ವಿದೇಶದಿಂದ ತವರಿಗೆ ಮರಳುತ್ತಿದ್ದಂತೆ ಉದ್ಯಮಿ ಲಲಿತ್ ಮೋದಿ ಸಹೋದರ ಅರೆಸ್ಟ್

Published : Sep 18, 2025, 08:29 PM IST
 lalit modi

ಸಾರಾಂಶ

ವಿದೇಶದಿಂದ ತವರಿಗೆ ಮರಳುತ್ತಿದ್ದಂತೆ ಉದ್ಯಮಿ ಲಲಿತ್ ಮೋದಿ ಸಹೋದರ ಅರೆಸ್ಟ್, ದೆಹಲಿ ಪೊಲೀಸರು ಲಲಿತ್ ಸಹೋದರನ ಬಂಧಿಸಿದ್ದಾರೆ. ಲಲಿತ್ ಮೋದಿ ಕುಟುಂಬಕ್ಕೆ ಸಂಕಷ್ಟ ಹೆಚ್ಚಾಗಿದೆ. ಲಲಿತ್ ಮೋದಿ ಸಹೋದನ ಬಂಧಿಸಿದ್ದೇಕೆ? ಸಮೀರ್ ಮೋದಿ ಮೇಲಿರುವ ಪ್ರಕರಣವೇನು?

ನವದೆಹಲಿ (ಸೆ.18) ಸಾವಿರಾರು ಕೋಟಿ ರೂಪಾಯಿ ವಂಚನೆ ಆರೋಪದಿಂದ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ಲಲಿತ್ ಮೋದಿ ಕುಟುಂಬಕ್ಕೆ ಸಂಕಷ್ಟ ಹೆಚ್ಚಾಗಿದೆ. ಲಲಿತ್ ಮೋದಿ ಸಹೋದರ ಸಮೀರ್ ಮೋದಿ ಅರೆಸ್ಟ್ ಆಗಿದ್ದಾರೆ. ವಿದೇಶದಿಂದ ಭಾರತಕ್ಕೆ ಮರಳುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ಸಮೀರ್ ಮೋದಿಯನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಳಿಕ ದೆಹಲಿ ಪೊಲೀಸರು ನ್ಯಾಯಾಲಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ ಪೋಲಿಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಸಮೀರ್ ಮೋದಿ ಬಂಧನವೇಕೆ?

ಸಮೀರ್ ಮೋದಿ ಹಳೇ ಪ್ರಕರಣ ಸಂಬಂಧ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅತ್ಯಾ*ರ ಪ್ರಕರಣ ಸಂಬಂಧ ಸಮೀರ್ ಮೋದಿಯನ್ನು ಬಂಧಿಸಲಾಗಿದೆ. ಮೋದಿ ಎಂಟ್ರಪ್ರೈಸರ್ ಉದ್ಯಮ ಸಾಮ್ರಾಜ್ಯದ ಎಕ್ಸಿಕ್ಯೂಟೀವ್ ಡೈರೆಕ್ಟರ್ ಆಗಿರುವ ಸಮೀರ್ ಮೋದಿ ಬರೋಬ್ಬರಿ 11,000 ಕೋಟಿ ರೂಪಾಯಿ ಮೌಲ್ಯದ ಉದ್ಯಮ ಸಾಮ್ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ. ಸಮೀರ್ ಮೋದಿ ತಂದೆ ಕೆಕೆ ಮೋದಿಯ ಉದ್ಯಮ ಸಾಮ್ರಾಜ್ಯವನ್ನು ಮಕ್ಕಳಾದ ಲಲಿತ್ ಮೋದಿ, ಚಾರು ಮೋದಿ ಹಾಗೂ ಸಮೀರ್ ಮೋದಿ ಮುನ್ನಡೆಸುತ್ತಿದ್ದಾರೆ.

ಲಂಡನ್‌: ಮಲ್ಯ, ಲಲಿತ್ ಮೋದಿ ಜತೆ ಗೇಲ್; ಬೆಂಗಳೂರು ಫ್ರಾಂಚೈಸಿ ತಗೋಳ್ತಾರಾ ಲೆಜೆಂಡ್ಸ್?

ಕಂಪನಿ ಬೋರ್ಡ್ ಸದಸ್ಯದಿಂದ ಸಮೀರ್ ವಜಾ

ಸಮೀರ್ ಮೋದಿ ಕಂಪನಿಯ ಹಲವು ನಿರ್ದೇಶಕರ ಜೊತೆ ಸಮನ್ವಯ ಸಾಧಿಸಲು ವಿಫಲರಾಗಿದ್ದರು. ಹಲವರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ಪೈಕಿ ಸ್ವಂತ ತಾಯಿ ವಿರುದ್ಧವೂ ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಕಂಪನಿಯ ಇತರ ನಿರ್ದೇಶಕರ ಸಭೆ ಸೇರಿ ಕಳೆದ ವರ್ಷ ಸಮೀರ್ ಮೋದಿಯನ್ನು ಕಂಪನಿಯ ಬೋರ್ಡ್ ಸದಸ್ಯತ್ವದಿಂದ ವಜಾ ಮಾಡಿದ್ದರು.

ಕುಟುಂಬದ ಜೊತೆ ಒಡಕು, ಸಮೀರ್‌ಗೆ ಸಂಕಷ್ಟ ಶುರು

ಕಳೆದ ವರ್ಷ ಮೇ ತಿಂಗಳಲ್ಲಿ ಕುಟುಂಬದಲ್ಲಿ ಭಾರಿ ಒಡಕು ಮೂಡಿತ್ತು. ತಾಯಿ ವಿರುದ್ಧ ಕಿತ್ತಾಡಕೊಂಡಿದ್ದ ಸಮೀರ್‌ಗೆ ಸಂಕಷ್ಟ ದಿನಗಳು ಆರಂಭಗೊಂಡಿತ್ತು. ಅನುಮತಿ ಇಲ್ಲದೆ ಬೋರ್ಡ್ ಮೀಟಿಂಗ್‌ ನಡೆಯುತ್ತಿದ್ದಾಗ ಪ್ರವೇಸ ಮಾಡಿದ್ದ ಸಮೀರ್, ಸಭೆಯಲ್ಲಿ ರಂಪಾಟ ಮಾಡಿದ್ದರು. ಇತ್ತ ಕುಟುಂಬ ಜೊತೆಗಿನ ಒಡಕೂ ಕೂಡ ತೀವ್ರ ಸಂಕಷ್ಟ ತಂದಿತ್ತು. ಮೇ31 ರಂದು ಸಮೀರ್ ಮೋದಿ ತಾಯಿ ವಿರುದ್ಧ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು.

ಕಳೆದ ಹಲವು ತಿಂಗಳಿನಿಂದ ವಿದೇಶದಲ್ಲೇ ಉಳಿದುಕೊಂಡಿದ್ದ ಸಮೀರ್ ಮೋದಿ ದಿಢೀರ್ ದೆಹಲಿಗೆ ಮರಳಿದ್ದಾರೆ. ಸಮೀರ್ ವಿರುದ್ದ ಹಳೇ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದ ದೆಹಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಸಮೀರ್ ಮೋದಿಯನ್ನು ಪೊಲೀಸರು ಬಂಧಿಸಿದ್ದಾರೆ. ನಾಳೆ (ಸೆ.18) ಸಮೀರ್ ಮೋದಿಯನ್ನು ದೆಹಲಿ ಪೊಲೀಸರು ಮತ್ತೆ ನ್ಯಾಯಾಲಕ್ಕೆ ಹಾಜರುಪಡಿಸಲಿದ್ದಾರೆ. ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ.

ಅತ್ತ ಭಾರತದ ಪಾಸ್ಪೋರ್ಟ್ ಸರೆಂಡರ್ ಮಾಡಿದ ಲಲಿತ್ ಮೋದಿಗೆ vanuvatu ಪಾಸ್ಪೋರ್ಟ್ ರದ್ದು! ಮುಂದೆ?

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ