋಗೋ ಸೇರಿಸಿಕೊಂಡು ಸ್ವಾತಂತ್ರ್ಯ ದಿನಾಚರಣೆಗೆ ಭಾರತೀಯರಿಗೆ ಶುಭಾಶಯ ತಿಳಿಸಿದೆ. ಗೂಗಲ್ ಡೂಡಲ್‌ಗೆ ಇದೀಗ ಭಾರಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರತಿ ವಿಶೇಷ ಸಂದರ್ಬಗಳಲ್ಲಿ ಗೂಗಲ್ ಡೂಡಲ್ ಮೂಲಕ ಲೋಗೋ ಬದಲಿಸುತ್ತದೆ. ಆಯಾ ಆಚರಣೆ, ಹಬ್ಬಗಳಿಗೆ ಅನುಗುಣುವಾಗಿ ತಾತ್ಕಾಲಿಕವಾಗಿ ಗೂಗಲ್ ತನ್ನ ಲೋಗೋವನ್ನು ಡೂಡಲ್ ಮೂಲಕ ಪ್ರಕಟಿಸುತ್ತದೆ.ಗಣರಾಜ್ಯೋತ್ಸವ, ದೀಪಾವಳಿ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಗೂಗಲ್ ಈ ರೀತಿ ಡೂಡಲ್ ಮೂಲಕ ಸಂಭ್ರಮದಲ್ಲಿ ಪಾಲ್ಗೊಂಡಿದೆ.
78ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಬಳಿಕ ಭಾರತೀಯರನ್ನುದ್ದೇಶಿ ಮಾತನಾಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಪ್ರಾಣ ಮುಡಿಪಾಗಿಟ್ಟ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ಮೋದಿ ಸ್ಮರಿಸಿದ್ದಾರೆ. 40 ಕೋಟಿ ಭಾರತೀಯರು ಈ ಸ್ವಾಂತ್ರ್ಯಕ್ಕಾಗಿ ಹೋರಾಡಿದ್ದರು, ಪ್ರತಿ ನಾಗರೀಕ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು. ಇದೀಗ 140 ಕೋಟಿ ಜನರು ಭಾರತವನ್ನು ಮತ್ತಷ್ಟು ಶಕ್ತಿಶಾಲಿ ದೇಶವನ್ನಾಗಿ ಮಾಡಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಸ್ವಾತಂತ್ರ್ಯ ಬಳಿಕ ದೇಶ ಸಾಗಿ ಬಂದ ರೀತಿಯನ್ನು ಸ್ಮರಿಸಿದ್ದಾರೆ. ಭಾರತದ ಅಭಿವೃದ್ಧಿ, ಯುವ ಸಮೂಹದ ಸಾಮರ್ಥ್ಯ, ತಂತ್ರಜ್ಞಾನ, ಗಡಿ ರಕ್ಷಣೆ, ಚಂದ್ರಯಾನ, ಒಲಿಂಪಿಕ್ಸ್ ಸಾಧನೆ ಸೇರಿದಂತೆ ಹಲವು ಪ್ರಮುಖ ಘಟ್ಟಗಳನ್ನು ಮೋದಿ ನೆನೆಪಿಸಿದ್ದಾರೆ.
ಸ್ವಾತಂತ್ರ್ಯೋತ್ಸವ ಸಂಭ್ರಮದಂದು ಪ್ರಧಾನಿ ಮೋದಿ ಅವರ ಟರ್ಬನ್ ಫ್ಯಾಶನ್!