ಆಯಸ್ಸು ಗಟ್ಟಿ ಇದ್ರೆ ಏನೆಲ್ಲಾ ಪವಾಡ ನಡೆಯಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದೆ ಸಾವಿನ ದವಡೆಯಿಂದ ಮಹಿಳೆ ಜಸ್ಟ್ ಮಿಸ್ ಆಗಿರೋ ಈ ವಿಡಿಯೋ
ಆಯಸ್ಸು ಗಟ್ಟಿ ಇದ್ರೆ ಏನಾದ್ರೂ ಪವಾಡ ನಡೆಯತ್ತೆ, ಆಯಸ್ಸು ಮುಗಿದಿದ್ರೆ ಏನೇ ಮಾಡಿದ್ರೂ ಜೀವ ಉಳಿಸಲು ಸಾಧ್ಯವಿಲ್ಲ ಎನ್ನುವ ಮಾತು ಹಲವಾರು ಬಾರಿ ಸಾಬೀತು ಆಗುತ್ತಲೇ ಇರುತ್ತದೆ. ತುಂಬಾ ಚೆನ್ನಾಗಿರೋ ವ್ಯಕ್ತಿ, ಜೀವನ ಪೂರ್ತಿ ಕಾಯಿಲೆಗಳಿಗೆ ತುತ್ತಾಗದೇ ಇರುವಾತ ದಿಢೀರ್ ಎಂದು ಸಾವನ್ನಪ್ಪುವ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ, ಆಯಸ್ಸು ಮುಗಿದರೆ ಹೀಗೆಲ್ಲಾ ಆಗುತ್ತದೆ. ಅದೇ ಇನ್ನೊಂದೆಡೆ, ಆಯಸ್ಸು ಗಟ್ಟಿಯಿದ್ದರೆ ಭಯಾತಿಭಯಂಕರ ಘಟನೆ ನಡೆದರೂ ಕೂದಲೆಳೆ ಅಂತರದಲ್ಲಿ ಪವಾಡಸದೃಶವಾಗಿ ಬದುಕುವ ಘಟನೆಗಳೂ ನಡೆಯುತ್ತವೆ. ಇದೀಗ ಮಹಿಳೆಯೊಬ್ಬರು ಪ್ರಾಣಾಪಾಯದಿಂದ ಜಸ್ಟ್ ಮಿಸ್ ಆಗಿರೋ ಕುತೂಹಲದ ಘಟನೆಯೊಂದು ನಡೆದಿದ್ದು, ಅದರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಘಟನೆ ಸೂರತ್ನಲ್ಲಿ ನಡೆದಿದೆ. ಮಹಿಳೆಯೊಬ್ಬರು ಹಣ್ಣನ್ನು ತಿನ್ನುತ್ತಾ ಬರುವುದನ್ನು ವಿಡಿಯೋದಲ್ಲಿ ನೋಡಬಹುದು. ಇದ್ದಕ್ಕಿದ್ದಂತೆಯೇ ಅವರ ಮೈಮೇಲೆ ಖಾಲಿಯಾಗಿರುವ ವಾಟರ್ಟ್ಯಾಂಕ್ ಬಿದ್ದಿದೆ. ಆದರೆ ಅಚ್ಚರಿ ಎನ್ನಬೇಕೋ, ಪವಾಡ ಎನ್ನಬೇಕೋ, ದೈವಲೀಲೆ ಎನ್ನಬೇಕೋ... ಒಟ್ಟಿನಲ್ಲಿ ಆ ವಾಟರ್ಟ್ಯಾಂಕ್ ಯಾವ ರೀತಿ ಬಿದ್ದಿದೆ ಎಂದರೆ ಇದು ಯಾವುದೋ ಶೂಟಿಂಗ್ ದೃಶ್ಯವಿರಬೇಕು ಎನ್ನಿಸದೇ ಇರಲಾರದು. ಮಹಿಳೆ ಆ ವಾಟರ್ಟ್ಯಾಕ್ ಒಳಗೆ ಇರುವಂತೆ ಅದು ಬಿದ್ದಿದೆ. ಅಂದರೆ ವಾಟರ್ಟ್ಯಾಂಕ್ ಮಹಿಳೆಯ ಸುತ್ತಲೂ ಬಿದ್ದಿರುವ ಕಾರಣ, ಆ ಟ್ಯಾಂಕ್ ಒಳಗೆ ಮಹಿಳೆ ಹೊಕ್ಕಿದ್ದಾಳೆ. ಒಂದು ಹೆಜ್ಜೆ ಆಚೀಚೆ ಆಗಿದ್ದರೂ ಬಹುಶಃ ಮಹಿಳೆಯ ಜೀವಕ್ಕೆ ಅದು ಕುತ್ತು ತರುವಂತಿತ್ತು.
undefined
ನಿದ್ದೆಯಲ್ಲಿರುವಾಗ ಕನಸಿನ ಮೂಲಕ ಇಬ್ಬರು ಮಾತಾಡ್ಬೋದು! ವಿಜ್ಞಾನಿಗಳಿಂದ ಕುತೂಹಲದ ಸಂಶೋಧನೆ
ಟ್ಯಾಂಕ್ ಬಿದ್ದ ರಭಸದ ಶಬ್ದಕ್ಕೆ ಎಲ್ಲರೂ ಓಡೋಡಿ ಬಂದಿದ್ದಾರೆ. ಏನಾಯಿತು ಎಂದು ಯಾರಿಗೂ ತಿಳಿಯದ ರೀತಿಯಲ್ಲಿ ಮಹಿಳೆ ಅದರ ಒಳಗೆ ಸಿಲುಕಿದ್ದಾರೆ. ಕೊನೆಗೆ ಎಲ್ಲರೂ ಟ್ಯಾಂಕ್ ಎಲ್ಲಿಂದ ಬಿತ್ತು ಎಂದು ನೋಡಿದ್ದಾರೆ. ಮಹಿಳೆ ಕೂಡ ಯಾವುದೇ ಹಾನಿಗೆ ಒಳಗಾಗದೇ ಚೆನ್ನಾಗಿ ಇರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹಲವರು ದೇವರು ದೊಡ್ಡವನು ಎಂದಿದ್ದರೆ, ಮತ್ತೆ ಕೆಲವರು ಇದು ಮಹಿಳೆ ತಿನ್ನುತ್ತಿರುವ ಆ್ಯಪ್ಪಲ್ ಪ್ರಭಾವ ಎಂದು ತಮಾಷೆ ಮಾಡಿದ್ದಾರೆ. ಮೈಮೇಲೆ ಟ್ಯಾಂಕ್ ಬಿದ್ದರೂ ಆಂಟಿ ಆ್ಯಪ್ಪಲ್ ತಿನ್ನುತ್ತಲೇ ಇದ್ದಾರೆ ಎಂದು ಮತ್ತೆ ಕೆಲವರು ಕಾಲೆಳೆಯುತ್ತಿದ್ದಾರೆ. ಮೈಮೇಲೆ ಇಂಥ ಟ್ಯಾಂಕ್ ಬಿದ್ದರೂ ಆರಾಮಾಗಿ ಅದರ ಒಳಗಿನಿಂದ ಎದ್ದು ಬಂದು ಸಮಚಿತ್ತ ಕಾಯ್ದುಕೊಂಡ ಮಹಿಳೆಯನ್ನು ಕೆಲವರು ಶ್ಲಾಘಿಸಿದರೆ, ಈ ಆಂಟಿಗೆ ತಾನು ಬಚಾವಾದೆ ಎನ್ನುವ ಖುಷಿ ಪಡುವ ಬದಲು ಆಗಲೂ ಕಾಲುಕೆರೆದು ಜಗಳಕ್ಕೆ ಹೋಗಿದ್ದಾಳೆ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ.