ಅಮ್ಮ ದೀಪಾವಳಿಗೆ ಮನೆ ಕ್ಲೀನ್ ಮಾಡು ಎಂದಿದ್ದಕ್ಕೆ ಮೊಬೈಲ್ ಟವರ್ ಏರಿದ ಬಾಲಕಿ

Published : Oct 19, 2025, 11:17 AM IST
Girl Climbs mobile tower

ಸಾರಾಂಶ

Girl Climbs Mobile Tower: ಮನೆಯಲ್ಲಿ ದೀಪಾವಳಿಗೆ ಮನೆ ಕ್ಲೀನ್ ಮಾಡು ಎಂದಿದ್ದಕ್ಕೆ ಮಗಳೊಬ್ಬಳು ಸಿಟ್ಟಿಗೆದ್ದು ಮೊಬೈಲ್ ಟವರ್ ಏರಿದಂತಹ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮನೆ ಕ್ಲೀನ್ ಮಾಡು ಅಂದ್ರೆ ಸಿಟ್ಟಿಗೆದ್ದು ಮೊಬೈಲ್ ಟವರ್ ಏರಿದ ಯುವತಿ

ದೀಪಾವಳಿ ಬಂತು ಅಂದ್ರೆ ಪ್ರತಿ ಭಾರತೀಯರ ಮನೆಯಲ್ಲಿ ಸ್ವಚ್ಛತಾ ಕಾರ್ಯ ಆರಂಭವಾಗುತ್ತದೆ. ಮನೆಯಲ್ಲಿರುವ ಮೂಲೆ ಮೂಲೆಯನ್ನು ಉಜ್ಜಿ ತೊಳೆದು ಕ್ಲೀನ್ ಮಾಡಲಾಗುತ್ತದೆ. ಮನೆ ಮಂದಿಯೆಲ್ಲಾ ವಿಶೇಷವಾಗಿ ಮನೆಯ ಹೆಣ್ಣು ಮಕ್ಕಳು ರೂಢಿಯಂತೆ ಈ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಆದರೆ ಇಲ್ಲೊಂದು ಕಡೆ ಮನೆ ಕ್ಲೀನ್ ಮಾಡು ಎಂದು ಮನೆಯ ಹೆಣ್ಣು ಮಗಳಿಗೆ ಹೇಳಿದ್ದಕ್ಕೆ ಆಕೆ ಕೋಪದಿಂದ ಮೊಬೈಲ್ ಟವರ್ ಏರಿ ಹೈಡ್ರಾಮಾ ಸೃಷ್ಟಿಸಿದ್ದಾಳೆ. ಉತ್ತರ ಪ್ರದೇಶ ಮಿರ್ಜಾಪುರದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮಗನ ಬದಲು ಮಗಳಿಗೆ ಕೆಲಸ ಹೇಳಿದ ಅಮ್ಮ

ಭಾರತದಲ್ಲಿ ಹೆಚ್ಚಾಗಿ ರೂಢಿಯಲ್ಲಿರುವುದು, ಮನೆಯ ಹೊರಗಿನ ಕೆಲಸ ಹುಡುಗರು ಅಂದರೆ ಮನೆಯ ಗಂಡು ಮಕ್ಕಳು ಮಾಡಿದ್ರೆ ಒಳಗಿನ ಕೆಲಸವನ್ನು ಹೆಣ್ಣು ಮಕ್ಕಳು ಮಾಡಬೇಕು ಎಂಬುದು. ಅದೇ ರೀತಿ ಇಲ್ಲಿ ಮನೆಯನ್ನು ಸ್ವಚ್ಛ ಮಾಡುವುದಕ್ಕೆ ಅಮ್ಮ ಮಗಳಿಗೆ ಹೇಳಿದ್ದಾಳೆ. ಆದರೆ ತನ್ನ ಸಹೋದರನ ಬದಲು ನನಗೆ ಮಾತ್ರ ಅಮ್ಮ ಮನೆ ಕೆಲಸ ಹೇಳ್ತಿದ್ದಾಳೆ ಎಂದು ಅಸಮಾಧಾನಗೊಂಡ ಮಗಳು ಮೊಬೈಲ್ ಟವರ್ ಏರಿ ಸಾಯುವುದಾಗಿ ಬೆದರಿಕೆ ಹಾಕಿದ್ದಾಳೆ. ಅಮ್ಮನ ಮೇಲಿನ ಕೋಪವನ್ನು ಮಗಳು ಈ ರೀತಿ ತೀರಿಸಿಕೊಂಡಿದ್ದಾಳೆ. ಆದರೆ ಬಾಲಕಿಯ ಈ ಹೈಡ್ರಾಮಾದಿಂದ ಅಲ್ಲಿಆತಂಕದ ಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ಪೋಷಕರು ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಅಧಿಕಾರಿಗಳು ಕೂಡಲೇ ಮೊಬೈಲ್ ಟವರ್‌ನಿಂದ ಕೆಳಗಿಳಿಯುವಂತೆ ಯುವತಿಗೆ ಮನವಿ ಮಾಡಿದ್ದು, ನಂತರ ಆಕೆ ಕೆಳಗಿಳಿದಿದ್ದಾಳೆ. ಈಗ ಆಕೆ ಸುರಕ್ಷಿವಾಗಿದ್ದಾಳೆ ಎಂದು ವರದಿಯಾಗಿದೆ.

ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಟ್ವಿಟ್ಟರ್‌ನಲ್ಲಿ @gaurav1307kumar ಎಂಬ ಖಾತೆಯಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ವೀಡಿಯೋದಲ್ಲಿ ಮಿರ್ಜಾಪುರದಲ್ಲಿ, ದೀಪಾವಳಿಯ ಸಮಯದಲ್ಲಿ ಮನೆ ಸ್ವಚ್ಛತೆ ಮಾಡುವಮತೆ ಯುವತಿಯೊಬ್ಬಳನ್ನು ಆಕೆಯ ತಾಯಿ ಗದರಿಸಿದ್ದಳು, ಮತ್ತು ಕೋಪದಲ್ಲಿ, ಯುವತಿ ಮೊಬೈಲ್ ಟವರ್ ಮೇಲೆ ಹತ್ತಿ ನಾಟಕ ಮಾಡಿದಳು ಎಂದು ವೀಡಿಯೋದಲ್ಲಿ ಬರೆಯಲಾಗಿದೆ. ಈ ಟ್ವಿಟ್‌ಗೆ ಮಿರ್ಜಾಪುರ ಪೊಲೀಸರು ಪ್ರತಿಕ್ರಿಯಿಸಿದ್ದು, ಯುವತಿ ಸುರಕ್ಷಿತವಾಗಿರುವುದಾಗಿ ಕಾಮೆಂಟ್ ಮಾಡಿದ್ದಾರೆ. ಮೇಲೆ ತಿಳಿಸಿದ ಪ್ರಕರಣದಲ್ಲಿ, ಕಚ್ವಾ ಪೊಲೀಸ್ ಠಾಣೆ ತಕ್ಷಣ ಕ್ರಮ ಕೈಗೊಂಡು, ಸ್ಥಳಕ್ಕೆ ತಲುಪಿ, ಬಾಲಕಿಗೆ ಸಲಹೆ ನೀಡಿ, ಅವಳನ್ನು ಸುರಕ್ಷಿತವಾಗಿ ಗೋಪುರದಿಂದ ಕೆಳಗೆ ಇಳಿಸಿ, ಆಕೆಯ ಕುಟುಂಬ ಸದಸ್ಯರಿಗೆ ಒಪ್ಪಿಸಿತು ಎಂದು ಮಿರ್ಜಾಪುರ ಪೊಲೀಸರು ತಿಳಿಸಿದ್ದಾರೆ.

ಅದೇನೆ ಇರಲಿ ದೀಪಾವಳಿ ಸಮಯದಲ್ಲಿ ಮನೆ ಸ್ವಚ್ಛ ಮಾಡುವುದು ಒಂದು ದೊಡ್ಡ ಟಾಸ್ಕ್‌. ಮನೆ ಮಂದಿಯೆಲ್ಲಾ ಕೆಲಸಕ್ಕೆ ಸಹಾಯ ಮಾಡಿದರೆ ಹೆಣ್ಣು ಮಕ್ಕಳ ಕೆಲಸ ಸ್ವಲ್ಪ ಸಲೀಸಾಗುತ್ತದೆ. ಆದರೆ ಗಂಡು ಊರು ತಿರುಗುವುದು ಹೆಣ್ಣು ಮಗಳೊಬ್ಬಳೇ ಮನೆ ಸ್ವಚ್ಚ ಮಾಡುವುದು ಎಂದರೆ ಅದು ಸುಲಭದ ಕೆಲಸವಂತೂ ಅಲ್ಲ, ಬಹುಶಃ ಈ ಕಾರಣದಿಂದಲೇ ಈ ಬಾಲಕಿ ಇಲ್ಲಿ ಟವರ್ ಏರಿದ್ದಾಳೆ. ಕೆಲವು ಮನೆಗಳಲ್ಲಿ ಗಂಡು ಮಕ್ಕಳನ್ನು ರಾಜರಂತೆ ಹೆಣ್ಣು ಮಕ್ಕಳನ್ನೂ ಸೇವಕರಂತೆ ನೋಡುತ್ತಾರೆ. ಹೆಣ್ಣು ಮಕ್ಕಳು ಪ್ರಶ್ನಿಸಿದರೆ ನೀವು ಬೇರೆ ಮನೆಗೆ ಹೋಗುವವರು ಎಲ್ಲವನ್ನೂ ಕಲಿಯಬೇಕು ಎಂದು ಪೋಷಕರು ಹೇಳುತ್ತಾರೆ. ಬಹುಶಃ ಪೋಷಕರ ಈ ನೀತಿಯಿಂದ ಸಿಟ್ಟಿಗೆದ್ದು ಬಹುಶಃ ಬಾಲಕಿ ಟವರ್ ಏರಿರುವ ಸಾಧ್ಯತೆ ಇದೆ. ಆದರೆ ಈಗ ಕಾಲ ಬದಲಾಗಿದೆ. ಹೆಣ್ಣಿಗೆ ಮದುವೆಯೇ ಬದುಕಲ್ಲ, ಆಕೆ ಎಲ್ಲವನ್ನು ನಿಭಾಯಿಸುವ ಸಾಮರ್ಥ್ಯದ ಜೊತೆ ಯಾರ ಹಂಗಿಗೂ ಬೀಳದೇ ದುಡಿದು ಬದುಕುವ ಸಾಮರ್ಥ್ಯವನ್ನು ಗಳಿಸಿಕೊಳ್ಳುತ್ತಿದ್ದಾಳೆ. ಇಂತಹ ಸಂದರ್ಭದಲ್ಲಿ ಪೋಷಕರು ಕೂಡ ಹೆಣ್ಣು ಗಂಡು ಎಂಬ ಬೇಧ ತೋರದೇ ಇಬ್ಬರನ್ನು ಸಮಾನವಾಗಿ ಬೆಳೆಸಬೇಕಾಗಿದೆ. ಹೆಣ್ಣು ಮಕ್ಕಳಷ್ಟೇ ಗಂಡು ಮಕ್ಕಳಿಗೂ ಎಲ್ಲಾ ಕೆಲಸವನ್ನು ಕಲಿಸಿ ಕೊಡಬೇಕಿದೆ. ಅವರೂ ಕೂಡ ಯಾರನ್ನೂ ಅವಲಂಬಿಸದೇ ತಮ್ಮ ಕೆಲಸವನ್ನು ತಾವು ಮಾಡುವಂತಹ ಸಾಮರ್ಥ್ಯವನ್ನು ಹೊಂದಬೇಕಿದೆ. ಈ ಬಗ್ಗೆ ನಿಮಗೇನನಿಸುತ್ತಿದೆ ಕಾಮೆಂಟ್ ಮಾಡಿ.

ಇದನ್ನೂ ಓದಿ: ಗಂಡು ಮಕ್ಕಳೇ ಇಂತಹ ಸ್ನೇಹಿತರಿದ್ದರೆ ಬರ್ತ್‌ಡೇ ಆಗುತ್ತೆ ಡೆತ್‌ ಡೇ ಎಚ್ಚರ: ವೀಡಿಯೋ ವೈರಲ್

ಇದನ್ನೂ ಓದಿ: ಪೊಲೀಸರ ಮುಂದೆಯೇ ಪ್ರೊಫೆಸರ್‌ಗೆ ಕಪಾಳಮೋಕ್ಷ ಮಾಡಿದ ವಿದ್ಯಾರ್ಥಿನಿ

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..