ಖದೀಮರ ಗ್ಯಾಂಗ್ ನಕಲಿ ನೋಟುಗಳನ್ನು ಪ್ರಿಂಟ್ ಮಾಡಿದೆ. ಆದರೆ ಈ ಗ್ಯಾಂಗ್‍ಗೆ ನೋಟಿನಲ್ಲಿರುವ ಫೋಟೋ ಯಾರದ್ದು?ಅನ್ನೋದೇ ಗೊತ್ತಿಲ್ಲ. ಗಾಂಧಿ ಬದಲು ನಟ ಅನುಪಮ್ ಖೇರ್ ಫೋಟೋ ಪ್ರಿಂಟ್ ಮಾಡಿದೆ. ವಿಶೇಷ ಅಂದರೆ ಈ ಕುರಿತು ಅನುಪಮ್ ಖೇರ್ ಪ್ರತಿಕ್ರಿಯಿಸಿದ್ದಾರೆ.
ಅಹಮ್ಮದಾಬಾದ್(ಸೆ.30) ಡೂಪ್ಲಿಕೇಟ್ ವಸ್ತುಗಳ ತಲೆಕೆಳಗೆ ಮಾಡಿ ನೋಡಿದರೂ ಪತ್ತೆ ಹಚ್ಚಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಒರಿಜಿನಾಲಿಟಿ ಕಾಪಾಡಿಕೊಂಡಿದ್ದಾರೆ. ಆದರೆ ಇಲ್ಲೊಂದು ಖದೀಮರ ಗ್ಯಾಂಗ್ ಬರೋಬ್ಬರಿ 1.6 ಕೋಟಿ ರೂಪಾಯಿ ಖೋಟಾ ನೋಟು ಪ್ರಿಂಟ್ ಮಾಡಿದೆ. ಎಲ್ಲಾ ಅಚ್ಚುಕಟ್ಟಾಗಿ ಪ್ರಿಂಟ್ ಮಾಡಿದ್ದಾರೆ. ಆದರೆ ನೋಟಿನಲ್ಲಿರುವ ಗಾಂಧಿ ಫೋಟೋ ಬದಲು ಬಾಲಿವುಡ್ ನಟ ಅನುಪಮ್ ಖೇರ್ ಫೋಟೋ ಬಳಸಿದ್ದಾರೆ. ಈ ನೋಟನ್ನು ವ್ಯಾಪಾರಿಗಳ ಸೋಗಿನಲ್ಲಿ ಬಂದು ಚಿನ್ನಾಭರಣದ ವ್ಯಾಪಾರಿಗೆ ವಂಚಿಸಿದ ಘಟನೆ ಅಹಮ್ಮದಾಬಾದ್‌ನಲ್ಲಿ ನಡೆದಿದೆ. ವಿಶೇಷ ಅಂದರೆ ಈ ಘಟನೆ ಕುರಿತು ನಟ ಅನುಪಮ್ ಖೇರ್ ಪ್ರತಿಕ್ರಿಯಿಸಿದ್ದಾರೆ.
ವ್ಯಾಪಾರಿ ಮೆಹುಲ್ ಥಕ್ಕರ್ ಅನ್ನೋ ಚಿನ್ನಾಭರಣ ವ್ಯಾಪಾರಿ ಇದೀಗ ನವರಂಗಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೆಹುಲ್ ಥಕ್ಕರ್ ವ್ಯಾಪಾರಿಯ ಸಿಬ್ಬಂದಿಯನ್ನು ಕೆಲವರು ಸಂಪರ್ಕಿಸಿದ್ದಾರೆ. ಬಳಿಕ 2,100 ಗ್ರಾಂ ಚಿನ್ನ ಖರೀದಿಸಲು ವ್ಯಾಪಾರ ಕುದುರಿಸಿದ್ದಾರೆ. ತಮ್ಮ ಜ್ಯೂವೆಲ್ಲರಿಗೆ ಮಾರಾಟ ಮಾಡಲು 2,100 ಗ್ರಾಂ ಚಿನ್ನ ಖರೀದಿಸಲು ಒಪ್ಪಂದ ಮಾಡಿದ್ದಾರೆ. ಒಟ್ಟು 1.6 ಕೋಟಿ ಮೌಲ್ಯದ ಚಿನ್ನ ಖರೀದಿಗೆ ಒಪ್ಪಂದವಾಗಿದೆ.
undefined
ಖೋಟಾ ನೋಟು ಖದೀಮರ ಹಿಡಿಯಲು ಪೊಲೀಸರಿಗೆ ನೆರವಾದ ಮೇಕೆ, 85 ಲಕ್ಷ ರೂ ನಕಲಿ ಕೆರೆನ್ಸಿ ವಶ!
ಜಿಎಸ್‌ಟಿ, ಇತರ ತೆರಿಗೆ ಕಾರಣಗಳಿಂದ ತಾವು ನಗದು ಹಣ ನೀಡುವುದಾಗಿ ಹೇಳಿದ್ದಾರೆ. ಇದಕ್ಕೆ ವ್ಯಾಪಾರಿ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಚಿನ್ನ ಖರೀದಿಸಿದ ಬಳಿಕ 1.3 ಕೋಟಿ ರೂಪಾಯಿ ನಗದು ಹಣ ನೀಡಿದ್ದಾರೆ. ಈ ಹಣ ಎಣಿಸುತ್ತಿರುವಾಗ ಇನ್ನುಳಿದ 30 ಲಕ್ಷ ರೂಪಾಯಿ ಹಣ ತರುವುದಾಗಿ ಹೇಳಿದ್ದಾರೆ. 2,100 ಗ್ರಾಂ ಚಿನ್ನ ನೀಡಿ ಕಂತೆ ಕಂತೆ ನೋಟಿನ ಬ್ಯಾಗ್ ಪಡೆದುಕೊಂಡಿದ್ದಾರೆ.
ವ್ಯಾಪಾರಿಗಳ ಸೋಗಿನಲ್ಲಿ ಬಂದ ಖದೀಮರು ಚಿನ್ನ ಹಿಡಿದು ಪರಾರಿಯಾಗಿದ್ದಾರೆ. ಇತ್ತ 1.3 ಕೋಟಿ ರೂಪಾಯಿ ಎಣಿಸಲು ಮುಂದಾದಾಗ ತಾವು ಮೋಸಹೋಗಿರುವುದು ಅರಿವಾಗಿದೆ. ಕಾರಣ 500 ರೂಪಾಯಿ ಮುಖಬೆಲೆಯ ನೋಟುಗಳನ್ನು ನೀಡಿದ್ದಾರೆ. ಈ ಪೈಕಿ ಮೇಲಿನ ಕಂತೆ ಕಂತೆ ನೋಟುಗಳ ಮೇಲಿನ ನೋಟು ಮಾತ್ರ ಅಸಲಿ. ಇನ್ನುಳಿದ ನೋಟು ನಕಲಿ. ನಕಲಿ ನೋಟಿನಲ್ಲಿ ಗಾಂಧಿ ಫೋಟೋ ಇಲ್ಲ, ಬದಲು ಅನುಪಮ್ ಖೇರ್ ಫೋಟೋ ಬಳಸಲಾಗಿದೆ. ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬದಲು ರಿಸೋಲ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬರೆಯಲಾಗಿದೆ.
ಈ ಘಟನೆ ಕುರಿತು ನಟ ಅನುಪಮ್ ಖೇರ್ ಪ್ರತಿಕ್ರಿಯಿಸಿದ್ದಾರೆ. 500 ರೂಪಾಯಿ ಮುಖಬೆಲೆ ನೋಟಿನಲ್ಲಿ ಗಾಂಧಿ ಫೋಟೋ ಬದಲು ನನ್ನ ಫೋಟೋ, ಇಲ್ಲಿ ಏನುಬೇಕಾದರು ಆಗಬಹುದು ಎಂದು ಕಮೆಂಟ್ ಮಾಡಿದ್ದಾರೆ.
ಯೂಟ್ಯೂಬ್‌ನಲ್ಲಿ ಟ್ರೇನಿಂಗ್, ಕೇರಳದಲ್ಲಿ ಪ್ರಿಂಟಿಂಗ್, ಕರ್ನಾಟಕದಲ್ಲಿ ಶಾಪಿಂಗ್! ಖೋಟಾ ನೋಟು ಗ್ಯಾಂಗ್ ಅರೆಸ್ಟ್
लो जी कर लो बात! 😳😳😳
पाँच सौ के नोट पर गांधी जी की फ़ोटो की जगह मेरी फ़ोटो???? कुछ भी हो सकता है! 😳😳😳 pic.twitter.com/zZtnzFz34I