ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ಸಂಘರ್ಷ| ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆ ಇದೀಗ ಸಂಪೂರ್ಣ ಹಿಡಿತ| ಹಿಂದೆ ಸರಿದಿದ್ದ ಚೀನಾ ಪಡೆ
ನವದೆಹಲಿ(ಜೂ.22): ಜೂ.15ರಂದು ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ಸಂಘರ್ಷ ಏರ್ಪಟ್ಟಗಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆ ಇದೀಗ ಸಂಪೂರ್ಣ ಹಿಡಿತ ಸಾಧಿಸಿದೆ.
ಸಂಘರ್ಷದ ಬಳಿಕ ಚೀನಾ ಪಡೆಗಳು ಹಿಂದೆ ಸರಿದಿದ್ದವು. ಆದರೆ ಭಾರತೀಯ ಯೋಧರು ಇನ್ನೂ ಆ ಜಾಗದಲ್ಲಿ ಇದ್ದಾರೆ. ತನ್ಮೂಲಕ ಆ ಸ್ಥಳವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸ್ಥಳೀಯರಿಗೆ ಉದ್ಯೋಗ; ಭಾರತದಲ್ಲಿರುವ ಚೀನಾ ಕಂಪನಿಗಳ ಪ್ಲಾನ್!
ಹಿಂದೆ ಸರಿದ ಚೀನೀ ಪಡೆ
ಸಂಘರ್ಷದ ಬಳಿಕ ಭಾರತ ಮತ್ತು ಚೀನಾ ಪಡೆಗಳು ಗಲ್ವಾನ್ ಕಣಿವೆಯಿಂದ ಭಾವನಾತ್ಮಕವಾಗಿ ಪರಸ್ಪರ ಹಿಂದೆ ಸರಿದಿದ್ದವು. ಬಳಿಕ ಗಲ್ವಾನ್ ಗಡಿಯಲ್ಲಿ ಚೀನಾ 8 ಕಿ.ಮೀ. ಉದ್ದಕ್ಕೆ ತನ್ನ ಸೈನಿಕರನ್ನು ಜಮಾವಣೆ ಮಾಡಿ, ಭಾರತೀಯ ಯೋಧರಿಗೆ ತಡೆಯೊಡ್ಡಿದೆ ಎನ್ನಲಾಗಿತ್ತು. ಆದರೆ, ಗಲ್ವಾನ್ ಕಣಿವೆಯ ಆಯಕಟ್ಟಿನ ಪ್ರದೇಶಗಳಲ್ಲಿ ಭಾರತೀಯ ಸೇನೆ ಪ್ರಭುತ್ವ ಸಾಧಿಸಿದೆ. ಅಲ್ಲಿಂದ ಹಿಂದೆ ಸರಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದೇ ವೇಳೆ ಭಾರತ ಗಡಿಯಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲು ಭಾರತ ಬಯಸುತ್ತದೆ ಎಂದು ಸೇನಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್