2023-24ನೇ ಆರ್ಥಿಕ ವರ್ಷದಲ್ಲಿ 15,100 ಕೋಟಿ ರು. ವಿಮಾ ಕ್ಲೇಂ ತಿರಸ್ಕಾರ!

By Kannadaprabha News  |  First Published Dec 31, 2024, 10:53 AM IST

2023-24ರಲ್ಲಿ ಶೇ.71.29ರಷ್ಟು ವಿಮಾ ಕ್ಲೇಂಗಳು ಮಾತ್ರ ಸ್ವೀಕಾರವಾಗಿದ್ದು, ಶೇ.12.9ರಷ್ಟು ಕ್ಲೇಂಗಳು ತಿರಸ್ಕಾರವಾಗಿವೆ. 15,100 ಕೋಟಿ ರು. ಮೌಲ್ಯದ ಕ್ಲೇಂಗಳನ್ನು ಆರೋಗ್ಯ ವಿಮೆ ವಿತರಕರು ನಿರಾಕರಿಸಿದ್ದಾರೆ.


ನವದೆಹಲಿ : 2023-24ನೇ ಆರ್ಥಿಕ ವರ್ಷದಲ್ಲಿ ಶೇ.71.29ರಷ್ಟು ವಿಮಾ ಕ್ಲೇಂಗಳು ಮಾತ್ರ ಸ್ವೀಕಾರ ಆಗಿದ್ದು, ಶೇ.12.9ರಷ್ಟು ಕ್ಲೇಂಗಳು ತಿರಸ್ಕಾರ ಆಗಿವೆ ಎಂದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಬಹಿರಂಪಡಿಸಿದೆ.

ವರದಿಯ ಪ್ರಕಾರ, 2023-24ರಲ್ಲಿ ಬರೋಬ್ಬರಿ 15,100 ಕೋಟಿ ರು. ಮೌಲ್ಯದ ಕ್ಲೇಂಗಳನ್ನು ಆರೋಗ್ಯ ವಿಮೆ ವಿತರಕರು ನಿರಾಕರಿಸಿದ್ದಾರೆ. ಇದರ ಶೇಕಡಾವಾರು ಪ್ರಮಾಣ ಒಟ್ಟು ಕ್ಲೇಂಗಳ ಶೇ.12.9ರಷ್ಟು. ಇನ್ನು 2024ರ ಮಾರ್ಚ್‌ ವರೆಗೆ ಒಟ್ಟು 1.17 ಲಕ್ಷ ಕೋಟಿ ರು. ಮೊತ್ತದ ಕ್ಲೇಂಗಳ ಪೈಕಿ 83,493.17 ಕೋಟಿ ರು. ಪಾವತಿಸಲಾಗಿದೆ. ಇದರ ಶೇಕಡಾವಾರು ಪ್ರಮಾಣ ಶೇ.71.29 ಇದೆ. ಒಟ್ಟಾರೆ ತಲಾ 1 ಕ್ಲೇಮ್‌ನ ಸರಾಸರಿ ಮೊತ್ತ 31,086 ರು. ಆಗಿದೆ ಎಂದು ಹೇಳಿದೆ.

Tap to resize

Latest Videos

ಈವರೆಗೆ ಸೆಟಲ್‌ ಆಗಿರುವ ಕ್ಲೇಂಗಳ ಪೈಕಿ ಶೇ.72ರಷ್ಟನ್ನು ತೃತೀಯ ಪಕ್ಷದ (ಟಿಪಿಎ) ಮೂಲಕ ಹಾಗೂ ಉಳಿದವನ್ನು ಆಂತರಿಕವಾಗಿ ಸೆಟಲ್‌ ಮಾಡಲಾಗಿದೆ. ಇವುಗಳ ಪೈಕಿ ಶೇ.66.16ರಷ್ಟನ್ನು ನಗದುರಹಿತವಾಗಿ ಹಾಗೂ ಶೇ.39ರಷ್ಟನ್ನು ಮರುಪಾವತಿಯ ಮೂಲಕ ಪಾವತಿಸಲಾಗಿದೆ.

click me!