Delhi Metro Liquor Rules: ಮದ್ಯ ಸೇವಿಸುವವರಿಗೆ ಸಂತಸದ ಸುದ್ದಿ ದೆಹಲಿ ಮಟ್ರೋ ನೀಡಿದೆ. ಈಗ ಮೆಟ್ರೋದಲ್ಲಿ ಎರಡು ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ಸಾಗಿಸಲು ಅನುಮತಿ ಸಿಕ್ಕಿದೆ. ಡಿಎಂಆರ್‌ಸಿ ಮತ್ತು ಸಿಐಎಸ್‌ಎಫ್ ಅಧಿಕಾರಿಗಳನ್ನೊಳಗೊಂಡ ಸಮಿತಿ ಈ ಕುರಿತು ನಿರ್ಧಾರ ಕೈಗೊಂಡಿದೆ.
ನವದೆಹಲಿ (ಜೂ.30): ದೆಹಲಿ ಮೆಟ್ರೋದಲ್ಲಿ ಏನ್ ಆಗೋದಿಲ್ಲ ಹೇಳಿ, ಒಂದು ಕಡೆ ಮುತ್ತು ನೀಡೋರಾದರೆ, ಇನ್ನೊಂದು ಕಡೆ ಮುತ್ತಿಗೆ ಹಾಕೋ ರೀತಿ ಆಗುವ ಜಗಳಗಳು. ಇದರ ನಡುವೆ ಇತ್ತೀಚೆಗೆ ಯುವತಿಯೊಬ್ಬಳು, ದೆಹಲಿ ಮೆಟ್ರೋದಲ್ಲಿಯೇ ಹೇರ್ ಸ್ಟ್ರೇಟನಿಂಗ್ ಮಾಡಿದ್ದು ಸುದ್ದಿಯಾಗಿತ್ತು. ಇಷ್ಟೆಲ್ಲಾ ಇರೋ ದೆಹಲಿ ಮೆಟ್ರೋದಲ್ಲಿ ಇಲ್ಲಿಯವರೆಗೂ ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗಲು ಅನುಮತಿ ಇದ್ದಿರಲಿಲ್ಲ. ಆದರೆ ಈಗ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್‌ನ ನಿಬಂಧನೆಗಳ ಪ್ರಕಾರ, ದೆಹಲಿ ಮೆಟ್ರೋದಲ್ಲಿ ಒಬ್ಬ ವ್ಯಕ್ತಿಗೆ ಎರಡು ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ಸಾಗಿಸಲು ಈಗ ಅನುಮತಿಸಲಾಗಿದೆ ಎಂದು ದೆಹಲಿ ಮೆಟ್ರೋ ಹೇಳಿದೆ. ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್‌ನ ನಿಬಂಧನೆಗಳಿಗೆ ಅನುಗುಣವಾಗಿ, ದೆಹಲಿ ಮೆಟ್ರೋದಲ್ಲಿ ಒಬ್ಬ ವ್ಯಕ್ತಿಗೆ ಎರಡು ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ಸಾಗಿಸಲು ಈಗ ಅನುಮತಿಸಲಾಗಿದೆ ಎಂದು ದೆಹಲಿ ಮೆಟ್ರೋ ಅಧಿಕೃತವಾಗಿ ತಿಳಿಸಿದೆ. ಸಿಐಎಸ್‌ಎಫ್ ಮತ್ತು ಡಿಎಂಆರ್‌ಸಿ ಅಧಿಕಾರಿಗಳ ಸಮಿತಿಯು ಹಿಂದಿನ ಆದೇಶವನ್ನು ಪರಿಶೀಲಿಸಿದೆ. ಹಿಂದಿನ ಆದೇಶದ ಪ್ರಕಾರ, ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್ ಹೊರತುಪಡಿಸಿ ದೆಹಲಿ ಮೆಟ್ರೋದಲ್ಲಿ ಮದ್ಯ ಸಾಗಿಸುವುದನ್ನು ನಿಷೇಧಿಸಲಾಗಿತ್ತು.
ಆದರೆ, ಮೆಟ್ರೋ ಆವರಣದಲ್ಲಿ ಮದ್ಯಪಾನ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಮೆಟ್ರೋ ಪ್ರಯಾಣಿಕರು ಮದ್ಯದ ಬಾಟಲಿ ತೆಗೆದುಕೊಂಡು ಹೋಗುವಾಗ ಸೂಕ್ತವಾದ ಎಚ್ಚರಿಕೆಯನ್ನು ಪಾಲಿಸಬೇಕು ಎಂದು ತಿಳಿಸಲಾಗಿದೆ. ಯಾವುದೇ ಪ್ರಯಾಣಿಕರು ಮದ್ಯದ ಅಮಲಿನಲ್ಲಿ ಅಸಭ್ಯವಾಗಿ ವರ್ತಿಸುವುದು ಕಂಡುಬಂದಲ್ಲಿ, ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಡಿಎಂಆರ್‌ಸಿ ತಿಳಿಸಿದೆ.
ತೀರಾ ಇತ್ತೀಚಿನವರೆಗೂ ಏರ್‌ಪೋರ್ಟ್ ಲೈನ್ ಹೊರತಾಗಿ ಮತ್ತೆಲ್ಲಾ ಮೆಟ್ರೋ ಲೈನ್‌ನಲ್ಲಿ ಮದ್ಯದ ಬಾಟಲಿ ಸಾಗಾಟಕ್ಕೆ ನಿಷೇಧವಿತ್ತು. ಆದರೆ, ಈ ಕುರಿತಾಗಿ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸ್ಪಷ್ಟೀಕರಣದಲ್ಲಿ ತನ್ನ ತೀರ್ಮಾನವನ್ನು ಬದಲಿಸಿದ್ದೇವೆ ಎಂದು ತಿಳಿಸಿದೆ.
ಒಟಿಟಿಯಲ್ಲಿ ಯಾವ ಸಿರೀಸ್ ಚೆನ್ನಾಗಿದೆ..! ಮೆಟ್ರೋ ಪ್ರಯಾಣದ ವೇಳೆ ಮಕ್ಕಳ ಜೊತೆ ಪ್ರಧಾನಿ ಮಾತು
ದೆಹಲಿ ಮೆಟ್ರೋದಲ್ಲಿನ ನಿಷೇಧಿತ ವಸ್ತುಗಳ ಪೈಕಿ ಯಾವುದೇ ರೀತಿಯ ಚೂಪಾದ ವಸ್ತುಗಳು, ಸ್ಫೋಟಕ ವಸ್ತುಗಳು, ಉಪಕರಣಗಳು, ಸುಡುವ ವಸ್ತುಗಳು, ರಾಸಾಯನಿಕಗಳು ಮತ್ತು ಇತರ ಅಪಾಯಕಾರಿ ವಸ್ತುಗಳು, ಬಂದೂಕುಗಳು ಮತ್ತು ಬಂದೂಕುಗಳು ಮತ್ತು ಇತರ ಆಕ್ರಮಣಕಾರಿ ವಸ್ತುಗಳನ್ನು ಸಾಗಾಟ ಮಾಡಲು ನಿಷೇಧಿಸಲಾಗಿದೆ.
ದೆಹಲಿ ವಿವಿ ಶತಮಾನೋತ್ಸವ ಕಾರ್ಯಕ್ರಮಕ್ಕೆ ಮೆಟ್ರೋದಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ