ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನ, ಕೇವಲ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್, ಉಚಿತ ವಿದ್ಯುತ್ ಸೇರಿದಂತೆ ಜನತಗೆ ರಾಹುಲ್ ಗಾಂಧಿ ಹಲವು ಭರವಸೆ ನೀಡಿದ್ದಾರೆ. ಕಾಂಗ್ರೆಸ್‌ಗೆ ಅಧಿಕಾರ ನೀಡಿದರೆ ರಾಹುಲ್ ಗಾಂಧಿ ನೀಡಲಿರುವ ಭರಪೂರ ಕೊಡುಗೆ ವಿವರ ಇಲ್ಲಿದೆ.
ಗುಜರಾತ್(ಸೆ.05): ಗುಜರಾತ್ ಚುನಾವಣೆ ಸಮೀಪಿಸುತ್ತಿದ್ದಂತೆ ಇದೀಗ ಉಚಿತ ಕೊಡುಗೆಗಳೇ ಸದ್ದು ಮಾಡುತ್ತಿದೆ. ಇತ್ತೀಚೆಗೆ ಅರವಿಂದ್ ಕೇಜ್ರಿವಾಲ್ ಗುಜರಾತ್‌ನಲ್ಲಿ ಆಪ್ ಆಧಿಕಾರಕ್ಕೆ ಬಂದರೆ ಹಲವು ಉಚಿತ ಕೂಡುಗೆಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. ಇದೀಗ ಕಾಂಗ್ರೆಸ್ ಸರದಿ. ಗುಜರಾತ್ ಅಹಮ್ಮದಬಾದ್‌ನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪರಿವರ್ತನಾ ಸಂಕಲ್ಪ ರ್ಯಾಲಿಯಲ್ಲಿ ಪಾಲ್ಗೊಂಡು ರಾಹುಲ್ ಗಾಂಧಿ ಹಲವು ಕೊಡುಗೆ ಘೋಷಿಸಿದ್ದಾರೆ. ಇದೇ ವೇಳೆ ಬಿಜೆಪಿ ಸರ್ಕಾರದ ವಿರುದ್ದ ಹರಿಹಾಯ್ದ ರಾಹುಲ್ ಗಾಂಧಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನವ ಗುಜರಾತ್ ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ. ರಾಹುಲ್ ಗಾಂಧಿ ಭರವಸೆಗಳ ಪೈಕಿ ಪ್ರಮುಖವಾಗಿ ಉಚಿತ ವಿದ್ಯುತ್, ರೈತರ ಸಾಲ ಮನ್ನ, 500 ರೂಪಾಯಿಗೆ ಗ್ಯಾಸ್ ಸಿಲಿಂಡರ್, 10 ಲಕ್ಷ ಉದ್ಯೋಗ ಸೃಷ್ಟಿ ಸೇರಿದಂತೆ ಹಲವು ಭರವಸೆಗಳನ್ನು ರಾಹುಲ್ ಗಾಂಧಿ ನೀಡಿದ್ದಾರೆ.
ರಾಹುಲ್ ಗಾಂಧ ಗುಜರಾತ್‌ನಲ್ಲಿ ಮಾಡಿದ ಘೋಷಣೆ ವಿವರ:
ರೈತರು ಪಡೆದಿರುವ 3 ಲಕ್ಷ ರೂಪಾಯಿ ವರೆಗಿನ ಸಾಲಗಳನ್ನು ಮನ್ನಾ ಮಾಡಲಾಗುವುದು
3000 ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ತೆರೆದು ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ನೀಡಲಾಗುವುದು
500 ರೂಪಾಯಿಗೆ ಅಡುಗೆ ಗ್ಯಾಸ್ ಸಿಲಿಡಂರ್ ಲಭ್ಯ
ಹೈನುಗಾರಿಕೆಯಲ್ಲಿನ ಹಾಲು ಉತ್ಪಾದಕರಿಗೆ 5 ರೂಪಾಯಿ ಸಬ್ಸಡಿ ನೀಡಲಾವುಗುದು
ಕೋವಿಡ್‌ನಿಂದ ಮೃತಪಟ್ಟ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ
ರೈತರಿಗೆ ಸಂಪೂರ್ಣ ಉಚಿತ ವಿದ್ಯುತ್ ನೀಡಲಾಗುವುದು
ಜನಸಾಮಾನ್ಯರಿಗೆ 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡವಾಗುವುದು
ಗುಜರಾತ್ ಯುವಕರಿಗೆ 10 ಲಕ್ಷ ಉದ್ಯೋಗ ಸೃಷ್ಟಿ
Fact Check: 'ಹಿಟ್ಟು ಅಂದು ಲೀಟರ್‌ಗೆ ₹22, ಇಂದು ₹40' ಎಂದು ಹೇಳಿ ಬಳಿಕ ಸರಿಪಡಿಸಿಕೊಂಡ ರಾಹುಲ್ ಗಾಂಧಿ
ಗುಜರಾತ್ ಚುನಾವಣೆಗೆ(Gujarat Election) ಜನಪ್ರಿಯ ಘೋಷಣೆ ಮಾಡಿರುವ ರಾಹುಲ್ ಗಾಂಧಿ, ಬಿಜೆಪಿ(Gujarat BJP) ಸರ್ಕಾರದ ಆಡಳಿತವನ್ನು ಟೀಕಿಸಿದ್ದಾರೆ. ಪ್ರಧಾನಿ ಮೋದಿ(PM Narendra Modi) ರೈತರ ಸಾಲ ಮನ್ನ ಮಾಡುತ್ತಿಲ್ಲ. ಬದಲಾಗಿ ಕೈಗಾರಿಕೋದ್ಯಮಿಗಳ, ಶ್ರೀಮಂತರ ಸಾಲ ಮನ್ನಾ ಮಾಡುತ್ತಿದ್ದಾರೆ. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಸರ್ಕಾರ ಈಗಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನವ ಗುಜರಾತ್ ನಿರ್ಮಾಣವಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಚುನಾವಣಾ ರ್ಯಾಲಿ(Congress Election Rally) ಬಳಿಕ ಸಬರಮತಿ ಆಶ್ರಮಕ್ಕೆ ತೆಳಿದ ರಾಹುಲ್ ಗಾಂಧಿ, ಮಹಾತ್ಮಾ ಗಾಂಧಿ ಆಶ್ರಮದಲ್ಲಿ ಕುಳಿತು ಪ್ರಾರ್ಥಿಸಿದರು. ಭಾರತ್ ಜೋಡೋ ಯಾತ್ರೆಗೆ(bharat jodo yatra) ಆಶೀರ್ವಾದ ಬೇಡಿರುವುದಾಗಿ ಹೇಳಿದ್ದಾರೆ.
Congress Protest: ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ರಣಕಹಳೆ
ಭಾರತ್ ಜೋಡೋ: ರಾಹುಲ್‌ಗೆ ರಾಷ್ಟ್ರಧ್ವಜ ಹಸ್ತಾಂತರಿಸಲಿರುವ ಸ್ಟಾಲಿನ್
ಭಾರತ್ ಜೋಡೋ ಯಾತ್ರೆಗೂ ಮುನ್ನ ಸೆ.7ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ರಾಷ್ಟ್ರಧ್ವಜ ಹಸ್ತಾಂತರಿಸುವ ಮೂಲಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಸಭೆ ಶ್ರೀಪೆರಂಬದೂರಿನಲ್ಲಿರುವ ರಾಜೀವ್ ಗಾಂಧಿ ಸ್ಮಾರಕ ಭವನದಲ್ಲಿ ನಡೆಯಲಿದೆ. ಇದಾದ ನಂತರ ಮಹಾತ್ಮ ಗಾಂಧಿ ಮಂಟಪದಿಂದ ಸ್ಟಾಲಿನ್ ಸೇರಿದಂತೆ ಇತರ ಕಾಂಗ್ರೆಸ್ ನಾಯಕರ ಜೊತೆಗೆ ಯಾತ್ರೆ ಉದ್ಘಾಟಿಸುವ ಸ್ಥಳದತ್ತ ಪಾದಯಾತ್ರೆ ನಡೆಸಲಿದ್ದಾರೆ ಎಂದು ಅವು ತಿಳಿಸಿವೆ. ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ ಹಮ್ಮಿಕೊಳ್ಳಲಾಗಿರುವ ಸುಮಾರು 3,570 ಕಿ.ಮೀ ಉದ್ದದ ಪಾದಯಾತ್ರೆಗೆ ಸೆ.8ರಂದು ರಾಹುಲ್ ಗಾಂಧಿ ಚಾಲನೆ ನೀಡಲಿದ್ದಾರೆ. ಸೆ.11ರಂದು ಕೇರಳ ತಲುಪುವ ಯಾತ್ರೆ, ಸೆ.30ರಂದು ಕರ್ನಾಟಕಕ್ಕೆ ತಲುಪಲಿದೆ.