
ಉತ್ತರ ಪ್ರದೇಶ(ಜೂ.10): ಮಹಿಳೆಯರ ರಕ್ಷಣೆ, ಸಬಲೀಕರಣ, ಸಮಾನತೆಗೆ ಒತ್ತು ನೀಡಬೇಕಿದ್ದ ಮಹಿಳಾ ಆಯೋಗವೇ ಮಹಿಳೆಯರ ವಿರುದ್ಧ ಹೇಳಿಕೆ ನೀಡೋ ಮೂಲಕ ವಿವಾದಕ್ಕೆ ಕಾರಣವಾಗಿದೆ. ಮಹಿಳೆಯರ ಮೇಲಿನ ಅಪರಾಧ ಕಡಿಮೆ ಮಾಡಲು ಹುಡುಗಿಯರಿಗೆ ಮೊಬೈಲ್ ನೀಡಬಾರದು ಎಂದು ಉತ್ತರ ಪ್ರದೇಶದ ಮಹಿಳಾ ಆಯೋಗದ ಸದಸ್ಯೆ ಮೀನಾ ಕುಮಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
'ಬೇಷರತ್ ಕ್ಷಮೆ ಕೇಳಬೇಕು' ಚೇತನ್ ವಿರುದ್ಧ ಬ್ರಾಹ್ಮಣ ಮಂಡಳಿ ದೂರು
ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಮಹಿಳೆಯರ ಮೇಲಿನ ಅಪರಾಧ ಹೆಚ್ಚಲು ಹುಡುಗಿಯರ ಕೈಯಲ್ಲಿರುವ ಮೊಬೈಲ್ ಫೋನ್ ಕಾರಣ ಎಂದಿದ್ದಾರೆ. ಫೋನ್‌ನಲ್ಲೇ ಮಾತನಾಡುತ್ತಾ, ಹುಡುಗರ ಜೊತೆ ಓಡಿ ಹೋಗುತ್ತಾರೆ. ಮೋಸದ ಬಲೆಗೆ ಸಿಲುಕುತ್ತಾರೆ ಎಂದಿದ್ದಾರೆ.
ಹೆಣ್ಣು ಮಕ್ಕಳಿಗೆ ಮೊಬೈಲ್ ಫೋನ್ ಕೊಡಬಾರದು ಎಂದು ಪೋಷಕರಲ್ಲಿ ಮೀನಾ ಕುಮಾರಿ ಮನವಿ ಮಾಡಿದ್ದಾರೆ. ಒಂದು ವೇಳೆ ಅನಿವಾರ್ಯವಾಗಿ ಕೊಡಬೇಕಾದ್ದಲ್ಲಿ, ಪರಿಶೀಲಿಸುತ್ತಲೇ ಇರಬೇಕು. ಕೊಂಚ ನಿರ್ಲಕ್ಷ್ಯ ವಹಿಸಿದರೂ ದೊಡ್ಡ ಅನಾಹುತವಾಗಲಿದೆ ಎಂದಿದ್ದಾರೆ.
ನೇತಾಜಿ ಭಾವಚಿತ್ರ ವಿವಾದ; ಅಸಲಿಯಲ್ಲ ಎಂದವರು ಟ್ವೀಟ್ ಡಿಲೀಟ್ ಮಾಡಿ ಸುಮ್ಮನಾದರು!.
ಪೋಷಕರು ಹೆಣ್ಣು ಮಕ್ಕಳು ಎಲ್ಲಿಗೆ ಹೋಗುತ್ತಾರೆ, ಏನು ಮಾಡುತ್ತಿದ್ದಾರೆ ಎಂಬುದನ್ನು ಪರಿಶೀಲಿಸಬೇಕು. ಅನುಮಾನ ಬಂದರೆ ಪರಾಮರ್ಶಿಸಬೇಕು ಎಂದು ಮೀನಾ ಕುಮಾರಿ ಹೇಳಿದ್ದಾರೆ. ಈ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಮೀನಾ ಕುಮಾರಿ ಸ್ಪಷ್ಟನೆ ನೀಡಿದ್ದಾರೆ.
ಹೇಳಿಕೆ ತಿರುಚಲಾಗಿದೆ. ಪೋಷಕರು ಮೊಬೈಲ್ ಫೋನ್ ನಿಯಮಿತವಾಗಿ ಪರಿಶೀಲನೆ ಮಾಡಬೇಕು ಎಂದಿದ್ದೇನೆ. ಆದರೆ ಹುಡುಗಿಯರು ಓಡಿ ಹೋಗುತ್ತಾರೆ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ