ಜನಸಾಮಾನ್ಯರಿಗೆ ಮತ್ತೆ ಶಾಕ್, ದೇಶಾದ್ಯಂತ ಪೆಟ್ರೋಲ್ ಬೆಲೆ 5 ರೂಪಾಯಿ, ಡೀಸೆಲ್ 3 ರೂ ಏರಿಕೆ

Published : Oct 03, 2026, 01:53 PM ISTUpdated : Oct 03, 2026, 01:59 PM IST
Petrol Price

ಸಾರಾಂಶ

ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ 5 ರೂಪಾಯಿ ಹಾಗೂ ಡೀಸೆಲ್ ಬೆಲೆ 3 ರೂಪಾಯಿ ಏರಿಕೆ ಮಾಡಲಾಗಿದೆ. ಈ ಮೂಲಕ ಅಕ್ಟೋಬರ್ ತಿಂಗಳಲ್ಲಿ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟಿದೆ,

ನವದೆಹಲಿ (ಅ.03) ದೇಶದಲ್ಲಿ ಈಗಾಗಲೇ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್, ಎಲೆಕ್ಟ್ರಾನಿಕ್ಸ್, ಗೃಹಪಯೋಗಿ ವಸ್ತುಗಳ ಬೆಲೆ ಏರಿಕೆಯಾಗಿದೆ. ಅಕ್ಟೋಬರ್ ತಿಂಗಳಲ್ಲಿ ಸಾಲು ಸಾಲು ಹಬ್ಬದ ಬೆನ್ನಲ್ಲೇ ಬೆಲೆ ಏರಿಕೆ ಬಿಸಿ ಜನಸಾಮಾನ್ಯರಿಗೆ ತಟ್ಟುತ್ತಿದೆ. ಇದರ ಬೆನಲ್ಲೇ ಇದೀಗ ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ 5 ರೂಪಾಯಿ ಹಾಗೂ ಡೀಸೆಲ್‌ಗೆ 3 ರೂಪಾಯಿ ಬೆಲೆ ಏರಿಕೆಯನ್ನು ನಯಾರ ಎನರ್ಜಿ ಘೋಷಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗಿರುವ ಬೆಲೆ ಏರಿಕೆಯ ಪರಿಣಾಮ ಇದೀಗ ಜನಸಾಮಾನ್ಯರ ಮೇಲೂ ತಟ್ಟಲಿದೆ.

ಇಂದಿನಿಂದಲೇ ಬೆಲೆ ಏರಿಕೆ

ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆ ಪರಿಣಾಮ ಇದೀಗ ನಯಾರ ಎನರ್ಜಿ ಅನಿವಾರ್ಯವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿದೆ. ಶನಿವಾರ ಬೆಳಗ್ಗೆಯಿಂದಲೇ ನಯಾರಾ ಎನರ್ಜಿ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಬೆಲೆ ಏರಿಕೆ ಮಾಡಲಾಗಿದೆ. ದೇಶಾದ್ಯಂದ ನಯಾರ 7108 ಪೆಟ್ರೋಲ್ ಬಂಕ್ ಹೊಂದಿದೆ.

ಪಾಶ್ಚಿಮಾತ್ಯ ಯುದ್ಧ, ಹೋರ್ಮುಜ್ ಜಲಸಂಧಿಯಲ್ಲಿ ಹೌಥಿಗಳ ಅಬ್ಬರ, ಅಮೆರಿಕ ಹಾಗೂ ಇರಾನ್ ನಡುವಿನ ಮಾತುಕತೆ ವಿಫಲ ಸೇರಿದಂತೆ ಹಲವು ಕಾರಣಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಹಾಗೂ ತೈಲ ಪರಿಷ್ಕೃತ ಉತ್ಪನ್ನಗಳ ಬೆಲೆ ಏರಿಕೆಯಾಗಿದೆ. ಇದರ ಪರಿಣಾಮ ಚಿಲ್ಲರೆ ವ್ಯಾಪಾರಿಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ. ಸದ್ಯದ ಪರಿಸ್ಥಿತಿಯಿಂದ ಪಾರಾಗಲು, ಹಾಗೂ ಚಿಲ್ಲರೆ ವ್ಯಾಪಾರಿಗಳ ಒತ್ತಡ ಕಡಿಮೆ ಮಾಡಲು ನಯಾರಾ ಎನರ್ಜಿ ಬೆಲೆ ಏರಿಕೆ ಮಾಡಿದೆ.

ನಯಾರಾ ಪೆಟ್ರೋಲ್ ಬಂಕ್‌ನಲ್ಲಿ ಬೆಲೆ (ನಿನ್ನೆ-ಇಂದು)

  • ನಿನ್ನೆ ಪೆಟ್ರೋಲ್ ದರ ಲೀಟರ್ ಗೆ 111.20 ರೂಪಾಯಿ
  • ನಿನ್ನೆ ಡಿಸೇಲ್ ದರ ಲೀಟರ್ ಗೆ 98.80 ರೂಪಾಯಿ
  • ಇಂದು ಪೆಟ್ರೋಲ್ ದರ 116.20 ರೂಪಾಯಿ
  • ಇಂದು ಡಿಸೇಲ್ 101.80 ರೂಪಾಯಿ

ಮಾರ್ಚ್ ಬಳಿಕ ಮತ್ತೆ ಶಾಕ್ ಕೊಟ್ಟ ನಯಾರ

ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ದ ತೀವ್ರಗೊಂಡಾಗ ನಯಾರಾ ಎನರ್ಜಿ ನೇರವಾಗಿ ಪೆಟ್ರೋಲ್ ಬೆಲೆ ಏರಿಕೆ ಮಾಡಿತ್ತು. ಮಾರ್ಚ್ 26 ರಂದು ನಯಾರಾ ಎನರ್ಜಿ ಪೆಟ್ರೋಲ್ ಪ್ರತಿ ಲೀಟರ್‌ಗೆ 5 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀಟರ್‌ಗ 3 ರೂಪಾಯಿ ಏರಿಕೆ ಮಾಡಿತ್ತು. ಬಳಿಕ ಜುಲೈ 1 ರಂದು ಪರಿಸ್ಥಿತಿ ತಿಳಿಗೊಂಡ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿತ್ತು. ಈ ವೇಳೆ ನಯಾರಾ ಎನರ್ಜಿ ಪೆಟ್ರೋಲ್ ಮೇಲಿನ 5 ರೂಪಾಯಿ ಹಾಗೂ ಡೀಸೆಲ್ ಮೇಲಿನ 3 ರೂಪಾಯಿ ಕಡಿತ ಮಾಡಿತ್ತು.

ಇಂಡಿಯನ್ ಆಯಿಲ್ ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಸದ್ಯ ಯಾವುದೇ ಬೆಲೆ ಏರಿಕೆ ಮಾಡಿಲ್ಲ. ಆದರೆ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಇಂಡಿಯನ್ ಆಯಿಲ್ ಹಾಗೂ ಭಾರತ್ ಪಟ್ರೋಲಿಯಂ ಈ ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ರಿಲಯನ್ಸ್ ಇಂಡಸ್ಟ್ರಿ ಹಾಗೂ ಬಿಪಿ ಜಂಟಿ ಸಹೋಯೋಗದಲ್ಲೂ ಯಾವುದೇ ಬೆಲೆ ಏರಿಕೆ ಕುರಿತು ಘೋಷಣೆ ಮಾಡಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರೇಮಾನಂದ್ ಜಿ ಮಹಾರಾಜ್‌ರಿಂದ ದೀಕ್ಷೆ ಪಡೆದ 17 ವರ್ಷದ ಬಾಲಕ ನಾಪತ್ತೆ! ಪೊಲೀಸರ ಹೇಳಿಕೆಯಿಂದ ಕೇಸ್‌ಗೆ ಬಿಗ್ ಟ್ವಿಸ್ಟ್!
Forbes 2026: ಕರಗಿದ ಅಂಬಾನಿ ಸಂಪತ್ತು! ಮೊದಲ ಸ್ಥಾನದಲ್ಲಿ ಯಾರು? ರಾಜ್ಯದ 4 ಶ್ರೀಮಂತರಿಗೆ ಸ್ಥಾನ