ಬ್ಲಾಕ್ ಆದ ಟಾಯ್ಲೆಟ್‌ ಪೈಪ್‌ ಒಡೆದ ಮಾಲೀಕರಿಗೆ ಶಾಕ್: ಡಿಎನ್‌ಎ ಪರೀಕ್ಷೆಗೆ ಮುಂದಾದ ಪೊಲೀಸರು

By Anusha Kb  |  First Published Dec 9, 2024, 5:14 PM IST

ಇಲ್ಲೊಂದು ಕಡೆ ಟಾಯ್ಲೆಟ್ ಪೈಪ್ ಬ್ಲಾಕ್ ಆಗಿದೆ ಎಂದು ಪ್ಲಂಬರ್ ಕರೆಸಿ ಪೈಪ್‌ ಒಡೆದು ನೋಡಿದ ಮನೆಯ ಮಾಲೀಕನಿಗೆ ಆಘಾತ ಕಾದಿದೆ. ಹಾಗಿದ್ದರೆ ಒಳಗಿದ್ದಿದ್ದೇನು?


ಗಾಜಿಯಾಬಾದ್‌: ಟಾಯ್ಲೆಟ್‌ನ ಪೈಪ್‌ಗಳು ಆಗಾಗ ಬ್ಲಾಕ್ ಆಗುವುದು ಸಾಮಾನ್ಯ.  ಕೆಲವೊಮ್ಮೆ ಕಸ ಪ್ಲಾಸ್ಟಿಕ್ ತಲೆಕೂದಲು, ಸ್ಯಾನಿಟರಿ ಪ್ಯಾಡ್‌ ಮುಂತಾದವುಗಳನ್ನು ಕಮೋಡ್‌ಗೆ ಹಾಕಿ ಪ್ಲಶ್ ಮಾಡುವುದರಿಂದ ಟಾಯ್ಲೆಟ್ ಪೈಪ್‌ಗಳು ಬ್ಲಾಕಾಗಿ ಬಿಡುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಟಾಯ್ಲೆಟ್ ಪೈಪ್ ಬ್ಲಾಕ್ ಆಗಿದೆ ಎಂದು ಪೈಪ್‌ ಒಡೆದು ನೋಡಿದ ಮನೆಯ ಮಾಲೀಕನಿಗೆ ಆಘಾತ ಕಾದಿದೆ.  ಹಾಗಿದ್ದರೆ ಒಳಗಿದ್ದಿದ್ದೇನು?

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಹಲವು ಕುಟುಂಬಗಳು ವಾಸವಿದ್ದ ವಸತಿ ಕಟ್ಟಡವೊಂದರ ಟಾಯ್ಲೆಟ್‌ ಪೈಪ್ ಬ್ಲಾಕ್ ಆಗಿದೆ. ಟಾಯ್ಲೆಟ್ ಪೈಪ್ ಬ್ಲಾಕ್ ಆದ ಹಿನ್ನೆಲೆಯಲ್ಲಿ ಮನೆಯ ಮಾಲೀಕ ಪ್ಲಂಬರನ್ನು ಕರೆಸಿ ಪೈಪನ್ನು ಒಡೆಸಿದ್ದಾರೆ. ಈ ವೇಳೆ ಒಳಗಿದ್ದ ವಸ್ತುವನ್ನು ನೋಡಿ ಮಾಲೀಕರು ಶಾಕ್ ಆಗಿದ್ದು, ಕೂಡಲೇ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ.

Tap to resize

Latest Videos

ಒಳಗಿತ್ತು, 6 ತಿಂಗಳ ಭ್ರೂಣ

ಸ್ಟಕ್‌ ಆದ ಪೈಪ್‌ ಒಡೆದು ನೋಡಿದಾಗ ಒಳಗೆ ಆರು ತಿಂಗಳ ಭ್ರೂಣ ಇರುವುದು ಪತ್ತೆಯಾಗಿದೆ. ಗಾಬರಿಯಾದ ಪೊಲೀಸರು ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮಾಲೀಕರನ್ನೇ ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಮ್ಮ ಕಟ್ಟಡದಲ್ಲಿ 8 ಕುಟುಂಬಗಳು ಬಾಡಿಗೆಗೆ ಇರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಭಾನುವಾರ ಈ ಘಟನೆ ನಡೆದಿದ್ದು, ದೇವೇಂದ್ರ ಆಲಿಯಾಸ್ ದೇವ ಎಂಬುವವರಿಗೆ ಸೇರಿದ ಮನೆ ಇದಾಗಿತ್ತು. 

ಪೊಲೀಸರು ದೇವ್ ಕಟ್ಟಡದಲ್ಲಿ ವಾಸವಿದ್ದ ಎಲ್ಲಾ ಬಾಡಿಗೆದಾರರನ್ನು ವಿಚಾರಿಸಿದ್ದು, ಈ ಭ್ರೂಣ ಯಾರದ್ದು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ, ಹೀಗಾಗಿ ಪೊಲೀಸರು ಡಿಎನ್‌ಎ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ ಈ ಆರು ತಿಂಗಳ ಭ್ರೂಣವನ್ನು ತನಿಖೆಯ ಕಾರಣಕ್ಕೆ ಸಂರಕ್ಷಿಸಲಾಗಿದೆ ಎಂದು ಇಂದಿರಾಪುರಂ ಸಹಾಯಕ ಪೊಲೀಸ್ ಕಮೀಷನರ್ ಸ್ವತಂತ್ರ ಕುಮಾರ್ ಸಿಂಗ್ ಹೇಳಿದ್ದಾರೆ. 

click me!