ದಿಲ್ಲಿ: ಅಮಿತ್ ಶಾ ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು, ದಿಲ್ಲೀಲಿ ಕುಸಿದ ಕೊರೋನಾ ಸೋಂಕು

By Suvarna News  |  First Published Jul 7, 2020, 9:22 PM IST

ಕೊರೋನಾ ಹತ್ತಿಕ್ಕುವಲ್ಲಿ ರಾಷ್ಟ್ರ ರಾಜಧಾನಿ ಯಶಸ್ವಿ/ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ/ ಪ್ರತಿದಿನ ದಾಖಲಾಗುತ್ತಿರುವ ಕೇಸ್ ಇಳಿಮುಖ/ ಹೆಚ್ಚಾದ ಟೆಸ್ಟಿಂಗ್ ಪ್ರಕ್ರಿಯೆ


- ಡೆಲ್ಲಿ ಮಂಜು

ರಾಷ್ಟ್ರ ರಾಜಧಾನಿಯಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂತಂತೆ ? ಈ ಮಾತು ಒಂದು ರೀತಿಯಲ್ಲಿ ದೆಹಲಿಗರು ನಿಟ್ಟುಸಿರು ಬಿಡುವ ಸುದ್ದಿ. ದೆಹಲಿಯಲ್ಲಿ ಕೊರೊನಾ ವೀಸಾ ಅವಧಿ ಮುಗಿಯಿತು ಎನ್ನುವ ಸಮಾಧಾನದ ವಿಷಯ ಕೂಡ.

Latest Videos

undefined

ಅದರಲ್ಲೂ ಶೇ. 72 ರಿಕವರಿ ರೇಟ್ ಕಾಣಿಸಿಕೊಳ್ಳುತ್ತಿರುವುದು ಎಲ್ಲರೂ ಸಲೀಸಾಗಿ ಉಸಿರಾಡುವಂತಾಗುತ್ತಿದೆ. ಇಷ್ಟು ಬೇಗ ಈ ಪಾಠಿ ರಿಕವರಿಯಾಗೋ ಕಾರಣ ಏನು? ಇಂಥ ಪ್ರಶ್ನೆ ಬರದೇ ಇರೋಕೆ ಸಾಧ್ಯವಾ? ಆ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ.

ಶಾ ಎಂಟ್ರಿ..! ಮೀಟಿಂಗ್ ಜೊತೆ ಸಹಾಯ..! 
ಬಹುಶಃ ಇದು ಡೆಲ್ಲಿಯ ಜನರು ಕೂಡ ನಿರೀಕ್ಷೆ ಮಾಡಿರಲಿಲ್ಲ. ನಿತ್ಯ ಕೇಳಿಬರುತ್ತಿದ್ದ ಸಾವಿನ ಸುದ್ದಿ, ಏಕಾಏಕಿ ಕಡಿಮೆಯಾಗಿದ್ದು ಹೇಗೆ ಅನ್ನೋ ಪ್ರಶ್ನೆ ಕೂಡ ಕಾಡಿದೆ.

ರಾಷ್ಟ್ರ ರಾಜಧಾನಿಯಲ್ಲಿ ಕೊರೋನಾ ಯಾರ ಕೈಗೂ ಸಿಗದೆ ಊರ ಬಸವನಂತೆ ಸುತ್ತುತ್ತಿದೆ. 'ಕೊರೊನಾ ಬಸವನ'ಗುಟುರಿಗೆ ಇಡೀ ಡೆಲ್ಲಿಯಲ್ಲಿ ಆತಂಕದ ಛಾಯೆ ಹೆಚ್ಚಾಗುತ್ತಿದ್ದಾಗ ಒಮ್ಮೆಲೇ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಎಂಟ್ರಿ ಕೊಟ್ರು. ರಾಜ್ಯ ಸರ್ಕಾರದ ಮೇಲೆ ಹೊಣೆ ಹೊರಿಸದೇ ಖುದ್ದು ಆಸ್ಪತ್ರೆ ಗಳು ಭೇಟಿ ನೀಡಿ, ವಿವರ ಪಡೆದರು. ಸೋಂಕು ಇಮ್ಮಡಿಯಾಗಲು ಕಾರಣವೇನು ಅಂಥ ಹುಡುಕಲು ನೀತಿ ಆಯೋಗದ ತಜ್ಞರನ್ನು ನೇಮಿಸಿದ್ರು. ಇದು ಡೆಲ್ಲಿಯ ಜನರು 'ತಕ್ಲೀಫ್' ಇಲ್ಲದೆ ಉಸಿರಾಡೋಕೆ ಮೊದಲ ಕಾರಣವಾಯ್ತು.

ನರೇಂದ್ರ ಮೋದಿ ಲಡಾಖ್ ಭೇಟಿ ಪೂರ್ಣ ಕತೆ

ನೀತಿ ಆಯೋಗದ ವಿ.ಕೆ.ಪೌಲ್ ಅವರ ರಿಪೋರ್ಟ್ ಇಟ್ಟುಕೊಂಡು ದೆಹಲಿಯ ಎಲ್ ಜಿ, ಸಿಎಂ ಕೇಜ್ರಿವಾಲ್ ಅವರನ್ನು ಜೊತೆ ಕೂರಿಸಿಕೊಂಡು ಒಂದಷ್ಟು ತೀರ್ಮಾನಗಳು ಕೈಗೊಂಡರು.

ಜೂನ್ 15 ರ ವೇಳೆಯಲ್ಲಿ ದೆಹಲಿಯ ಪರಿಸ್ಥಿತಿ ತೀರ ಕೆಡುತ್ತಾ ಬಂದಿತ್ತು. ಏಳು ಜಿಲ್ಲೆಗಳಲ್ಲಿ ಪಾಸಿಟಿವ್ ದರ ಶೇ.40 ತಲುಪಿತ್ತು.

ಮೊದಲು ಹಂತದಲ್ಲಿ ಆಂಟಿಜನ್ ಬೇಸಡ್ ಟೆಸ್ಟ್ ಗೆ ದೊಡ್ಡ ಮಟ್ಟದಲ್ಲಿ ಪುಷ್ ಕೊಟ್ಟಿದ್ದು. ಜೂನ್ ತಿಂಗಳ ಆರಂಭದಲ್ಲಿ ನಿತ್ಯ ಮೂರು ಸಾವಿರ ಟೆಸ್ಟ್ ಮಾಡಲಾಗುತ್ತಿತ್ತು. ಜೂನ್ ಮೂರನೇ ವಾರ ಅಥವಾ ಅಂತ್ಯಕ್ಕೆ ಅದು ನಿತ್ಯ 20 ಸಾವಿರಕ್ಕೆ ತಂದು ನಿಲ್ಲಿಸಿದ್ದು. ಇದು ದೊಡ್ಡಮಟ್ಟದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಹಾಯವಾಯಿತು. 15 ದಿನದಲ್ಲಿ 2.4 ಲಕ್ಷ ಮಂದಿಯನ್ನು ಟೆಸ್ಟ್ ಮಾಡಲು ಸಹಾಯಕವಾಯಿತು. 

28 ಎನ್ ಜಿ ಓಗಳು, 750 ಮಂದಿ ಸ್ವಯಂ ಸೇವಕರ ಜೊತೆ ಕಂಟೋನ್ಮೆಂಟ್ ವಲಯಗಳಲ್ಲಿ ಪಕ್ಕಾ ಸರ್ವೇ ಮಾಡಿಸಿದ್ರು. ಸೋಂಕಿತರನ್ನು ಗುರುತಿಸಿ, ಚಿಕಿತ್ಸೆ ನೀಡಲಾಯ್ತು.

ಬೆಡ್ ಸಂಖ್ಯೆ 30 ಸಾವಿರಕ್ಕೇರಿಸಿದ್ದು ; ಡೆಲ್ಲಿಯ ಸರ್ಕಾರಕ್ಕೆ ಇದ್ದ ಮತ್ತೊಂದು ದೊಡ್ಡ ಸಮಸ್ಯೆ ಬೆಡ್ ವಿಷಯ. ಇಡೀ ಡೆಲ್ಲಿಯಲ್ಲಿ ಜೂನ್ 15 ರ ತನಕ ಇದ್ದದ್ದು ಕೇವಲ 10 ಸಾವಿರ ಬೆಡ್. ಅದನ್ನು ಏಕಾಏಕಿ 30 ಸಾವಿರ ಬೆಡ್ ಆಗುವಂತೆ ನೋಡಿಕೊಂಡುದ್ದು. ಸೌತ್ ಡೆಲ್ಲಿ ಬಾಟಿ ಮ್ಯನ್ಸ್ ಏರಿಯಾದ ರಾಧಾಸ್ವಾಮಿ ಸತ್ಸಂಗ್ ನಲ್ಲಿ ಐಟಿಬಿಪಿ ಸಹಯೋಗದಲ್ಲಿ 10 ಸಾವಿರ ಬೆಡ್,  ರಕ್ಷಣಾ ಇಲಾಖೆಯಿಂದ ಒಂದು ಸಾವಿರ, ರೈಲ್ವೆ ಕೋಚ್ ಗಳಲ್ಲಿ ಎಂಟು ಸಾವಿರ ಬೆಡ್ ಸಿಗುವಂತೆ ಮಾಡಿದ್ದು. (ಇವತ್ತು ಹೆಚ್ಚು ಕಮ್ಮಿ ನಿತ್ಯ ಐದು ಸಾವಿರ ಬೆಡ್ ಖಾಲಿ ಇವೆ ಎಂಬ ಸುದ್ದಿಗಳು ಬರುತ್ತಿವೆ)

500 ಆಕ್ಸಿಜನ್ ಸಿಲಿಂಡರ್, 450 ವೆಟಿಲೇಟರ್, 10 ಸಾವಿರ ಆಕ್ಸಿ ಮೀಟರ್ ಕೇಂದ್ರದಿಂದ ಒದಗಿಸುದ್ದು, ರಾಜ್ಯ ಸರ್ಕಾರ ಆಂಬುಲೆನ್ಸ್ ಗಳನ್ನು ದ್ವಿಗುಣ ಗೊಳಿಸಿ, ಸೋಂಕಿತನ ಮನೆಗೆ ಕಡಿಮೆ ಸಮಯದಲ್ಲಿ ತಲುಪುವಂತೆ ನೋಡಿಕೊಂಡಿದ್ದು, ಕೊರೊನಾ ರಿಕವರಿ ರೇಟ್ ಜಾಸ್ತಿ ಮಾಡಿತು . ನಿತ್ಯ 900 ರಿಂದ ಒಂದು ಸಾವಿರ ದೂರವಾಣಿ ಕರೆಗಳಿಗೆ ಡೆಲ್ಲಿ ಸರ್ಕಾರ ಸ್ಪಂದಿಸುತ್ತಿದೆ ಅನ್ನೋದು ಮತ್ತೊಂದು ಮಹತ್ವದ ಅಂಶ.

"

 

 

click me!