IAF Chopper Crash: ಹೇಗಾಯ್ತು ಹೆಲಿಕಾಪ್ಟರ್ ಪತನ? ಪ್ರತ್ಯಕ್ಷದರ್ಶಿಯಿಂದ ಶಾಕಿಂಗ್ ಹೇಳಿಕೆ!

Published : Dec 08, 2021, 05:22 PM ISTUpdated : Dec 08, 2021, 09:22 PM IST
IAF Chopper Crash: ಹೇಗಾಯ್ತು ಹೆಲಿಕಾಪ್ಟರ್ ಪತನ? ಪ್ರತ್ಯಕ್ಷದರ್ಶಿಯಿಂದ ಶಾಕಿಂಗ್ ಹೇಳಿಕೆ!

ಸಾರಾಂಶ

* ತಮಿಳುನಾಡಿನ ಕೂನೂರಿನಲ್ಲಿ ಸೇನೆಯ Mi-17V5 ಹೆಲಿಕಾಪ್ಟರ್ ಪತನ * ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಮಂದಿ ಮೃತ * ಹೆಲಿಕಾಪ್ಟರ್ ಪತನವಾಗಿದ್ದು ಹೇಗೆ? ಪ್ರತ್ಯಕ್ಷದರ್ಶಿ ಹೇಳಿದ್ದು ಹೀಗೆ

ವೆಲ್ಲಿಂಗ್ಟನ್(ಡಿ.08) ತಮಿಳುನಾಡಿನ ಕೂನೂರಿನಲ್ಲಿ ಸೇನೆಯ Mi-17V5 ಹೆಲಿಕಾಪ್ಟರ್ ಪತನ. ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 14 ಮಂದಿ ವಿಮಾನದಲ್ಲಿದ್ದರು. ಹೆಲಿಕಾಪ್ಟರ್ ಸೂಲೂರಿನ ಊಟಿ ಕಡೆಗೆ ಹೋಗುತ್ತಿತ್ತು. ನೀಲಗಿರಿ ಅರಣ್ಯದಲ್ಲಿ ಈ ಅವಘಡ ಸಂಭವಿಸಿದೆ. ಊಟಿ ಬಳಿಯ ವೆಲ್ಲಿಂಗ್ಟನ್ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿನಲ್ಲಿ ಉಪನ್ಯಾಸ ನೀಡಲು ಬಿಪಿನ್ ರಾವತ್ ತೆರಳುತ್ತಿದ್ದರು. ಹೆಲಿಕಾಪ್ಟರ್ ಸೂಲೂರು ವಾಯುನೆಲೆಯಿಂದ ವೆಲ್ಲಿಂಗ್ಟನ್‌ಗೆ ತೆರಳುತ್ತಿತ್ತು. ಮಧ್ಯಾಹ್ನ 12.20ಕ್ಕೆ ವಿಮಾನ ಪತನಗೊಂಡಿದೆ. ಲ್ಯಾಂಡಿಂಗ್ ಸ್ಥಳದಿಂದ ಕೇವಲ 10 ಕಿಮೀ ದೂರದಲ್ಲಿ ಅಪಘಾತ ಸಂಭವಿಸಿದೆ ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹೊರ ಬಂದಿರುವ ದೃಶ್ಯಗಳಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿರುವುದು ಕಂಡು ಬಂದಿದೆ.

ಬೆಡ್ಶೀಟ್ ಕಂಬಳಿಯನ್ನೇ ಸ್ಟ್ರೆಚರ್ ಮಾಡಿದ್ರು

ಮಾಧ್ಯಮ ವರದಿಗಳ ಪ್ರಕಾರ, ಅಪಘಾತದ ನಂತರ ಇಲ್ಲಿನ ಸ್ಥಳೀಯರು ಮೊಟ್ಟ ಮೊದಲು ಅಪಘಾತ ಸ್ಥಳಕ್ಕೆ ತಲುಪಿ, ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಅವರು ಹತ್ತಿರದ ಸ್ಥಳಗಳಿಂದ ಕಂಬಳಿಗಳು ಮತ್ತು ಬೆಡ್‌ಶೀಟ್‌ಗಳನ್ನು ಕೆಳಿ ಪಡೆದಿದ್ದಾರೆ. ಕೆಲವರು ಇದನ್ನು ಬಳಸಿ ವ್ಯಾಪಿಸುತ್ತಿದ್ದ ಬೆಂಕಿ ನಂದಿಸಲು ಯತ್ನಿಸಿದರೆ, ಇನ್ನು ಕೆಲವರು ಗಾಯಾಳುಗಳನ್ನು ರಕ್ಷಿಸಲು ಹೊದಿಕೆ ಮತ್ತು ಬೆಡ್‌ಶೀಟ್‌ಗಳಿಂದ ಸ್ಟ್ರೆಚರ್‌ಗಳನ್ನು ತಯಾರಿಸುತ್ತಿದ್ದರು. ಅದೇ ಸ್ಟ್ರೆಚರ್‌ನಲ್ಲಿ ಗಾಯಾಳುಗಳನ್ನು ಹೊರ ತೆಗೆದು ಆಸ್ಪತ್ರೆಯತ್ತ ಕರೆದೊಯ್ಯಲು ಸಹಾಯ ಮಾಡಿದ್ದಾರೆ. ಇನ್ನು ಕೆಲವರು ಮನೆಗಳಲ್ಲಿ ಬಳಸುವ ಬಕೆಟ್‌ಗಳು ಮತ್ತು ಪೈಪ್‌ಗಳಿಂದ ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದರು.

"

ಅಪಘಾತ ಸಂಭವಿಸಿದ ಸ್ಥಳದ ಸಮೀಪದಲ್ಲಿ ವಾಸಿಸುತ್ತಿದ್ದ ಕುಮಾರ್ ಎಂಬ ಯುವಕ ಯುವಕ ಹೆಲಿಕಾಪ್ಟರ್ ಪತನವಾಗುತ್ತಿರುವುದನ್ನು ಕಣ್ಣಾರೆ ನೋಡಿದ್ದಾನೆ. ದಿ ನ್ಯೂಸ್ ಮಿನಿಟ್ಸ್‌ನ ವರದಿಯ ಪ್ರಕಾರ, ನಂಜಪಂಚತಿರಂ ಪ್ರದೇಶದ ಕಟ್ಟೇರಿ ಪಾರ್ಕ್‌ನಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಅಲ್ಲದ್ದ ಪ್ರತ್ಯಕ್ಷದರ್ಶಿಯೊಬ್ಬರು ದೊಡ್ಡ ಶಬ್ದವನ್ನು ಕೇಳಿದ್ದಾರೆ ಮತ್ತು ಹೆಲಿಕಾಪ್ಟರ್ ಆಕಾಶದಿಂದ ಬಿದ್ದು ಉರಿಯುತ್ತಿರುವುದನ್ನು ಕಂಡಿದ್ದಾರೆ. ಇದಾದ ನಂತರ ಹೊತ್ತಿ ಉರಿಯುತ್ತಿದ್ದ ಹೆಲಿಕಾಪ್ಟರ್‌ನಿಂದ ಮೂರ್ನಾಲ್ಕು ಮಂದಿ ಕೆಳಗೆ ಬೀಳುತ್ತಿರುವುದನ್ನು ನೋಡಿದ್ದಾರೆ.

ಭಯಾನಕ ಶಬ್ಧ, ಬೆಂಕಿ ಜ್ವಾಲೆಯು ನನ್ನ ಮನೆಗಿಂತ ಎತ್ತರ ಇದ್ದವು

ಹೆಲಿಕಾಪ್ಟರ್ ಕೆಳಗಿಳಿಯುವುದನ್ನು ನಾನು ನೋಡಿದೆ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ಹೀಗಿರುವಾಗಲೇ ದೊಡ್ಡದಾದ ಭಯಾನಕ ಶಬ್ದ ಕೇಳಿಸಿತು. ಹೆಲಿಕಾಪ್ಟರ್ ಮರಕ್ಕೆ ಬಡಿದು ಬೆಂಕಿ ಹೊತ್ತಿಕೊಂಡಿತು. ಹೆಲಿಕಾಪ್ಟರ್ ನೆಲಕ್ಕೆ ಬೀಳುವ ಮೊದಲು ಸಮೀಪದ ದೊಡ್ಡ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿ ಕೃಷ್ಣಸ್ವಾಮಿ ಹೇಳಿದ್ದಾರೆ. ಅಪಘಾತ ನಡೆದ ಸ್ಥಳದಿಂದ ಸುಮಾರು 100 ಮೀಟರ್ ದೂರದಲ್ಲಿ ಅವರ ಮನೆ ಇದೆ ಎಂದು ಕೃಷ್ಣಸ್ವಾಮಿ ತಿಳಿಸಿದ್ದಾರೆ. ಮಧ್ಯಾಹ್ನ 12.20ರ ಸುಮಾರಿಗೆ ಅಪಘಾತ ಸಂಭವಿಸಿದೆ. ಮೆಟ್ಟುಪಾಳ್ಯಂ ಮತ್ತು ಕೂನೂರು ನಡುವಿನ ಘಾಟ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಓಡಿ ಹೋದಾಗ ಹೊಗೆಆವರಿಸಿತ್ತು ಎಂದು ಕೃಷ್ಣಸ್ವಾಮಿ ಹೇಳಿದರು. ಕೆಲವೇ ನಿಮಿಷಗಳಲ್ಲಿ ಬೆಂಕಿ ನನ್ನ ಮನೆಗಿಂತ ಹೆಚ್ಚಾಯಿತು. ಕುಮಾರ್ ಎಂಬ ಹುಡುಗ ಪೊಲೀಸ್ ಮತ್ತು ಅಗ್ನಿಶಾಮಕ ಅಧಿಕಾರಿಗಳನ್ನು ಕರೆಯಲು ಓಡಿಹೋದನು. ಯಾರೋ ಸುಟ್ಟು ಬೀಳುತ್ತಿರುವುದನ್ನು ನಾನು ನೋಡಿದೆ. ಇನ್ನೂ ಮೂವರು ಉರಿಯುತ್ತಾ ಕೆಳಗೆ ಬೀಳುತ್ತಿದ್ದರು ಎಂದಿದ್ದಾರೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!