ಮನೆಗೆಲಸದವಳು 8 ವರ್ಷಗಳಿಂದ ಕುಟುಂಬಕ್ಕೆ ತನ್ನ ಮೂತ್ರದಿಂದ ಚಪಾತಿ ಮಾಡಿಕೊಡುತ್ತಿದ್ದಳು. 8 ವರ್ಷದ ಬಳಿಕ ಮನೆಕೆಲಸದಾಕೆ ಹೊಲಸು ರಹಸ್ಯ ಬೆಳಕಿಗೆ ಬಂದಿದ್ದು ಹೇಗೆ ಗೊತ್ತಾ?
ಲಕ್ನೋ: ಮನೆಯಲ್ಲಿರೋ ಎಲ್ಲರೂ ಹೊರಗೆ ಹೋಗಿ ದುಡಿಯುತ್ತಿದ್ದರೆ ಮನೆ ಕೆಲಸಗಳಿಗೆ ಜನರನ್ನು ನೇಮಿಸಿಕೊಳ್ಳುತ್ತಾರೆ. ಕೆಲವರು ಅಡುಗೆ ಹೊರತುಪಡಿಸಿ ಎಲ್ಲಾ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ. ಒಂದಿಷ್ಟು ವರ್ಗದವರು ಅಡುಗೆಯನ್ನು ಸಹ ಕೆಲಸದವರಿಂದಲೇ ಮಾಡಿಸಿಕೊಳ್ಳುವುದುಂಟು. ಐಷಾರಾಮಿ ಜೀವನ ನಡೆಸೋ ಜನರಿಗೆ ಮನೆಯ ಎಲ್ಲಾ ಕೆಲಸಗಳಿಗೂ ಪ್ರತ್ಯೇಕ ಜನರನ್ನು ನೇಮಿಸಿಕೊಂಡಿರುತ್ತಾರೆ. ಇವರು ಮಾಡಿಕೊಡುವ ಆಹಾರವನ್ನೇ ಸೇವಿಸಿ ನಿದ್ದೆಗೆ ಜಾರುತ್ತಾರೆ. ಹಲವು ವರ್ಷಗಳವರೆಗೆ ಕೆಲಸ ಮಾಡುತ್ತಿದ್ದರೆ ಅವರು ಮಾಲೀಕರ ನಂಬಿಕೆಗೆ ಅರ್ಹರಾಗುತ್ತಾರೆ. ಈ ಮನೆಕೆಲಸದರಿಗೆ ಮನೆಯಲ್ಲಿರುವ ಸದಸ್ಯರು ಎಷ್ಟು ಗಂಟೆಗೆ ಏಳುತ್ತಾರೆ? ಮನೆಗೆ ಯಾವಾಗ ಬರ್ತಾರೆ? ಹೀಗೆ ಎಲ್ಲ ದಿನಚರಿ ಬಗ್ಗೆ ತಿಳಿದುಕೊಂಡಿರುತ್ತಾರೆ. ಮನೆಕೆಲಸದಾಕೆಯೊಬ್ಬಳು ಎಂಟು ವರ್ಷದಿಂದ ತಮ್ಮ ಮೂತ್ರದಲ್ಲಿ ಹಿಟ್ಟು ಕಲಿಸಿ ಚಪಾತಿ ಮಾಡಿ ಮನೆಯಲ್ಲಿರೋ ಸದಸ್ಯರಿಗೆ ತಿನ್ನಿಸಿದ್ದಾಳೆ. ಎಂಟು ವರ್ಷದ ಬಳಿಕ ಮಹಿಳೆಯ ಈ ಹೊಲಸು ಕೆಲಸ ಬೆಳಕಿಗೆ ಬಂದಿದ್ದು ಹೇಗೆ ಗೊತ್ತಾ?
ಉತ್ತರ ಪ್ರದೇಶದ ಗಾಜಿಯಾಬಾದ್ ನಗರದ ಕ್ರಾಸಿಂಗ್ ರಿಪಬ್ಲಿಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇಲ್ಲಿಯ ನಿವಾಸಿಯಾಗಿರುವ ಉದ್ಯಮಿಯೊಬ್ಬರು ಮನೆಕೆಲಸಕ್ಕಾಗಿ ಮಹಿಳೆಯನ್ನು ನೇಮಿಸಿಕೊಂಡಿದ್ದರು. ಮನೆಯರೆಲ್ಲಾ ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಹಿನ್ನೆಲೆ ಅನುಮಾನಗೊಂಡು ಅಡುಗೆಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು. ಈ ಕ್ಯಾಮೆರಾದಲ್ಲಿ ಮನೆಕೆಲಸದಾಕೆಯ ಹೊಲಸು ಕೆಲಸ ಬೆಳಕಿಗಗೆ ಬಂದಿದೆ.
undefined
ಮನೆಕೆಲಸದಾಕೆ ರೀನಾ ಅಡುಗೆ ಮಾಡುವಾಗ ತನ್ನ ಮೂತ್ರದಿಂದಲೇ ಹಿಟ್ಟು ಕಲಿಸುತ್ತಿರೋದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಉದ್ಯಮಿ ಕುಟುಂಬ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ರೀನಾ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕೊನೆಯವರೆಗೂ ಜೀವನದಲ್ಲಿ ಪ್ರೀತಿಯನ್ನು ಉಳಿಸಿಕೊಳ್ಳಲು ಹೀಗಿರಲಿ ಬೆಳಗಿನ ದಿನಚರಿ
ಉದ್ಯಮಿ ಕುಟುಂಬದ ಎಲ್ಲಾ ಸದಸ್ಯರು ಕೆಲವು ತಿಂಗಳಿನಿಂದ ಹೊಟ್ಟೆ ಮತ್ತು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ನಗರದ ಪ್ರಮುಖ ಆಸ್ಪತ್ರೆಗಳನ್ನು ಸುತ್ತಾಡಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಸೋಂಕು ಹೆಚ್ಚಾದ ನಂತರ ವೈದ್ಯರೊಬ್ಬರು ನಿಮ್ಮ ಆಹಾರದಲ್ಲಿ ಏನೋ ಸಮಸ್ಯೆ ಇರಬಹುದು, ಅದಕ್ಕೆ ಕುಟುಂಬದವರೆಲ್ಲರ ಲಿವರ್ ಹಾನಿಗೊಳಗಾಗಿದೆ ಎಂದು ಹೇಳಿದ್ದರು. ಆ ಸಲಹೆ ಬಳಿಕ ತಾವು ಸೇವಿಸುವ ಪ್ರತಿಯೊಂದು ಆಹಾರದ ಮೇಲೆ ಗಮನ ನೀಡಲು ಆರಂಭಿಸಿದರು. ಹಾಗೆ ರೀನಾ ಹೇಗೆ ಅಡುಗೆ ತಯಾರಿಸುತ್ತಾಳೆ ಎಂಬುದನ್ನು ತಿಳಿದುಕೊಳ್ಳಲು ಆಕೆಗೆ ಗೊತ್ತಾಗದಂತೆ ಕ್ಯಾಮೆರಾ ಅಳವಡಿಸಿದ್ದರು.
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ ಕಂಡು ಉದ್ಯಮಿ ಕುಟುಂಬ ಆಘಾತಕ್ಕೊಳಗಾಗಿತ್ತು. ಮೊದಲು ಒಂದು ಪಾತ್ರೆಯಲ್ಲಿ ತನ್ನ ಮೂತ್ರವನ್ನು ಸಂಗ್ರಹಿಸಿ ನಂತರ ಅದಕ್ಕೆ ನೀರು ಬೆರೆಸಿ ಹಿಟ್ಟು ಕಲಿಸಿ ರೊಟ್ಟಿ ಮಾಡುತ್ತಿದ್ದಳು. ಇದೇ ಚಪಾತಿಯನ್ನು ಆ ಕುಟುಂಬ ತಿನ್ನುತ್ತಿತ್ತು. ರೀನಾಳನ್ನು ಬಂಧಿಸಲಾಗಿದ್ದ, ಆಕೆ ಯಾಕೆ ಈ ರೀತಿ ಮಾಡುತ್ತಿದ್ದಳು ಎಂಬುವುದು ಮುಂದಿನ ವಿಚಾರಣೆಯಲ್ಲಿ ತಿಳಿದು ಬರಲಿದೆ ಎಂದು ಗಾಜಿಯಾಬಾದ್‌ನ ಡಿಸಿಪಿ ಸುರೇಂದ್ರ ನಾಥ್ ತಿವಾರಿ ಮಾಹಿತಿ ನೀಡಿದ್ದಾರೆ.
ವಧುವಿನ ಜೊತೆ ಕಾರ್‌ನಲ್ಲಿ ಶುರು ಹಚ್ಕೊಂಡು ವರ; ಮನೆ ತಲುಪೋವರೆಗಾದ್ರೂ ವೇಟ್ ಮಾಡು ಗುರು ಎಂದ ನೆಟ್ಟಿಗರು