ಭಾರತೀಯ ರೈಲ್ವೆಯಿಂದ 200 ಕ್ಕೂ ಹೆಚ್ಚು ರೈಲುಗಳು ತಾತ್ಕಾಲಿಕ ರದ್ದು

Published : Sep 03, 2023, 05:42 PM IST
ಭಾರತೀಯ ರೈಲ್ವೆಯಿಂದ 200 ಕ್ಕೂ ಹೆಚ್ಚು ರೈಲುಗಳು ತಾತ್ಕಾಲಿಕ ರದ್ದು

ಸಾರಾಂಶ

G20 ಶೃಂಗಸಭೆ ಹಿನ್ನೆಲೆ ಭಾರತೀಯ ರೈಲ್ವೆ ಇಲಾಖೆ 200 ಕ್ಕೂ ಹೆಚ್ಚು ರೈಲುಗಳನ್ನು ಸ್ಥಗಿತಗೊಳಿಸಿದೆ. ಜೊತೆಗೆ ಹಲವು ರೈಲಯಗಳ ಪಥ ಬದಲಿಸಿದೆ.

ನವದೆಹಲಿ (ಸೆ.3): G20 ಶೃಂಗಸಭೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಉತ್ತರ ರೈಲ್ವೇಯು ಇಲ್ಲಿ ಸೆಪ್ಟೆಂಬರ್ 8 ರಿಂದ 11 ರವರೆಗೆ ತಾತ್ಕಾಲಿಕವಾಗಿ 200 ಕ್ಕೂ ಹೆಚ್ಚು ಪ್ರಯಾಣಿಕ ರೈಲು ಸೇವೆಗಳನ್ನು ರದ್ದುಗೊಳಿಸಲು ಮತ್ತು ಬೇರೆಡೆಗೆ ತಿರುಗಿಸಲು ನಿರ್ಧರಿಸಿದೆ ಎಂದು ಶನಿವಾರ ರೈಲ್ವೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವೇಳಾಪಟ್ಟಿಯ ಪ್ರಕಾರ, ಸೆಪ್ಟೆಂಬರ್ 9 ರಂದು 90 ಕ್ಕೂ ಹೆಚ್ಚು ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ. ಸೆಪ್ಟೆಂಬರ್ 10 ರಂದು 100 ಕ್ಕೂ ಹೆಚ್ಚು ಪ್ರಯಾಣಿಕ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ. ಇವುಗಳಲ್ಲಿ ಹೆಚ್ಚಿನ ರೈಲುಗಳು ದೆಹಲಿಯಿಂದ ದಕ್ಷಿಣ ಹರಿಯಾಣದ ಸೋನಿಪತ್-ಪಾಣಿಪತ್, ರೋಹ್ಟಕ್, ರೇವಾರಿ ಮತ್ತು ಪಲ್ವಾಲ್ ಮಾರ್ಗಗಳಲ್ಲಿ ಚಲಿಸುತ್ತವೆ.

 

ಇಂದಿಗೂ ನಿಗೂಢ, ಭಾರತದ ಈ ಹಳ್ಳಿಯಲ್ಲಿ ಪಕ್ಷಿಗಳ ಸಾಮೂಹಿಕ ಆತ್ಮಹತ್ಯೆ!

ಇದಲ್ಲದೆ, ದೆಹಲಿ-ರೇವಾರಿ ಎಕ್ಸ್‌ಪ್ರೆಸ್ ವಿಶೇಷ ಮತ್ತು ರೇವಾರಿ-ದೆಹಲಿ ಎಕ್ಸ್‌ಪ್ರೆಸ್ ವಿಶೇಷ ರೈಲುಗಳನ್ನು ಸೆಪ್ಟೆಂಬರ್ 11 ರಂದು ರದ್ದುಗೊಳಿಸಲಾಗುವುದು ಎಂದು ವರದಿ ತಿಳಿಸಿದೆ.

ಇದಲ್ಲದೆ, ಈ ಅವಧಿಯಲ್ಲಿ  ದೆಹಲಿ ರೈಲು ನಿಲ್ದಾಣಕ್ಕೆ ಬರಬೇಕಿದ್ದ ರೈಲುಗಳನ್ನು  ಅರ್ಧದಲ್ಲಿಯೇ ನಿಲ್ಲಿಸಲಿ ಸೂಚಿಸಲಾಗಿದೆ. ದೆಹಲಿಯಲ್ಲಿ ನಿಲುಗಡೆಯಾಗಬೇಕಾದ ರೈಲುಗಳನ್ನು ಗಜಿಯಾಬಾದ್ ಅಥವಾ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳಲ್ಲಿ ನಿಲ್ಲಿಸಲು ಮತ್ತು ಅಲ್ಲಿಂದ ಹೊಸ ಪ್ರಯಾಣ ಆರಂಭಿಸಲು ಸೂಚಿಸಲಾಗಿದೆ.

ಭಾರತವು ಸೆಪ್ಟೆಂಬರ್ 9 ಮತ್ತು 10 ರಂದು ರಾಷ್ಟ್ರ ರಾಜಧಾನಿಯಲ್ಲಿ G20 ಶೃಂಗಸಭೆಯನ್ನು ಆಯೋಜಿಸಲಾಗಿದೆ. G20 ಶೃಂಗಸಭೆಯು ಸದಸ್ಯ ರಾಷ್ಟ್ರಗಳ ನಾಯಕರು ಮತ್ತು ಆಹ್ವಾನಿತ ಅತಿಥಿ ರಾಷ್ಟ್ರಗಳ ತಂಗುವಿಕೆ ಸೇರಿದಂತೆ ಬೃಹತ್ ಕಾರ್ಯಕ್ರಮಕ್ಕಾಗಿ ಸುವ್ಯವಸ್ಥೆಗೊಳಿಸಲಾಗಿದ್ದು,  ಇತಿಹಾಸದಲ್ಲಿ ಅತಿದೊಡ್ಡ ಭಾಗವಹಿಸುವಿಕೆ ಎನ್ನಲಾಗಿದೆ.

ನಟನ ಬರ್ತಡೇ ಪಾರ್ಟಿಯಲ್ಲಿ ಡಿಕೆಶಿ ಜೊತೆ ಬಿಜೆಪಿಯ ಬಿಸಿ ಪಾಟೀಲ್ ಗಂಭೀರ ಚರ್ಚೆ, ತೀವ್ರ ರಾಜಕೀಯ ಕುತೂಹಲ

ಗ್ರೂಪ್ ಆಫ್ ಟ್ವೆಂಟಿ (G20) 19 ದೇಶಗಳನ್ನು ಒಳಗೊಂಡಿದೆ - ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುಎಸ್, ಯುಕೆ ಮತ್ತು ಯುರೋಪಿಯನ್ ಯೂನಿಯನ್. 

ಭಾರತವು ಬಾಂಗ್ಲಾದೇಶ, ಈಜಿಪ್ಟ್, ಮಾರಿಷಸ್, ನೆದರ್ಲ್ಯಾಂಡ್ಸ್, ನೈಜೀರಿಯಾ, ಒಮನ್, ಸಿಂಗಾಪುರ, ಸ್ಪೇನ್ ಮತ್ತು ಯುಎಇಯನ್ನು ಮೆಗಾ ಈವೆಂಟ್‌ಗೆ ಅತಿಥಿ ರಾಷ್ಟ್ರಗಳಾಗಿ ಆಹ್ವಾನಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗುಲಾಮಿ ಮನಃಸ್ಥಿತಿ ಬಿಡಲು 2035ರ ಗಡುವು : ಮೋದಿ
ಇಂಡಿಗೋ ವಿಮಾನ ರದ್ದತಿ ಕೊಂಚ ಸರಿ ದಾರಿಗೆ