
ನವದೆಹಲಿ (ಆ.11) ಗಣೇಶ ಹಬ್ಬದ ತಯಾರಿಗಳು ನಡೆಯುತ್ತಿದೆ. ಸೆಪ್ಟೆಂಬರ್ 14ರಂದು ಗಣೇಶ ಹಬ್ಬ ಆಚರಿಸಲಾಗುತ್ತಿದೆ. ಸಾಲು ಸಾಲು ಹಬ್ಬಗಳು, ರಜಾ ದಿನಗಳ ಕಾರಣ ರೈಲು ಪ್ರಯಾಣ ಗಣನೀಯವಾಗಿ ಏರಿಕೆಯಾಗಲಿದೆ. ಹಬ್ಬದ ಸಂದರ್ಭಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಇದೀಗ ಕೊಂಕಣ ರೈಲ್ವೇ ಗಣೇಶ ಚತುರ್ಥಿ ವಿಶೇಷ ರೈಲು ಘೋಷಣೆ ಮಾಡಿದೆ. 254 ರೈಲುಗಳನ್ನು ಘೋಷಣೆ ಮಾಡಲಾಗಿದೆ. ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು , ಸ್ವಗ್ರಾಮಕ್ಕೆ ತರಳಲು ಕರ್ನಾಟಕದ ಕರಾವಳಿ ಸೇರಿದಂತೆ ಹಲೆವೆಡೆಗೆ ವಿಶೇಷ ರೈಲನ್ನು ಘೋಷಣೆ ಮಾಡಲಾಗಿದೆ.
ಕೊಂಕಣ ರೈಲ್ವೇಯ ವಿಶೇಷ ರೈಲುಗಳು ಸೆಪ್ಟೆಂಬರ್ 11 ರಿಂದ 27ರವರೆಗೆ ಇರಲಿದೆ. ಸೆಂಟ್ರಲ್ ರೈಲ್ವೇ ಸಹಯೋಗದಲ್ಲಿ 254 ರೈಲುಗಳನ್ನು ಘೋಷಣೆ ಮಾಡಲಾಗಿದೆ. IRCTC ವೆಬ್‌ಸೈಟ್, ಆ್ಯಪ್ ಹಾಗೂ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ ಕೌಂಟರ್‌ಗಳಲ್ಲಿ ಈಗಾಗಲೇ ವಿಶೇಷ ರೈಲು ಟಿಕೆಟ್ ಬುಕಿಂಗ್ ಆರಂಬಗೊಂಡಿದೆ. ಕೊನೆಯ ಕ್ಷಣದಲ್ಲಿ ಗೊಂದಲ ಹಾಗೂ ರೈಲು ಟಿಕೆಟ್ ಬುಕಿಂಗ ಕನ್‌ಫರ್ಮೇಶನ್ ಸಮಸ್ಯೆ ತಪ್ಪಿಸಲು ಕೊಂಕಣ ರೈಲ್ವೇ ಬುಕಿಂಗ್ ತೆರೆದಿದೆ. ಪ್ರಯಾಣಿಕರು ಈಗಿನಿಂದಲೇ ವಿಶೇಷ ರೈಲಿನ ಟಿಕೆಟ್ ಬುಕಿಂಗ್ ಮಾಡಿಕೊಳ್ಳಬಹುದು.
ಗಣೇಶ ಚತುರ್ಥಿ ಅಂಗವಾಗಿ ಘೋಷಣೆ ಮಾಡಿರುವ ವಿಶೇಷ ರೈಲುಗಳು ಛತ್ರಪತಿ ಶಿವಾಜಿ ಟರ್ಮಿನಸ್ ಮುಂಬೈನಿಂದ ಸಾವಂತ್‌ವಾಡಿ, ರತ್ನಗಿರಿ, ಮಡಗಾಂವ್, ಮಂಗಳೂರು ಮಾರ್ಗಗಳಿಗೆ ಸಂಪರ್ಕ ಕಲ್ಪಿಸಲಿದೆ. ಲೋಕಮಾನ್ಯ ತಿಲಕ ನಿಲ್ದಾಣದಿಂದ ಮಡಗಾಂವ್, ಮಂಗಳೂರು ಮಾರ್ಗಗಳಲ್ಲೂ ಸಂಚಾರ ನಡೆಸಲಿದೆ. ಸ್ಟರ್ನ್ ರೈಲ್ವೆ ಸಹಯೋಗದೊಂದಿಗೆ ಮುಂಬೈನ ಬಾಂದ್ರಾ ಟರ್ಮಿನಸ್, ವಡೋದರಾ, ವಲ್ಸಾಡ್ ಮತ್ತು ಭುಸಾವಲ್ ನಗರಗಳಿಂದಲೂ 8 ವಿಶೇಷ ರೈಲುಗಳು ಕಾರ್ಯಾಚರಣೆ ನಡೆಸಲಿವೆ
254 ರೈಲುಗಳ ಮಾರ್ಗ, ಸಂಚಾರ ವೇಳಾಪಟ್ಟಿ ಕುರಿತು ನ್ಯಾಷನಲ್ ಟ್ರೈನ್ ಎನ್‌ಕ್ವೈರಿ ಸಿಸ್ಟಮ್ (NTES) ಹಾಗೂ ಕೊಂಕಣ ರೈಲ್ವೇ ಆ್ಯಪ್ ಬಳಸುವಂತೆ ಸೂಚಿಸಲಾಗಿದೆ. ಸಾಮಾನ್ಯ ರೈಲುಗಳ ಜೊತೆಗೆ ವಿಶೇಷ ರೈಲುಗಳು ವ್ಯವಸ್ಥೆಯೂ ಇದೆ. ಹೀಗಾಗಿ ಪ್ರಯಾಣಿಕರು ಯಾವುದೇ ಅಡೆ ತಡೆ ಇಲ್ಲದೆ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ