ಗೋವಾಕ್ಕೆ ಬರುವ ವಿದೇಶಿ ಪ್ರವಾಸಿಗರ ಖಾಸಗಿತನವನ್ನು ಕಾಪಾಡುವ ನಿಟ್ಟಿನಲ್ಲಿ ಗೋವಾ ಸರ್ಕಾರ ಕಠಿಣ ನಿಯಮವನ್ನು ಪ್ರಕಟಿಸಿದೆ. ಅದರಲ್ಲಿ ಪ್ರಮುಖವಾಗಿ ಪ್ರವಾಸಿಗರ ಅನುಮತಿ ಇಲ್ಲದೆ ಫೋಟೋ ತಗೆಯೋದಿಕ್ಕೆ ನಿಷೇಧ ಹೇರಲಾಗಿದೆ. ಹಾಗೇನಾದರೂ ಮಾಡಿದ್ದಲ್ಲಿ ಜೈಲು ಶಿಕ್ಷೆ ಖಚಿತ ಎಂದು ತಿಳಿಸಲಾಗಿದೆ.
ಪಣಜಿ (ಜ.28): ಗೋವಾದಲ್ಲಿ ಪ್ರವಾಸಿಗರ ಖಾಸಗಿತನ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹೊಸ ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ. ಗೋವಾದ ಬೀಚ್‌ಗಳಲ್ಲಿ ಪ್ರವಾಸಿಗರ ಅನುಮತಿ ಇಲ್ಲದೆ ಯಾವುದೇ ಕಾರಣಕ್ಕೂ ಅವರ ಫೋಟೋಗಳನ್ನು ತೆಗೆಯುವಂತಿಲ್ಲ. ಫೋಟೋ ತೆಗೆಯುವ ಮುನ್ನ ಅವರ ಅನುಮತಿ ಕಡ್ಡಾಯವಾಗಿರುತ್ತದೆ. ವಿಶೇಷವಾಗಿ ಅವರು ಬಿಸಿಲಿನಲ್ಲಿ ಮಲಗಿರುವಾಗ, ಸಮುದ್ರದಲ್ಲಿ ಮೋಜು ಮಾಡುತ್ತಿರುವಾಗ ಫೋಟೋಗಳನ್ನು ಅವರ ಅನುಮತಿ ಇಲ್ಲದೆ ತೆಗೆಯುವಂತಿಲ್ಲ. ಏಕವ್ಯಕ್ತಿ ಫೋಟೋ ತೆಗೆಯುವಾಗಲೂ ಅವರ ಅನುಮತಿ ಬೇಕಾಗಿರುತ್ತದೆ. ಪ್ರವಾಸಿಗರ ಖಾಸಗಿತನವನ್ನು ಗೌರವಿಸುವ ಸಲುವಾಗಿ ಈ ನಿಯಮಗಳನ್ನು ಮಾಡಲಾಗಿದೆ ಎಂದು ಗೋವಾ ಸರ್ಕಾರ ತಿಳಿಸಿದೆ. ಅದರೊಂದಿಗೆ ಗೋವಾದಲ್ಲಿ ತೆರೆದ ಸ್ಥಳದಲ್ಲಿ ಅಡುಗೆ ಮಾಡುವುದನ್ನೂ ಸಹ ನಿಷೇಧಿಸಲಾಗಿದೆ. ಹಾಗೆ ಮಾಡಿದರೆ 50 ಸಾವಿರ ರೂಪಾಯಿಯವರೆಗೆ ದಂಡ ವಿಧಿಸುವ ಅವಕಾಶವಿದೆ. ಇನ್ನು ಬೀಚ್‌ನಲ್ಲಿ ಕುಳಿತು ಮದ್ಯ ಸೇವಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ. ಅಪಘಾತಗಳನ್ನು ತಡೆಯಲು ಬಂಡೆಗಳು ಮತ್ತು ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳದಂತೆ ಸರ್ಕಾರ ಹೇಳಿದೆ.
ಇದಲ್ಲದೇ ಗೋವಾದ ಐತಿಹಾಸಿಕ ಕಟ್ಟಡಗಳಿಗೆ ಹಾನಿ ಮಾಡದಂತೆ ಪ್ರವಾಸಿಗರಿಗೆ ಮನವಿ ಮಾಡಲಾಗಿದೆ. ಅಧಿಕ ಶುಲ್ಕ ವಿಧಿಸುವುದನ್ನು ತಪ್ಪಿಸಲು, ಮೀಟರ್ ಇರುವ ಟ್ಯಾಕ್ಸಿಗಳಲ್ಲೇ ಬಳಸಿ, ಅದರಲ್ಲಿ ನಮೂದಾದ ದರವನ್ನೇ ಪ್ರವಾಸಿಗರು ಪಾವತಿ ಮಾಡಬೇಕು ಎಂದು ಸೂಚಿಸಲಾಗಿದೆ. ಮಾರ್ಗಸೂಚಿ ಪ್ರಕಾರ, ಗೋವಾಗೆ ಬರುವ ಪ್ರವಾಸಿಗರು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಲಾದ ಹೋಟೆಲ್‌ಗಳಲ್ಲಿಯೇ ಉಳಿಯಲು ಸೂಚಿಸಲಾಗಿದೆ.
ಕದ್ದ ಕಾರು-ಬೈಕ್ ಖರೀದಿ ಮಾಡ್ಬೇಡಿ: ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ, ಕಳ್ಳರು ಕದ್ದ ಬೈಕ್ ಅಥವಾ ಕಾರನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಪ್ರಯತ್ನಿಸುತ್ತಾರೆ. ಹೊಸ ಮಾರ್ಗಸೂಚಿಯಲ್ಲಿ ಪ್ರವಾಸಿಗರು ಇಂತಹವರಿಂದ ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ. ಪ್ರವಾಸಿಗರಿಗೆ ಈ ಮಾರ್ಗಸೂಚಿಗಳನ್ನು ಗೋವಾ ಪ್ರವಾಸಿ ಇಲಾಖೆಯು ಜನವರಿ 26 ರಂದು ಹೊರಡಿಸಿದೆ. ಪ್ರವಾಸಿಗರ ಗೌಪ್ಯತೆ, ಅವರ ಸುರಕ್ಷತೆ ಮತ್ತು ವಂಚನೆಯನ್ನು ತಪ್ಪಿಸುವುದು ಇದರ ಉದ್ದೇಶವಾಗಿದೆ.
ಗೋವಾದಲ್ಲಿ ಶಾರುಖ್ ಪುತ್ರನ ಜೊತೆ ಮಾಡ್ತಿದ್ದೇನು? ಪಾಕ್ ನಟಿ ಬಿಚ್ಚಿಟ್ಟ ಸತ್ಯ...
ಭಾರತದ ಜನಪ್ರಿಯ ಪ್ರವಾಸಿ ಸ್ಥಳ ಗೋವಾ ಈಗ ಎರಡು ವಿಮಾನ ನಿಲ್ದಾಣಗಳನ್ನು ಹೊಂದಿದೆ. ದಕ್ಷಿಣ ಗೋವಾದಲ್ಲಿ ಈಗಾಗಲೇ ನಿರ್ಮಿಸಲಾದ ದಾಬೋಲಿಮ್ ವಿಮಾನ ನಿಲ್ದಾಣದ ನಂತರ, ಉತ್ತರ ಗೋವಾದ ಮೊಪಾ ವಿಮಾನ ನಿಲ್ದಾಣ ಕೂಡ ಕಳೆದ ತಿಂಗಳು ಲೋಕಾರ್ಪಣೆಯಾಗಿದೆ. ಹೊಸ ವಿಮಾನ ನಿಲ್ದಾಣದಿಂದ ಗೋವಾದ ಸಂಪರ್ಕ ಹೆಚ್ಚಲಿದ್ದು, ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ಉತ್ತರ ಗೋವಾಕ್ಕೆ ಬರಲು ಬಯಸುವ ಪ್ರವಾಸಿಗರು ಈಗ ಈ ವಿಮಾನ ನಿಲ್ದಾಣದಿಂದ ನೇರವಾಗಿ ತಲುಪಲು ಸಾಧ್ಯವಾಗುತ್ತದೆ. A380 ನಂತಹ ಜಂಬೋ ವಿಮಾನಗಳು ಮೋಪಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಮತ್ತು ಲ್ಯಾಂಡ್ ಆಗಬಹುದು. ಈ ವಿಮಾನ ನಿಲ್ದಾಣದಲ್ಲಿ ರಾತ್ರಿ ಪಾರ್ಕಿಂಗ್ ಸೌಲಭ್ಯವೂ ಲಭ್ಯವಿರುತ್ತದೆ. ಅದೇ ಸಮಯದಲ್ಲಿ, ಕ್ಯಾಸಿನೊ, ಇಕೋ ರೆಸಾರ್ಟ್ ಮತ್ತು ಶಾಪಿಂಗ್ ಪ್ಲಾಜಾವನ್ನು ಇಲ್ಲಿ ನಿರ್ಮಿಸಲಾಗಿದೆ. ಪ್ರಸ್ತುತ ಮೋಪಾ ವಿಮಾನ ನಿಲ್ದಾಣವು ಪ್ರತಿ ವರ್ಷ 44 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಹೊಂದಿದೆ, ಇದನ್ನು 33 ಮಿಲಿಯನ್‌ಗೆ ಹೆಚ್ಚಿಸಬಹುದು.
ಗೋವಾದಲ್ಲಿ ರೊಮ್ಯಾಂಟಿಕ್ ಪ್ರೀ-ವೆಡ್ಡಿಂಗ್ ಶೂಟ್ ಮಾಡಿಸಿದ ಕಿರುತೆರೆ ಜೋಡಿ ಪ್ರಿಯಾ- ಸಿದ್ದು
ಗೋವಾದ ಮೊಪಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂಗಳು ಉದ್ಘಾಟಿಸಿದರು. ದಾಬೋಲಿಮ್ ನಂತರ ಗೋವಾದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದಾಗಿದೆ. 2016 ರ ನವೆಂಬರ್‌ನಲ್ಲಿ ಪ್ರಧಾನಿ ಮೋದಿ ಅವರೇ ಶಂಕುಸ್ಥಾಪನೆ ಮಾಡಿದರು. ಈ ವಿಮಾನ ನಿಲ್ದಾಣಕ್ಕೆ ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಮೋದಿ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ದಿವಂಗತ ಮನೋಹರ್ ಪರಿಕ್ಕರ್ ಅವರ ಹೆಸರನ್ನು ಇಡಲಾಗಿದೆ. 2 ಸಾವಿರದ 870 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ವಿಮಾನ ನಿಲ್ದಾಣಕ್ಕೆ ಪ್ರತಿ ವರ್ಷ ಸುಮಾರು 40 ಲಕ್ಷ ಪ್ರಯಾಣಿಕರು ಭೇಟಿ ನೀಡುವ ನಿರೀಕ್ಷೆಯಿದೆ.