'ಅರಿವು ಮೂಡಿಸಿದ ಕೊರೋನಾ, ಆರೋಗ್ಯ ಕ್ರಾಂತಿ ಇಂದಿನ ತುರ್ತು'

By Suvarna NewsFirst Published Jun 22, 2020, 2:41 PM IST
Highlights

ಕೊರೋನಾ ಕಲಿಸಿದ ಪಾಠಗಳು ಏನು?  ರಾಜ್ಯಸಭಾ ಸದಸ್ಯ ಡಾ.ಎಲ್. ಹನುಮಂತಯ್ಯ ಅವರ ಸಂದರ್ಶನ/ ಲಾಕ್ ಡೌನ್ ಸಮಯ ಕಳೆದಿದ್ದು ಹೇಗೆ? ಹೊಸ ಸಾಹಿತ್ಯ ರಚನೆಗೆ ಕಾರಣವಾದ ಕೊರೋನಾ

ಡೆಲ್ಲಿ ಮಂಜು

ಕೊರೋನಾ ಎಂಬ ಮಹಾಮಾರಿ ದೇಶವನ್ನೇ ಆವರಿಸಿಕೊಂಡಿದೆ. ಔಷಧ ಹುಡುಕುವ ಯತ್ನ ಒಂದು ಕಡೆಯಾದರೆ ಇನ್ನೊಂದು ಕಡೆ ನಿಯಂತ್ರಣಕ್ಕೆ ನಿರಂತರ ಪ್ರಯತ್ನ ಮಾಡಲಾಗುತ್ತಿದೆ.

ಕರೋನಾ ಕಲಿಸಿದ  ಪಾಠವೇನು?

ಹೆಚ್ಚು ಕಡಿಮೆ 60 ರಿಂದ 70 ದಿನ ಮನೆಯಲ್ಲೇ ಉಳಿಯುವ ಅವಕಾಶ ಸಿಕ್ಕಿದೆ.ನನ್ನ ಜೀವಮಾನ ಪೂರ್ತಿ ಇಷ್ಟು ದಿನಗಳ ಕಾಲ ಮನೆಯಲ್ಲಿ ಉಳಿದಿದ್ದು ಇಲ್ಲ. ಕುಟುಂಬದ ಜೊತೆ ಒಟ್ಟಿಗೆ ಇರುವ ಹೊಸಪಾಠವೊಂದು ಕರೋನಾ ಕಲಿಸಿದೆ. ಅನವಶ್ಯಕ ಸಾರ್ವಜನಿಕ ಓಡಾಟ ಇಲ್ಲದಂತಾಗಿದೆ. ಒಂಟಿಯಾಗಿ ಇರುವ ಮೂಲಕ ನಮ್ಮನ್ನು ನಾವೇ ನೋಡಿಕೊಳ್ಳುವ ಸ್ಥಿತಿ ನಿರ್ಮಾಣ ವಾಗಿದೆ.

ಹಳ್ಳಿಗರಿಗೆ ರೋಗ ನಿರೋಧಕ ಶಕ್ತಿ ಜಾಸ್ತಿ ಯಾಕೆ? ಗುಟ್ಟು ಬಿಚ್ಚಿಟ್ಟ ಉದಾಸಿ

ಕರೋನಾದಿಂದ ವೈಯಕ್ತಿಕ ಜೀವನದ ಮೇಲೆ ಪರಿಣಾಮ?

ಅನೇಕ ಪುಸ್ತಕ ಗಳನ್ನು ಓದಲು ಅವಕಾಶ ಆಯ್ತು. ಕರೋನಾ ಹೊತ್ತಲ್ಲಿ ಹಲವು ಪದ್ಯಗಳ ರಚನೆ ಸಾಧ್ಯವಾಯ್ತು. ನಮ್ಮ ಎಲ್ಲರ ಪರಿಸ್ಥಿತಿ ಎಷ್ಟು ಭೀಕರವಾಗಿದೆ ಅನ್ನೋದು ಕಲಿಸಿಕೊಟ್ಟಿದೆ.

ಲಾಕ್ ಡೌನ್ ಹೊತ್ತಲ್ಲಿ ಕಂಡು ಬಂದ ಎರಡು ಪ್ರಮುಖ ಸಮಸ್ಯೆಗಳು?

ಮೊದಲನೆಯದ್ದು ಸಾರ್ವಜನಿಕ ಆರೋಗ್ಯ ಸಮಸ್ಯೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿಂದ ಆರೋಗ್ಯ ಕಾಪಾಡಲು ಸರ್ಕಾರಗಳು ಯತ್ನ ಮಾಡುತ್ತಲೇ ಬಂದಿದ್ದರೂ ಇನ್ನು ಪೂರ್ತಿಯಾಗಿ ಮಾಡಲು ಆಗಿಲ್ಲ. ನಮ್ಮ ಆರೋಗ್ಯ ವ್ಯವಸ್ಥೆ ಬಹಳ ದೊಡ್ಡಮಟ್ಟದಲ್ಲಿ ಆಗಬೇಕು. ಹಸಿರುಕ್ರಾಂತಿ, ಶಿಕ್ಷಣಕ್ರಾಂತಿಯಂತೆ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯಾಗಬೇಕು. ಈಗಿನ ಪರಿಸ್ಥಿತಿ ತಕ್ಕಂತೆ ಆರೋಗ್ಯ ಕ್ಷೇತ್ರ ಬೆಳೆದಿಲ್ಲ ಅಥವಾ ನಿರೀಕ್ಷಿತ ಮಟ್ಟದಲ್ಲಿ ಬೆಳೆಸಲು ಆಗಿಲ್ಲ. ಎಲ್ಲರಿಗೂ ಆರೋಗ್ಯ ಅನ್ನೋ ಘೋಷಣೆ ಮುಟ್ಟಬೇಕಿದೆ. ಎರಡನೇಯದ್ದು ಸಾರ್ವಜನಿಕ ಶಿಸ್ತು ಇನ್ನೂ ಬೆಳೆಯಬೇಕಿದೆ. ಇಂಥ ಸಾಂಕ್ರಾಮಿಕ ರೋಗಗಳ ಹೊತ್ತಲ್ಲಿ ಎಷ್ಟು ಶಿಸ್ತಿನಿಂದ ನಡೆದುಕೊಳ್ಳಬೇಕು ಅನ್ನೋ ಅರಿವು ಭಾರತೀಯರಿಗೆ ಇರಲಿಲ್ಲ. ಕೊರೊನಾ ಅದು ಕಲಿಸಿಕೊಟ್ಟಿದೆ.

ಲಾಕ್ ಡೌನ್ ಹೊತ್ತಲ್ಲಿ ಹೇಗೆ ಸಮಯ ಕಳೆದ್ರಿ?

ನನ್ನನ್ನು ನಾನು ಅರಿತುಕೊಳ್ಳುವುದು ಹೇಗೆ ಅನ್ನೋದು ಗೊತ್ತಾಯ್ತು.ಪುಸ್ತಕ ಓದುವುದು, ನ್ಯೂಸ್ ಚಾನಲ್ ನೋಡೋದು ಮಾಡಿದೆ.  ಇನ್ನು ಬದುಕಿನ ಅನಿವಾರ್ಯತೆಗೋಸ್ಕರ ಹೊರಗಡೆ ಬರುವವರಿಗೆ ಆರೋಗ್ಯದ ರಕ್ಷಣೆ ಕಲ್ಪಿಸಬೇಕಿದೆ ಎಂಬುದು ನನ್ನ ಒತ್ತಾಯ.

click me!