ಹೇಗಿದೆ ನೋಡಿ ಅಲ್ಲು ಅರ್ಜುನ್ ಮಾವನ ‘ಪಾಲಿಟ್ರಿಕ್ಸ್‌’: RSS ಅಲ್ಲ, ಎಡ ಪಕ್ಷದ ಸಿದ್ಧಾಂತ ಫಾಲೋ ಮಾಡ್ತಿದ್ದ ಸಾವರ್ಕರ್‌?

By Suvarna NewsFirst Published Aug 20, 2023, 12:48 PM IST
Highlights

ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ಆಗಾಗ್ಗೆ ತೆರೆ ಹಿಂದೆ ನಡೆಯುತ್ತಲೇ ಇರುತ್ತದೆ. ಈ ಪೈಕಿ ಅನೇಕ ಬೆಳವಣಿಗೆಗಳು ಬೆಳಕಿಗೆ ಬರೋದೇ ಇಲ್ಲ, ಕೇವಲ ಗುಸುಗುಸು ಪಿಸುಪಿಸು ಎಂಬಂತೆ ಕೇಳಿಬರುತ್ತಿರುತ್ತದೆ. ದೇಶಾದ್ಯಂತ ಇತ್ತೀಚಿನ ಇಂತಹ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ..

ಸಾವರ್ಕರ್‌ ಕೂಡ ಕಾಮ್ರೇಡ್‌ ಅಂತೆ!
ವಿನಾಯಕ ದಾಮೋದರ್ ಸಾವರ್ಕರ್ ಅವರು ಅತಿ ಎಡ ಸಿದ್ಧಾಂತವನ್ನು ಅನುಸರಿಸುತ್ತಿದ್ದರಂತೆ. ಸಾರ್ವಜನಿಕ ಸಮಾರಂಭವೊಂದರಲ್ಲಿ ಎಲ್‌ಡಿಎಫ್‌ನ ಸಂಚಾಲಕ ಇ ಪಿ ಜಯರಾಜನ್‌ ಈ ಹೇಳಿಕೆ ನೀಡಿದಾಗ ಸಭಿಕರು ಅಪನಂಬಿಕೆಯಿಂದ ತಬ್ಬಿಬ್ಬಾದರು. `ಸಾವರ್ಕರ್ ಅವರು ಅತಿ ಎಡ ಸಿದ್ಧಾಂತವನ್ನು ಅನುಸರಿಸಿದರು. ಅವರು ಈ ಆದರ್ಶಗಳನ್ನು ಅಳವಡಿಸಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಿದರು ಮತ್ತು ಅಂಡಮಾನ್ ಜೈಲಿನಲ್ಲಿ ಕೊನೆಗೊಂಡರು. ತನ್ನ ಭವಿಷ್ಯವನ್ನು ಬಂದ್‌ ಮಾಡಲಾಗಿದೆ ಎಂದು ಅವರಿಗೆ ತಿಳಿದಿತ್ತು,’’ ಎಂದು ಭಾರತೀಯ ಇತಿಹಾಸದ ಇದುವರೆಗೆ ಕೇಳಿರದ ಅಧ್ಯಾಯಗಳ ಮೇಲೆ ಇ ಪಿ ಜಯರಾಜನ್‌ ಬೆಳಕು ಚೆಲ್ಲಿದರು.

`ಸಾವರ್ಕರ್ ಅವರು ಸೆಲ್ಯುಲಾರ್ ಜೈಲಿನಲ್ಲಿ ಕೊಳೆಯುತ್ತಿರುವಾಗ, ಹಿಂದೂ ಮಹಾ ಸಭಾ ಕಾರ್ಯಕರ್ತರು ಅವರನ್ನು ಸಂಪರ್ಕಿಸಿದರು. ಬ್ರಿಟಿಷರಿಗೆ ಲಿಖಿತ ಕ್ಷಮೆಯನ್ನು ಸಲ್ಲಿಸುವಂತೆ ಅವರು ಸಲಹೆ ನೀಡಿದರು. ಬಳಿಕ, ಸಾವರ್ಕರ್ ಅವರು ಈ ಸಲಹೆಯನ್ನು ಅನುಸರಿಸಿಜೈಲಿಂದ ಹೊರಬಂದರು’’ ಎಂದೂ ಹೇಳಿದರು.

ಇದನ್ನು ಓದಿ: ಲೋಕಸಭೆ ಚುನಾವಣೆಯಲ್ಲಿ 100 ರನ್‌ ಹೊಡೆಯಲು ಕಾಂಗ್ರೆಸ್‌ ಹರಸಾಹಸ: ವಿಪಕ್ಷಗಳಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗು ಗುರು!

ಈ ರೀತಿ ಡಾನ್ ಕ್ವಿಕ್ಸೋಟ್‌ನಂತೆ ಆಧಾರರಹಿತ ಹೇಳಿಕೆಗಳನ್ನು ಆಗಾಗ ನೀಡ್ತಿರ್ತಾರೆ ಇ ಪಿ ಜಯರಾಜನ್‌.
 
ಕೆಸಿಆರ್ vs ಕೆಸಿಆರ್!
ತೆಲಂಗಾಣ ವಿಧಾನಸಭೆ ಚುನಾವಣೆಗೆ ಮುನ್ನ ಹೀಗೊಂಡು ಕದನ ಶುರುವಾಗಿದೆ. ಇದ್ಯಾರಪ್ಪ ಇನ್ನೊಬ್ಬರು ಕೆಸಿಆರ್‌ ಅಂತೀರಾ..? ನಾಗಾರ್ಜುನ ಸಾಗರ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಪುಷ್ಪ ನಟ ಅಲ್ಲು ಅರ್ಜುನ್ ಅವರ ಮಾವ ಕೆ.ಚಂದ್ರಶೇಖರ ರೆಡ್ಡಿ ಅವರು ಸಾಮಾಜಿಕ ಕಾರ್ಯಗಳನ್ನು ಆರಂಭಿಸಲು ಕೆಸಿಆರ್ (ಕಂಚರ್ಲ ಚಂದ್ರಶೇಖರ ರೆಡ್ಡಿ) ಎಂಬ ಫೌಂಡೇಶನ್ ಆರಂಭಿಸಿದ್ದಾರೆ. ಆದರೆ, ಕೆಸಿಆರ್‌ ಅಂದ ಕೂಡಲೇ ಜನರಿಗೆ ನೆನಪಾಗೋದು ತೆಲಂಗಾಣ ಸಿಎಂ ಹಾಗೂ ಬಿಆರ್‌ಎಸ್‌ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್. ಈ ಹಿನ್ನೆಲೆ, ಇದು ಜನರಲ್ಲಿ ಗೊಂದಲ ಮೂಡಿಸ್ತಿದೆ. 

ಇದನ್ನೂ ಓದಿ: ಕೇರಳ ಮಾಜಿ ಸಿಎಂ ಸಮಾಧಿ ನೋಡೋಕೆ 2 ದಿನ ಪ್ಯಾಕೇಜ್: ಲೋಕಲ್‌ ಪ್ರಶಾಂತ್‌ ಕಿಶೋರರಿಂದ ಸೋತ ರಾಜ್ಯ ಬಿಜೆಪಿ ನಾಯಕರು!

ಸಿಎಂ ಕೆ.ಚಂದ್ರಶೇಖರ ರಾವ್ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಕಾರ್ಯದಲ್ಲಿ ನಿರತರಾಗಿರುವಾಗಲೇ ಈ ಅನುಕರಣೆ ಆಟ ನಡೆದಿದೆ. ಆದರೆ ನಾಗಾರ್ಜುನ ಸಾಗರದಲ್ಲಿ ``ಭಿನ್ನ'' ಹೆಸರನ್ನು ಇಡಲು ಸಿಎಂ ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕ್ಷೇತ್ರವನ್ನು 2018 ರಲ್ಲಿ BRS ಟಿಕೆಟ್‌ನಲ್ಲಿ ಗೆದ್ದ ನೋಮುಲಾ ನರಸಿಂಹಯ್ಯ ಪ್ರತಿನಿಧಿಸಿದ್ದರು. ಡಿಸೆಂಬರ್, 2020 ರಲ್ಲಿ ಅವರ ಮರಣದ ನಂತರ ಅವರ ಮಗ ನೋಮುಲಾ ಭಗತ್ ಉಪಚುನಾವಣೆಯಲ್ಲಿ ಗೆದ್ದರು .ಆದರೆ, ಇದೇ ಕ್ಷೇತ್ರದಿಂದ ಅಂದರೆ ನಾಗಾರ್ಜುನ ಸಾಗರದಿಂದ  ಕೆ. ಚಂದ್ರಶೇಖರ ರೆಡ್ಡಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಸಾಧ್ಯತೆಗಳನ್ನು ಹೆಚ್ಚಿಸಲು  ಅಲ್ಲು ಅರ್ಜುನ್‌ನ ಸ್ಟಾರ್‌ಡಮ್ ಬಳಸಿಕೊಳ್ತಿದ್ದಾರೆ.

ನಟ ಅಲ್ಲು  ಅರ್ಜುನ್‌ ನಲ್ಗೊಂಡದಲ್ಲಿ ಕನ್ವೆನ್ಷನ್ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ತನ್ನ ಮಾವ ಕೆ.ಚಂದ್ರಶೇಖರ ರೆಡ್ಡಿ ಬೆಂಬಲಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಕೆಸಿಆರ್ ಎಂಬ ಹೊಸ ಪ್ರತಿಷ್ಠಾನವು ನಾಗಾರ್ಜುನ ಸಾಗರ್‌ನಿಂದ ಅವರನ್ನು ಕಣಕ್ಕಿಳಿಸಲು ಬಿಆರ್‌ಎಸ್ ನಾಯಕತ್ವದ ಮೇಲೆ ಒತ್ತಡ ಹೇರುವ ಪ್ರಯತ್ನವಾಗಿಯೂ ಕಂಡುಬರುತ್ತದೆ.

ಇದನ್ನೂ ಓದಿ: ಎಡ ಪಕ್ಷದವರಿಗೆ 'ಗಣೇಶ'ನಿಗಿಂತ ಮಿಡತೆ ಮೇಲೆ ಗೌರವ: ಪೈಲಟ್‌ಗಿಲ್ಲ ಕೃತಜ್ಞತೆ; ‘ಪವರ್’ ಕಳ್ಳರ ಮೇಲೆ ಗೆಹ್ಲೋಟ್‌ ಪ್ರೇಮ!

ಪಾಠ ಕಲಿತ ಸಚಿವರು?
ರಾಜಸ್ಥಾನ ಸರ್ಕಾರದ ಎರಡನೇ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಎಂದು ಪರಿಗಣಿಸಲ್ಪಟ್ಟಿರುವ ಈ ಸಚಿವರ ಹೆಸರನ್ನು ಉಲ್ಲೇಖಿಸಿದರೆ, ಯಾವುದೇ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ ಎಂದು ಅವರು ಹೇಳುತ್ತಾರೆ. ಅವರು ತಮ್ಮ ವರ್ಚಸ್ಸು ಮತ್ತು ಶಕ್ತಿಯ ಬಗ್ಗೆ ಹೆಮ್ಮೆಪಡುತ್ತಿದ್ದರು. ಆದರೆ ಕಳೆದ ವಾರ ಈ ಸಚಿವರನ್ನು ಅವರದೇ ಪಕ್ಷದವರೇ ಕೆಣಕಿದ್ದರಿಂದ ಇದು ಬದಲಾಗಿದೆ.
ರೈಲಿನಲ್ಲಿ ಗುಂಡೇಟಿಗೆ ಬಲಿಯಾದ ವ್ಯಕ್ತಿಯ ಸಂಬಂಧಿಕರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಲು ಹೋಗಿದ್ದರು. ಆದರೆ ಅವರದೇ ಪಕ್ಷದ ಸದಸ್ಯರು ಕುಟುಂಬಕ್ಕೆ 50 ಲಕ್ಷ ನೀಡಬೇಕು ಎಂದು ಪಟ್ಟು ಹಿಡಿದರು.

ಜನಸಮೂಹವನ್ನು ಸಮಾಧಾನಪಡಿಸುವ ಅವರ ಪ್ರಯತ್ನಗಳು ವಿಫಲವಾಗಿದ್ದು,  ಈ ಅವಮಾನವನ್ನು ಸಚಿವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೊಸ ಪಾಠದೊಂದಿಗೆ ಸ್ಥಳದಿಂದ ಹಿಂತಿರುಗಿದರು.

ಇದನ್ನೂ ಓದಿ: ರಾಜ್ಯದಲ್ಲಿ ‘ಕೈ’ ಗೆಲ್ಲಿಸಿದ್ರೂ ಸುನೀಲ್‌ ಕನುಗೋಲಿಗೆ ತೆಲಂಗಾಣದಿಂದ ಗೇಟ್‌ಪಾಸ್‌: 3 ಭೂಕಂಪವಾದ್ರೂ ಇವರಿಗೆ ಎಚ್ಚರನೇ ಆಗಿಲ್ಲ!

click me!