Gandak River: ನೇಪಾಳದಲ್ಲಿ ಭೀಕರ ಪ್ರವಾಹ, ಅಲ್ಲಿಂದಲೇ ಹರಿದು ಬರುವ ಬಿಹಾರದ ಈ ನದಿ ಮಾತ್ರ ಸೈಲೆಂಟ್! ಆದ್ರೂ ಸರ್ಕಾರ ಅಲರ್ಟ್

Published : Aug 28, 2026, 12:33 PM IST
Gandak River Levels in Bihar Remain Normal Despite Devastating Nepal Floods

ಸಾರಾಂಶ

ನೇಪಾಳದಲ್ಲಿ ಭೀಕರ ಪ್ರವಾಹ ಉಂಟಾಗಿದ್ರೂ, ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ಹರಿಯುವ ಗಂಡಕ್ ನದಿಯ ನೀರಿನ ಮಟ್ಟ ಸದ್ಯಕ್ಕೆ ಸಾಮಾನ್ಯವಾಗಿ ಇದೆ. ಯಾವುದೇ ತಕ್ಷಣದ ಪರಿಣಾಮ ಇಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಆದರೂ, ಆಡಳಿತ ಮುನ್ನೆಚ್ಚರಿಕೆ ವಹಿಸಿದ್ದು, ಅಲರ್ಟ್ ಘೋಷಿಸಿದೆ.

ನೇಪಾಳದ ರಸುವಾ ಜಿಲ್ಲೆಯಲ್ಲಿ ಹಠಾತ್ ಭೀಕರ ಪ್ರವಾಹ ಉಂಟಾಗಿ ಭಾರೀ ಸಾವು ನೋವು ಅನಾಹುತ ಸೃಷ್ಟಿಸಿದರೂ ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ಗಂಡಕ್ ನದಿಯ ನೀರಿನ ಮಟ್ಟ ಸಾಮಾನ್ಯವಾಗಿ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗಂಡಕ್ ನದಿ ನೇಪಾಳದಿಂದ ಬಿಹಾರ ಮತ್ತು ಉತ್ತರ ಪ್ರದೇಶಕ್ಕೆ ಹರಿಯುತ್ತದೆ. ಗೋಪಾಲ್‌ಗಂಜ್‌ನ ಖಾಪ್ ಮಕ್ಸೂದ್‌ಪುರ್ ನಿವಾಸಿಗಳು ಸದ್ಯಕ್ಕೆ ನದಿಯ ನೀರಿನ ಮಟ್ಟದಲ್ಲಿ ಯಾವುದೇ ಏರಿಕೆ ಕಂಡಿಲ್ಲ ಎಂದು ಹೇಳಿದ್ದಾರೆ. ಆದರೂ ನೆರೆಯ ದೇಶದಲ್ಲಿನ ಪ್ರವಾಹದ ಹಿನ್ನೆಲೆಯಲ್ಲಿ ಆಡಳಿತವು ಎಚ್ಚರಿಕೆ ನೀಡಿದೆ.

ನೀರಿನ ಮಟ್ಟ ಸಾಮಾನ್ಯವಾಗಿದೆ!

ನೇಪಾಳದಿಂದಲೇ ಹರಿಯುವ ನದಿ, ಭೀಕರ ಪ್ರವಾಹದ ನಡುವೆಯೂ ಸದ್ಯಕ್ಕೆ ನೀರಿನ ಮಟ್ಟ ನಾರ್ಮಲ್ ಆಗಿದೆ. ನೇಪಾಳ ಪ್ರವಾಹದಿಂದ ನದಿ ಉಕ್ಕಿ ಪ್ರವಾಹ ಸೃಷ್ಟಿಸುತ್ತೆ ಎಂಬ ಆತಂಕವಿತ್ತು. ಈ ಹಿನ್ನೆಲೆ ಆಡಳಿತ ಕೂಡ ಅಲರ್ಟ್ ಘೋಷಿಸಿತ್ತು' ಆದರೆ ನದಿ ಸಾಮಾನ್ಯವಾಗಿದೆ ನೀರಿನ ಏರಿಕೆ ಕಂಡುಬಂದಿಲ್ಲ ಸ್ಥಳೀಯರು ಹೇಳಿದ್ದಾರೆ.

ನೇಪಾಳದಿಂದ ಹರಿಯುತ್ತೆ ಗಂಡಕ್ ನದಿ

ಗಂಡಕ್ ನದಿ ನೇಪಾಳದಿಂದ ಹರಿದು ಬರುತ್ತದೆ. ಇಲ್ಲಿಯವರೆಗೆ ಪ್ರವಾಹದ ಯಾವುದೇ ಪರಿಣಾಮ ನಮ್ಮ ಮೇಲೆ ಆಗಿಲ್ಲ ಎಂದು ಮತ್ತೊಬ್ಬ ಸ್ಥಳೀಯರು ANI ಸುದ್ದಿಸಂಸ್ಥೆಗೆ ತಿಳಿಸಿದರು. ಇಲ್ಲಿ ಇನ್ನೂ ಪ್ರವಾಹದ ಪರಿಸ್ಥಿತಿ ಇಲ್ಲ. ಅಂತಹ ಯಾವುದೇ ಪರಿಸ್ಥಿತಿ ಬಂದರೆ, ಅದು ನದಿಯಲ್ಲಿ ಕಾಣಿಸುತ್ತದೆ' ಎಂದು ಖಾಪ್ ಮಕ್ಸೂದ್‌ಪುರ್ ನಿವಾಸಿಯೊಬ್ಬರು ಹೇಳಿದರು.

ಬಿಹಾರದಲ್ಲಿ ನೇಪಾಳ ಪ್ರವಾಹದ ಎಫೆಕ್ಟ್ ಇಲ್ಲ

ಗುರುವಾರ, ಬಿಹಾರದ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಪ್ರತಿಕ್ರಿಯಿಸಿದ್ದು, ನೆರೆಯ ನೇಪಾಳದಲ್ಲಿನ ಹಠಾತ್ ಪ್ರವಾಹದ ನಂತರ ಅಧಿಕಾರಿಗಳು ನೀರಿನ ಮಟ್ಟ ಮತ್ತು ಪ್ರವಾಹ ಪೀಡಿತ ಪ್ರದೇಶಗಳ ಮೇಲಿನ ಪರಿಣಾಮವನ್ನು ಪರಿಶೀಲಿಸಿದ್ದು ರಾಜ್ಯದಲ್ಲಿ ಯಾವುದೇ ಆತಂಕ ಪರಸ್ಥಿತಿ ಇಲ್ಲ. ವಾಲ್ಮೀಕಿ ನಗರದವರೆಗೆ ನಾವೇ ಖುದ್ದಾಗಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದು ರಾಜ್ಯದಲ್ಲಿ ಈಗ ಪರಿಸ್ಥಿತಿ ಸಾಮಾನ್ಯವಾಗಿದೆ ಎಂದಿದ್ದಾರೆ.

ನಾವು ಪ್ರವಾಹದ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅವಲೋಕಿಸಿದ್ದೇವೆ. ದೇವರ ದಯೆಯಿಂದ, ಬಹುತೇಕ ಎಲ್ಲವೂ ಸಾಮಾನ್ಯ ಸ್ಥಿತಿಯಲ್ಲಿದೆ. ನಾವು ವಾಲ್ಮೀಕಿ ನಗರದವರೆಗೂ ಹೋಗಿ ಪರಿಶೀಲನೆ ನಡೆಸಿದ್ದೇವೆ. ಈಗ ಪರಿಸ್ಥಿತಿ ಕ್ರಮೇಣ ಸುಧಾರಿಸುತ್ತಿದೆ. ನೀರಿನ ಮಟ್ಟದ ಬಗ್ಗೆ ಇನ್ನು ಮುಂದೆ ಯಾವುದೇ ತೊಂದರೆ ಕಾಣಿಸುತ್ತಿಲ್ಲ," ಎಂದು ಅವರು ಹೇಳಿದರು.

ನೇಪಾಳದಲ್ಲಿ ಭೀಕರ ಪ್ರವಾಹ

ನೇಪಾಳದ ರಸುವಾ ಜಿಲ್ಲೆಯಲ್ಲಿ ಉಂಟಾದ ಭೀಕರ ಪ್ರವಾಹದಿಂದಾಗಿ ಶುಕ್ರವಾರದ ವೇಳೆಗೆ ಸಾವಿನ ಸಂಖ್ಯೆ 469ಕ್ಕೆ ಏರಿದೆ. 1,545 ಜನರು ಗಾಯಗೊಂಡಿದ್ದು, ಅವರನ್ನು ರಕ್ಷಿಸಲಾಗಿದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ. ನೇಪಾಳ ಪೊಲೀಸರ ಪ್ರಕಾರ, ಚಿತ್ವಾನ್ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 178 ಮೃತದೇಹಗಳು ಪತ್ತೆಯಾಗಿವೆ. ನಂತರ NP ಈಸ್ಟ್‌ನಲ್ಲಿ 110, ಗೂರ್ಖಾದಲ್ಲಿ 44, ನುವಾಕೋಟ್‌ನಲ್ಲಿ 37, ಧಾಡಿಂಗ್‌ನಲ್ಲಿ 33, ತನಹುನ್‌ನಲ್ಲಿ 28, NP ವೆಸ್ಟ್‌ನಲ್ಲಿ 27 ಮತ್ತು ರಸುವಾದಲ್ಲಿ 12 ಮೃತದೇಹಗಳು ಪತ್ತೆಯಾಗಿವೆ.

ಅಧಿಕಾರಿಗಳು ರಸುವಾದಿಂದ 644, ನುವಾಕೋಟ್‌ನಿಂದ 898 ಮತ್ತು ಧಾಡಿಂಗ್‌ನಿಂದ ಮೂವರನ್ನು ರಕ್ಷಿಸಿದ್ದಾರೆ. (ANI)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜೀ ಗ್ರೂಪ್ ಸುಭಾಷ್ ಚಂದ್ರ ಶೇ.99.97 ಸಾಲ ಮನ್ನಾ ವಿವಾದ 'ಭಾರತೀಯ ಕೋರ್ಟ್‌ ವಿಚಿತ್ರ ನ್ಯಾಯ': ವಿಜಯ್ ಮಲ್ಯ ಲೇವಡಿ!
Jan Dhan Yojana: ಜನ್ ಧನ್ ಖಾತೆಗಳಲ್ಲಿ ಜಬರ್ದಸ್ತ್ ಏರಿಕೆ! ₹3 ಲಕ್ಷ ಕೋಟಿ ದಾಟಿದೆ ಠೇವಣಿ!