
ಅಯೋಧ್ಯಾ: ಅಕ್ಷಯ ತೃತೀಯದ ವಿಶೇಷ ದಿನವಾದ ಇಂದು ಅಯೋಧ್ಯೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಇಲ್ಲಿನ ಹನುಮಾನ್ ಗರ್ಹಿ ದೇಗುಲದ ಪ್ರಮುಖ ಪುರೋಹಿತರು, 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಹನುಮಾನ್ ಗರ್ಹಿ ದೇಗುಲದ 70 ವರ್ಷದ ಪುರೋಹಿತ ಮಹಾಂತ ಪ್ರೇಮ ದಾಸ್ ಗಡ್ಡಿ ನಿಶಾನ್ ಎಂಬ ಬಿರುದನ್ನು ಹೊಂದಿದ್ದು, ಅವರು ತಮ್ಮ 70 ವರ್ಷಗಳಲ್ಲಿ ಎಂದಿಗೂ ಈ ದೇಗುಲದ ಆವರಣವನ್ನು ಬಿಟ್ಟು ಹೊರಗೆ ಬಂದಿರಲಿಲ್ಲ, ಪ್ರದೇಶವೂ 52 ಬಿಗಾದಷ್ಟು(31.244 ಎಕರೆ) ವಿಸ್ತಾರವಾಗಿದೆ. ಶತಮಾನದಷ್ಟು ಹಳೆಯ ಹಿಂದಿನ ಸಂಪ್ರದಾಯದ ಪ್ರಕಾರ ಹನುಮಾನ್ ಗರ್ಹಿಯ ಪುರೋಹಿತರು ತಮ್ಮ ಜೀವನದುದ್ದಕ್ಕೂ ಈ ಪ್ರದೇಶವನ್ನು ಬಿಟ್ಟು ಬೇರೆಡೆಗೆ ಹೋಗುವಂತಿಲ್ಲ, ಆದರೆ ಪುರೋಹಿತರಿಗೆ ರಾಮನ ನೋಡುವ ಆಸೆಯಾಗಿದೆ. ಹೀಗಾಗಿ ಅವರು ಈ ಆಸೆಯನ್ನು ತಮ್ಮ ಆಪ್ತರು ಸಂಬಂಧಿಸಿದವರಲ್ಲಿ ಹೇಳಿಕೊಂಡಿದ್ದರು. ಅದರಂತೆ ಅವರೀಗೆ ಈಗ ರಾಮನ ನೋಡಲು ಅನುಮತಿ ಸಿಕ್ಕಿದ್ದು, ಅಕ್ಷಯ ತೃತೀಯದ ಈ ವಿಶೇಷ ದಿನದಂದೇ ಅವರು ರಾಮನ ದರ್ಶನ ಮಾಡಲಿದ್ದಾರೆ.
18 ನೇ ಶತಮಾನದಲ್ಲಿ ದೇವಾಲಯ ಸ್ಥಾಪನೆಯೊಂದಿಗೆ ಪ್ರಾರಂಭವಾದ ಈ ಸಂಪ್ರದಾಯವು ಎಷ್ಟು ಕಟ್ಟುನಿಟ್ಟಾಗಿತ್ತೆಂದರೆ ಗಡ್ಡಿ ನಶೀನ್ ಹುದ್ದೆಯಲ್ಲಿದ್ದವರು ಸ್ಥಳೀಯ ನ್ಯಾಯಾಲಯಗಳ ಮುಂದೆಯೂ ಹಾಜರಾಗುವುದನ್ನು ನಿಷೇಧಿಸಲಾಗಿತ್ತು ಎಂದು ಅಯೋಧ್ಯೆಯ ನಿವಾಸಿ ಪ್ರಜ್ವಲ್ ಸಿಂಗ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ . ಆದರೆ ಈಗ ಹನುಮಾನ್ ಗರ್ಹಿಯ ಪುರೋಹಿತರೂ ಆಗಿರುವ ಮಹಾಂತ್ ಪ್ರೇಮ್ ದಾಸ್ ರಾಮ ಮಂದಿರಕ್ಕೆ ಭೇಟಿ ನೀಡುವ ಬಯಕೆಯನ್ನು ವ್ಯಕ್ತಪಡಿಸಿದ ನಂತರ ಶತಮಾನಗಳಷ್ಟು ಹಳೆಯ ಈ ಸಂಪ್ರದಾಯಕ್ಕೆ ಬ್ರೇಕ್ ಹಾಕಲಾಗಿದೆ.
ಇದನ್ನೂ ಓದಿ:ಭಜರಂಗ ಬಲಿ ಹುಟ್ಟಿದ್ದು ಕರ್ನಾಟಕದಲ್ಲಿ, ಪೂಜೆ ಅಯೋಧ್ಯೆಯ ಹನುಮಂತನಗರದಲ್ಲಿ: ಸಿಎಂ ಯೋಗಿ
ಅವರು ನಿರ್ವಾಣಿ ಅಖಾರದ ಪಂಚರಿಗೆ ತಮ್ಮ ಆಸೆಯನ್ನು ತಿಳಿಸಿದಾಗ, ಅವರು ಗಡ್ಡಿ ನಶೀನ್ ಆಗಿರುವ ಮಹಾಂತ್ ಪ್ರೇಮ್ ದಾಸ್ ಅವರ ಭೇಟಿಗೆ ಸರ್ವಾನುಮತದಿಂದ ಅನುಮತಿ ನೀಡಿದರು. ಹೀಗಾಗಿ ಇಂದು ಗಡ್ಡಿ ನಶೀನ್ ಆಗಿರುವ ಹನುಮಾನ್ ಗರ್ಹಿ ಮಂದಿರದ ಪುರೋಹಿತರು ಮೆರವಣಿಗೆಯ ಮೂಲಕ ಅಯೋಧ್ಯೆಯ ರಾಮ ಮಂದಿರಕ್ಕೆ ಬಂದು ಆಂಜನೇಯನ ದರ್ಶನ ಮಾಡಲಿದ್ದಾರೆ. ಈ ಮೆರವಣಿಗೆಯಲ್ಲಿ ಕುದುರೆಗಳು, ಒಂಟೆಗಳು, ಆನೆಗಳು ಇರಲಿವೆ. ಈ ಮೆರವಣಿಗೆಯನ್ನು ಮುನ್ನಡೆಸುತ್ತಾ ಬಂದು ಅವರು ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಮಾಡಲಿದ್ದಾರೆ.ಇವರಿಗೆ ನಾಗಸಾಧುಗಳು ಸ್ಥಳೀಯ ವ್ಯಾಪಾರಿಗಳು, ಶಿಷ್ಯರು ಭಕ್ತರು ಸಹಾಯ ಮಾಡಲಿದ್ದಾರೆ ಎಂದು ನಿರ್ವಾನಿ ಅಖಾರದ ಮಹಾಂತ ರಾಮ್‌ಕುಮಾರ್ ದಾಸ್ ಮಾಹಿತಿ ನೀಡಿದ್ದಾರೆ. ಈ ಮೆರವಣಿಗೆಯೂ ಸರಯೂ ನದಿಯನ್ನು ತಲುಪಿ ಅಲ್ಲಿ ಧಾರ್ಮಿಕ ಸ್ನಾನ ಮಾಡಿದ ನಂತರ ಶ್ರೀರಾಮನ ದೇಗುಲಕ್ಕೆ ಬಂದು ಅಲ್ಲಿ ಶ್ರೀರಾಮನ ದರ್ಶನ ಪಡೆಯಲಿದ್ದಾರೆ. ಈ ವೇಳೆ ನಾಲ್ಕು ಪಂಗಡದ ಸಂತರು ಅವರೊಂದಿಗೆ ಇರಲಿದ್ದಾರೆ.
ಇದನ್ನೂ ಓದಿ:ಪಾಕಿಸ್ತಾನದಲ್ಲಿ ರಾಮಮಂದಿರ; ಭಾರತದಿಂದ ಗಂಗಾಜಲ ತೆಗೆದುಕೊಂಡ ಹೋದ ಅರ್ಚಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ