ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ರೌಡಿಶೀಟರ್‌ ಮೆರವಣಿಗೆ, ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಮತ್ತೆ ಜೈಲಿಗೆ!

By Santosh Naik  |  First Published Jul 26, 2024, 9:51 PM IST

ಮಹಾರಾಷ್ಟ್ರದ ಗ್ಯಾಂಗ್‌ಸ್ಟರ್‌ ಹರ್ಷದ್‌ ಪಾಟಂಕರ್‌ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಆದರೆ, ಬಿಡುಗಡೆ ಆದ ಬಳಿಕ ಮಾಡಿದ ಭಾರೀ ಸಂಭ್ರಮಾಚರಣೆಯ ವಿಡಿಯೋ ವೈರಲ್‌ ಆದ ಬಳಿಕ ಆತನನ್ನು ಮತ್ತೆ ಜೈಲಿಗೆ ಅಟ್ಟಲಾಗಿದೆ.
 


ಮುಂಬೈ (ಜು.26): ಮಹಾರಾಷ್ಟ್ರದ ಗ್ಯಾಂಗ್‌ಸ್ಟರ್‌ ಹರ್ಷದ್ ಪಾಟಂಕರ್‌ಗೆ ಜಾಮೀನು ಸಿಕ್ಕಿ ಬಿಡುಗಡೆಯಾದ ಸಂಭ್ರಮ ಹೆಚ್ಚು ಹೊತ್ತು ಉಳಿದುಕೊಳ್ಳಲೇ ಇಲ್ಲ. ಜಾಮೀನು ಪಡೆದುಕೊಂಡು ಜೈಲಿನಿಂದ ಬಿಡುಗಡೆಯಾದ ಬಳಿಕ ಹರ್ಷದ್‌ ಪಾಟಂಕರ್‌ ತನ್ನ ಬೆಂಬಲಿಗರೊಂದಿಗೆ ತೆರೆದ ಜೀಪ್‌ನಲ್ಲಿ ಮೆರವಣಿಗೆ ಮಾಡಿದ್ದ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬೆನ್ನಲ್ಲಿಯೇ ಆತನನ್ನು ಮತ್ತೆ ಜೈಲಿಗೆ ಅಟ್ಟಲಾಗಿದೆ. ನಾಸಿಕ್‌ನ ಕುಖ್ಯಾತ ಕ್ರಿಮಿನಲ್ ಹರ್ಷದ್ ಪಾಟಂಕರ್, ಕೊಳೆಗೇರಿಗಳು, ಕಾಳಧನಿಕರು, ಮಾದಕವಸ್ತು ಅಪರಾಧಿಗಳು ಮತ್ತು ಅಪಾಯಕಾರಿ ವ್ಯಕ್ತಿಗಳ ಮಹಾರಾಷ್ಟ್ರದ ಅಪಾಯಕಾರಿ ಚಟುವಟಿಕೆಗಳ ತಡೆ ಕಾಯ್ದೆ (ಎಂಪಿಡಿಎ) ಅಡಿಯಲ್ಲಿ ಜೈಲು ಸೇರಿದ್ದರು. ಜುಲೈ 23 ರಂದು ಅವರನ್ನು ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯ ಖುಷಿಗಾಗಿ ಆತನ ಬೆಂಬಲಿಗರು ಜೈಲಿನ ಎದುರಿನಿಂದಲೇ ತೆರೆದ ಕಾರ್‌ನಲ್ಲಿ ಮೆರವಣಿಗೆಯನ್ನು ಆಯೋಜನೆ ಮಾಡಿದ್ದರು. ಅಂದಾಜು 15 ದ್ವಿಚಕ್ರ ವಾಹನಗಳು ರಾಲಿಯಲ್ಲಿ ಇದ್ದವು. ಬೆತೆಲ್ ನಗರದಿಂದ ಅಂಬೇಡ್ಕರ್ ಚೌಕ್‌ನವರೆಗೆ ಮೆರವಣಿಗೆ ನಡೆದಿದೆ ಎಂದು ವರದಿಯಾಗಿದ.ೆ ವೈರಲ್ ದೃಶ್ಯಗಳಲ್ಲಿ, ಪಾಟಂಕರ್ ಕಾರಿನ ಸನ್‌ರೂಫ್‌ನಿಂದ ತನ್ನ ಬೆಂಬಲಿಗರತ್ತ ಕೈ ಬೀಸುತ್ತಿರುವುದನ್ನು ಕಾಣಬಹುದಾಗಿದೆ.

ಮರು ಬಂಧನದ ನಂತರ, ಹರ್ಷದ್ ಪಾಟಂಕರ್ ಅವರ ಬೆಂಬಲಿಗರು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ, ಅದು ವೈರಲ್ ಆಗಿದ್ದು, ಮಹತ್ವದ ಚರ್ಚೆಯನ್ನು ಹುಟ್ಟುಹಾಕಿದೆ. ಪೊಲೀಸರು ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಕರ್ಫ್ಯೂ ಆದೇಶಗಳನ್ನು ಉಲ್ಲಂಘಿಸಿ ಮೆರವಣಿಗೆಯೊಂದಿಗೆ ಭಯ ಹುಟ್ಟಿಸಿದ ಆರೋಪದ ಮೇಲೆ ಸರ್ಕಾರವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಜೆಟ್‌ ಎಫೆಕ್ಟ್‌, ಎಲ್ಲಾ ಐಫೋನ್‌ಗಳ ಬೆಲೆ ಇಳಿಸಿದ ಆಪಲ್‌!

ವೀಡಿಯೋಗಳು ಪೋಲೀಸರ ಮಧ್ಯಸ್ಥಿಕೆಗೆ ಕಾರಣವಾದವು, ಅನಧಿಕೃತ ರ್ಯಾಲಿಯನ್ನು ನಡೆಸಿ ಅಸ್ತವ್ಯಸ್ತತೆಯನ್ನು ಉಂಟುಮಾಡಿದ್ದಕ್ಕಾಗಿ ಪಾಟಂಕರ್ ಅವರ ಆರು ಸಹಚರರೊಂದಿಗೆ ಪುನಃ ಅವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಕೊಲೆ ಯತ್ನ, ಕಳ್ಳತನ ಮತ್ತು ಹಿಂಸಾಚಾರದ ಆರೋಪಗಳು ಸೇರಿದಂತೆ ಹಲವು ಪೊಲೀಸ್ ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ.

Latest Videos

ದೇಶದ ವಿದೇಶಾಂಗ ವ್ಯವಹಾರಗಳ ಮೇಲೆ ಮೂಗು ತೂರಿಸಬೇಡಿ, ಕೇರಳ ಸರ್ಕಾರಕ್ಕೆ ಎಂಇಎ ಎಚ್ಚರಿಕೆ

Gangster Harshad Patankar, recently released from a Nashik jail, was reimprisoned after a viral celebration rally video.

pic.twitter.com/PQT9Ch3V7Z

— The NewsWale (@TheNewswale)
click me!