ವಧು ಕಣ್ಣೀರಿಟ್ಟು ಹೇಳಿದ್ದನ್ನು ನೋಡಿ ವರ ಶಾಕ್; ಇಲ್ಲೇ ಹಿಂಗೆ, ಮುಂದೆ ಹೆಂಗೆ ಎಂದ ನೆಟ್ಟಿಗರು

By Mahmad Rafik  |  First Published Dec 31, 2024, 12:28 PM IST

ಗಂಡನ ಮನೆಗೆ ಹೋಗುವಾಗ ವಧು ಕಣ್ಣೀರಿಟ್ಟಿದ್ದಾಳೆ. ಆದರೆ, ಆಕೆ ಕಣ್ಣೀರು ಹಾಕಲು ಹೇಳಿದ ಕಾರಣ ನೋಡಿ ವರ ಸೇರಿದಂತೆ ಎಲ್ಲರೂ ಶಾಕ್ ಆಗಿದ್ದಾರೆ. ವಧುವಿನ ಮಾತು ಕೇಳಿ ತಾಯಿ ನಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.


ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ಮದುವೆಗೆ ಸಂಬಂಧಿಸಿದ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿರುತ್ತವೆ. ಮದುವೆ ಶಾಸ್ತ್ರ ಸೇರಿದಂತೆ ಬೇರೆ ಬೇರೆ ರೀತಿಯ ವಿಡಿಯೋಗಳನ್ನು ನೀವೆಲ್ಲರೂ ನೋಡಿರುತ್ತೀರಿ. ಮದುವೆ ಅನ್ನೋದು ಸಂಭ್ರಮದ ಕಾರ್ಯಕ್ರಮ. ಆದರೆ ವಧುವಿನ ಬೀಳ್ಕೊಡುಗೆ ಸಂದರ್ಭದಲ್ಲಿ ವಧುವಿನ ಜೊತೆ ಆಕೆಯ ಕುಟುಂಬದ ಎಲ್ಲರೂ ಕಣ್ಣೀರು ಹಾಕುತ್ತಾರೆ. ಹುಟ್ಟಿ ಬೆಳೆದ ಮನೆ ಮತ್ತು ಊರನ್ನು ಬಿಟ್ಟು ಹೋಗಬೇಕು ಎಂಬ ದುಃಖದಿಂದ ವಧು ಕಣ್ಣೀರು ಹಾಕುತ್ತಾಳೆ. ಆದ್ರೆ ಕಳೆದ ನಾಲ್ಕೈದು ವರ್ಷಗಳಲ್ಲಿ ವಧು ಕಣ್ಣೀರು ಹಾಕುವ ಸನ್ನಿವೇಶಗಳು ಕಡಿಮೆ ಆಗುತ್ತಿವೆ. ಸಂತೋಷದಿಂದಲೇ ತವರಿನಿಂದ ಗಂಡನ ಮನೆಗೆ ಯುವತಿಯರು ಹೋಗುತ್ತಾರೆ. 

ಇದೀಗ ಸಾಮಾಜಿಕ ಜಾಲತಾಣದಲ್ಲೊಂದು ವಿಡಿಯೋ ವೈರಲ್ ಆಗುತ್ತಿದೆ. ಇಲ್ಲಿ ವಧು ಗಂಡನ ಮನೆಗೆ ಹೋಗುವಾಗ ಕಣ್ಣೀರು ಹಾಕುತ್ತಿದ್ದಾಳೆ. ಆದ್ರೆ ಆಕೆ ತನ್ನ ಕಣ್ಣೀರಿಗೆ  ಹೇಳುತ್ತಿರುವ ಕಾರಣ ನೋಡಿ ವರ ಸೇರಿದಂತೆ ಎಲ್ಲರೂ ಆಶ್ವರ್ಯ ವ್ಯಕ್ತಪಡಿಸಿದ್ದಾರೆ. ವಧುವಿನ ಮಾತು ಕೇಳಿ ಆಕೆಯ ತಾಯಿ ನಗುತ್ತಿರೋದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ನೋಡಿದ ನೆಟ್ಟಿಗರು, ಇದು Gen-Z ವಧುವಿನ ಕಣ್ಣೀರಿನ ಕಥೆ ಎಂದು ಹಾಸ್ಯ ಮಾಡಿದ್ದಾರೆ. 

Tap to resize

Latest Videos

ವೈರಲ್ ವಿಡಿಯೋದಲ್ಲಿ ಏನಿದೆ? 
ಈ ವಿಡಿಯೋವನ್ನು Nikita Singhla ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದೆ. ಕಾರ್‌ನಲ್ಲಿ ಕುಳಿತ ವಧು, ಪೋಷಕರನ್ನು ನೋಡುತ್ತಾ ಕಣ್ಣೀರು ಹಾಕುತ್ತಿರುತ್ತಾಳೆ. ಅಲ್ಲಿ ನನ್ನಿಂದ ಬಟ್ಟೆ ಮತ್ತು ಪಾತ್ರೆಗಳನ್ನು ತೊಳೆಸಲಾಗುತ್ತದೆ. ಗಂಡನ ಮನೆಯಲ್ಲಿ ಹೇಗೆ ನಾನು ಚಿಕ್ಕ ಚಿಕ್ಕ ಬಟ್ಟೆಗಳನ್ನು ಧರಿಸಲಿ? ಹೇಗೆ ನಾನು ತಿರುಗಿ ಉತ್ತರ ಕೊಡಲಿ ಎಂದು ಹೇಳುತ್ತಾ ವಧು ಕಣ್ಣೀರು ಹಾಕುತ್ತಾಳೆ. ಇದಕ್ಕೆ ವಧುವಿನ ತಾಯಿ, ಇದು ಸಂಪ್ರದಾಯವಾಗಿದ್ದು, ಪಾಲಿಸಲೇಬೇಕು ಎಂದು  ಹೇಳುತ್ತಾರೆ. ವಿಡಿಯೋ ಕೊನೆಯಲ್ಲಿ, ವಧು ಬಡೋ-ಬಡಿ ಮತ್ತು ಕಚ್ಚ ಬದಮ್ ಹಾಡುತ್ತಾ ನಗುತ್ತಾಳೆ. ಜೆನ್-ಜಿ ವಧುವಿನ ಈ ತಮಾಷೆಯ ವೀಡಿಯೊವನ್ನು ನೆಟಿಜನ್‌ಗಳು ತುಂಬಾ ಇಷ್ಟಪಡುತ್ತಿದ್ದಾರೆ.

ಇದನ್ನೂ ಓದಿ: ಟೇಕಾಫ್ ಆಗ್ತಿದ್ದಂತೆ ಖಾಲಿಯಾಯ್ತು 1.8 ಲಕ್ಷ ಮೌಲ್ಯದ 15 ಲೀಟರ್ ಮದ್ಯ; ಪ್ರಯಾಣಿಕರ ವಿಲಕ್ಷಣ ವರ್ತನೆ ವಿಡಿಯೋ ವೈರಲ್

ವಧುವಿನ ಬೀಳ್ಕೊಡುಗೆಯ ತಮಾಷೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಕಮೆಂಟ್ ಸೆಕ್ಷನ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. 62 ಲಕ್ಷಕ್ಕೂ ಹೆಚ್ಚು ವ್ಯೂವ್ ಪಡೆದುಕೊಂಡಿರುವ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ಬಾರಿ ಶೇರ್ ಆಗಿದೆ. ವಧುವಿನ ಮಾತು ಕೇಳಿ ಆಕೆಯ ಕುಟುಂಬಕ್ಕೆ ಶಾಕ್ ಆಗಿರಬೇಕು.  ವಧು ರಾಕ್, ವರ ಶಾಕ್ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ನನಗೊಬ್ಬಳಿಗೆ ನಾಚಿಕೆ ಆಗ್ತಿದೆ? ಮದುವೆಯ ಮೊದಲ ದಿನದ ವಿಡಿಯೋ ಹಂಚಿಕೊಂಡ ದಂಪತಿ

click me!