ಚಿನ್ನ, ಕೋಟಿಗಟ್ಟಲೇ ಹಣ ದೋಚಿದ ಕಳ್ಳರು: ದೂರು ಕೊಡೋಕೆ ಯಾರು ಬರಲೇ ಇಲ್ಲ!

By Suvarna NewsFirst Published Jun 12, 2021, 3:25 PM IST
Highlights

* ನೊಯ್ಡಾದಲ್ಲೊಂದು ವಿಚಿತ್ರ ಪ್ರಕರಣ

* ರಾಶಿ ರಾಶಿ ಚಿನ್ನ, ಕಂತೆ ಕಂತೆ ನೋಟು ಕದ್ದರೂ ದೂರು ಕೊಡಲಿಲ್ಲ ಮಾಲೀಕ

* ಕಳ್ಳರ ಮಧ್ಯೆ ಜಗಳವಾದಾಗ ಬಯಲಾಯ್ತು ಸತ್ಯ

ನೊಯ್ಡಾ(ಜೂ.12): ಉತ್ತರ ಪ್ರದೇಶದ ನೊಯ್ಡಾದಲ್ಲಿ ಈವರೆಗಿನ ಅತೀ ದೊಡ್ಡ ದರೋಡೆ ಬಹಿರಂಗಗೊಂಡಿದೆ. ಹೀಗಿದ್ದಜರೂ ಯಾರೊಬ್ಬರೂ ಹಣ, ಚಿನ್ನ ಕಳ್ಳತನವಾಗಿದೆ ಎಂದು ದೂರು ನೀಡಿಲ್ಲ. ಹೌದು ಇಲ್ಲಿನ ಕಳ್ಳರ ಕಣ್ಣು ಈ ಬಾರಿ ಬಿದ್ದಿದ್ದು ಚಿನ್ನ ಹಾಗೂ ಕಪ್ಪುಹಣದ ಮೇಲೆ. ಆದರೆ ಹಲವಾರು ತಿಂಗಳು ಕಳೆದರೂ ಹಣದ ಮಾಲೀಕರು ಮಾತ್ರ ಯಾವುದೇ ದೂರು ದಾಖಲಿಸಿಲ್ಲ. ಕಳ್ಳರನ್ನು ಹಿಡಿದ ಪೊಲೀಸರು ಕೋಟ್ಯಾಂತರ ರೂಪಾಯಿ ಮೌಲ್ಯದ ಸಂಪತ್ತು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಆದಾಯ ತೆರಿಗೆ ಕಚೇರಿಗೆ ಮಾಹಿತಿ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಅನ್ವಯ ನೊಯ್ಡಾದ ಪಾಶ್‌ ಕಾಲೋನಿಯ ಫ್ಲಾಟ್‌ನಲ್ಲಿ ಹತ್ತು ಕಳ್ಳರು ಸೇರಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ, ಕಂತೆ ಕಂತೆ ಹಣ, ಚಿನ್ನದ ಇಸ್ಕೆಟ್ ಹಾಗು ಎರಡು ಆಸ್ತಿ ಪತ್ರಗಳನ್ನು ಲಪಟಾಯಿಸಿದ್ದಾರೆ. 2020ರಲ್ಲಿ ಈ ಕಳ್ಳತನ ನಡೆದಿದ್ದು, ಖದೀಮರು ತಲೆ ಮರೆಸಿಕೊಂಡುದ್ದರು.

ಸಿಮ್‌ ಕಾರ್ಡ್‌ ಅಪ್ಡೇಟ್‌ ನೆಪ, ಲಕ್ಷಾಂತರ ರು. ವಂಚನೆ: ಕಂಗಾಲಾದ ಮಹಿಳೆ..!

ಆದರೆ ಕೆಲ ತಿಂಗಳ ಬಳಿಕ ಕಳ್ಳರ ನಡುವೆ ಹಣ ಹಂಚುವಿಕೆ ವಿಚಾರವಾಗಿ ಜಗಳ ಆರಮಭವಾಗಿದ್ದು, ಈ ವಿಚಾರ ಬಹಿರಂಗಗೊಂಡಿದೆ. ಈ ವಿಚಾರ ನೊಯ್ಡಾ ಪೊಲೀಸರ ಗಮನಕ್ಕೂ ಬಂದಿದೆ. ಪೊಲೀಸರು ಆರು ಕಳ್ಳರನ್ನು ಹಿಡಿದಿದ್ದು, ಅವರಿಂದ ಸುಮಾರು ಹದಿನಾಲ್ಕು ಕೆಜಿ ಚಿನ್ನ ಹಾಗೂ 57 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಅನ್ವಯ ಇದೆಲ್ಲವೂ ಒಟ್ಟು ಸೇರಿದರೆ 8 ಕೋಟಿ 25 ಲಕ್ಷ ರೂಪಾಯಿ ಮೌಲ್ಯದ ಸಂಪತ್ತಾಗಿದೆ ಎಂದಿದ್ದಾರೆ. ಇನ್ನುಳಿದ ನಾಲ್ವರಿಗಾಘಿ ಪೊಲೀಸರು ಸದ್ಯ ಬಲೆ ಬೀಸಿದ್ದಾರೆ. 

click me!